Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ಎಚ್‌.ಡಿ. ಕುಮಾರಸ್ವಾಮಿಗೆ ಹುಟ್ಟುಹಬ್ಬದ ಸಂಭ್ರಮ; ಕಿಚ್ಚ ಸುದೀಪ್‌ ಹೇಳಿದ್ದೇನು?

ಎಚ್‌.ಡಿ. ಕುಮಾರಸ್ವಾಮಿಗೆ ಹುಟ್ಟುಹಬ್ಬದ ಸಂಭ್ರಮ; ಕಿಚ್ಚ ಸುದೀಪ್‌ ಹೇಳಿದ್ದೇನು?

ಜೆಡಿಎಸ್‌ ರಾಧ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇಂದು 59 ನೇ ಹುಟ್ಟುಹಬ್ಬದ ಸಂಭ್ರಮ.

ಕುಮಾರಸ್ವಾಮಿ ಅವರ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್‌ ಶುಭ ಕೋರಿರುವುದು ವಿಶೇಷ ಎನಿಸಿದೆ. ‘ಹ್ಯಾಪಿ ಬರ್ತ್​​​​​​ ಡೇ ಕುಮಾರಣ್ಣ. ನಿಮಗೆ ಆರೋಗ್ಯ ಆಯಸ್ಸು ಜಾಸ್ತಿ ಜಾಸ್ತಿ ಸಿಗಲಿ’ ಎಂದು ವಿಡಿಯೋ ಮೂಲಕ ಸುದೀಪ್‌ ಶುಭಾಶಯ ತಿಳಿಸಿದ್ದಾರೆ.

ಜೆ.ಪಿ.ನಗರದ ನಿವಾಸದಲ್ಲಿ ಅಭಿಮಾನಿಗಳ ಜತೆ ಕೇಕ್‌ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಎಚ್‌ಡಿಕೆ ಆಚರಿಸಿಕೊಂಡರು. ಎಚ್‌ಡಿಕೆ ಪುತ್ರ ನಿಖಿಲ್‌, ಜೆಡಿಎಸ್‌ ಶಾಸಕರು ಮತ್ತು ಪರಿಷತ್‌ ಸದಸ್ಯರು, ಜೆಡಿಎಸ್‌ ಕಾರ್ಯಕರ್ತರು ಭಾಗವಹಿಸಿ ಕುಮಾರಸ್ವಾಮಿ ಅವರಿಗೆ ಶುಭ ಕೋರಿದರು.

ನಂತರ ಮಾತನಾಡಿದ ಕುಮಾರಸ್ವಾಮಿ, ಕಾರ್ಯಕರ್ತರ ಜತೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಸಂತಸ ತಂದಿದೆ ಎಂದು ಹೇಳಿದರು.

ದಂಪತಿ ಸಮೇತ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ರಾಜರಾಜೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ದೇವರು ಎಚ್​​ಡಿಕೆಗೆ ಆಯುರಾರೋಗ್ಯ ನೀಡಲಿ, ಎಚ್​​ಡಿಕೆ ಮುಂದಿನ ಬಾರಿ ಸಿಎಂ ಆಗಲಿ ಎಂದು ಅನಿತಾ ಕುಮಾರಸ್ವಾಮಿ ಪ್ರಾರ್ಥನೆ ಸಲ್ಲಿಸಿದರು.

 

Leave a Reply