Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Siri Exclusive > ಸೃಷ್ಟಿ

ಸೃಷ್ಟಿ

[CooL GuY] {{a2zRG}}

[CooL GuY] {{a2zRG}}


“ಏಕ ಇಂದ್ರಾ, ಏಕ ಬ್ರಹ್ಮಾ, ಏಕ ಪ್ರಜಾ ಪತಿ, ಏಕೇ ಸರ್ವ ದೇವಾಃ ಇಮಾನಿಚ ಪಂಚ ಭೂತಾನಿ ಪೃಥ್ವೀ ವಾಯು ರಾಕಾಶ ಅಪೋ ಜ್ಯೋತಿಂ —- ಇಮಾನಿಚ ಕ್ಷುದ್ರ ಮಿಶ್ರಜೀವ ಬೀಜಾನಿತರಾಣಿ ಚೇತರಾಣಿಚ, ಅಂಡಾನಿಚ ಜಾರುಚಾನಿಚ, ಉದ್ಬಿಚ್ಚಾನಿಚ ಅಶ್ವಾಗಾವಃ ಪುರುಷಾ ಹಸ್ತಿನೋ ಯತ್ಕಿಂಚೇದುಪ್ರಾಣಿ. ಜುಗಮಂಚ ಪತಕ್ರಿಚ ಯಚ್ಚಸ್ಥಾ ನರಂಸರ್ವಂತತ್, ಪ್ರಜ್ಞಾ ನೇತ್ರ ಪ್ರಜ್ಞಾನೀ ಪ್ರತಿ ವೃತು ಪ್ರಜ್ಚಾನೇತ್ರೋ ಲೋಕಃ ಪ್ರಜ್ಞಾ ಪ್ರತಿಷ್ಠಾ ಪ್ರಜ್ಞಾ ಬ್ರಹ್ಮ”
ಅಧಿ ದೇವದಲ್ಲಿ ಈ ಚತುಮುಖ, ಈ ಇಂದ್ರ, ಈ ರುದ್ರ, ಇತ್ಯಾದಿ ದೇಚತೆಗಳು ಅಧಿ ಭೂತದಲ್ಲಿಯೂ ಪೃಥ್ವಿ, ವಾಯು, ಆಕಾಶ, ಜಲ, ತೇಜಸ್ಸು ಎಂಬ ಈ ಪಂಚ ಮಹಾ ಭೂತಗಳ ಅಭಿಮಾನಿ ದೇವತೆಗಳು, ಈ ಮೋಕ್ಷಯೋಗ್ಯ ಚೇತನಿರಿಗಿಂತ ಭಿನ್ನಾ ರಾದ ಪುಣ್ಯ ಪಾದ ಮಿಶ್ರಿತ ಕ್ಷುದ್ರ ಜಂತುಗಳಾದ ಮನುಷ್ಯ ಸ್ವಭಾವಾದ ನಿತ್ಯ ಸಂಸಾರಿ ಜೀವವು ಇವರಿಗಿಂತಲೂ ಬೇರಿಯಾದ ಅಸುರ ಸ್ವಭಾವಾದ ಜೀವವು ಹೀಗೆ ಮೂರು ಬಗೆಯಾಗಿದ್ದು ನಾನಾ ಬೀಜಗಳಂತೆ ನಾನಾ ಸ್ವಭಾವ ಗುಣಗಳನ್ನು ಹೊಂದಿರುವ ಚೇತನರು ಮೊಟ್ಟೆಯಿಂದ ಹುಟ್ಟು ಹಕ್ಕಿ, ಹಾವು ಇತ್ಯಾದಿಗಳು ಮಾಸು ಚೇಲದಲ್ಲಿ ಹುಟ್ಟುವ ಮನುಷ್ಯ ಪಶು ಮುಂತಾದವು, ನೆಲವನ್ನು ಬೇಧಿಸಿ ಬರುವ ಗಿಡಮರ ಬಳ್ಳಿ ಮುಂತಾದವು ದೇವತೆಗಳ ಮನಸ್ಸು ಮುಂತಾದವುಗಳಿಂದ ಹುಟ್ಟಿದ ಗೋವು, ಕುದುರೆ, ಮನುಷ್ಯ ಆನೆ, ಹಕ್ಕಿ ಇತ್ಯಾದಿ ಸ್ಥಾವರ ಜನಿಸವಾದಿ ಚೇತನಗಳು ಹೀಗೆ ಇವೆಲ್ಲವೂ ಪರಮಾತ್ಮನ ಅಧೀನವಾಗಿರುವುವು, ಹೀಗೆ ನಾನಾ ವಿಧವಾದ ಯೋನಿಗಳಲ್ಲಿ ಜನ್ಮ ಪಡೆಯುವ ಚೇತನಗಳನ್ನು ಶ್ರೀ ಮಹಾತೇತತೀಯೋ ಪನಿಷತ್ತಿನಲ್ಲಿ ವಿಷದೇ ಕರಿಸಲಾಗಿದೆ.

ಗರ್ಭಾವಸ್ಥೆಯನ್ನು ಶ್ರೀ ಮಹಾತೇತ್ತರೇಯೋ ಪನಿಷತ್ತಿನಲ್ಲಿ ಹೀಗೆ ವರ್ಣಿಸಲಾಗಿದೆ.
“ಓಂ ಪುರುಷೇಹ ವಾ ಆಯಮಾದಿ ತೋಗರ್ಭೋವತಿ!
ಯಚೀತತ್ ಕೀತ ಸ್ತದೇತತ್ ಸರ್ವೇಭೋಂಗೇ ಭ್ಯಾಸ್ಥೇಜಃ ಸಂಭೂತಂ!
ಆತ್ಮ ನ್ಯೇ ವಾತ್ಮಾನಾಂಬಭರ್ತಿ ತದ್ಯದಾಸ್ತೀಯಾಂ ಸಿಂಚತಿ!
ಅಥೈನಜ್ಜನಯತಿ! ಕದಸ್ಯ ಪ್ರಥಮಂ ಜನ್ಮ”! ಇತ್ಯಾದಿ.

ಜೀವರೂಪಿ ನಾರಾಯಣನು ಮೊದಲಿಗೆ ಧನ ಧಾನ್ಯಾದಿ ಆಹಾರ ರೂಪದಲ್ಲಿದ್ದು, ಪಿತೃಸ್ವರೂತಿ ಪುರುಷನಲ್ಲಿ ಅಂತರ್ಗತನಾಗುತ್ತಾನೆ. ಉಂಡ ಅನ್ನವು ಸರ್ವಾಂಗಗಳಲ್ಲಿ ರಕ್ತವಾಗಿ ವ್ಯಾಪಿಸಿ ಸರ್ವಾಂಗಗಳಲ್ಲಿ ತೇಜೋರೂಪ ರೇತಸ್ಯಗುತ್ತದೆ. ಆಗ ಆ ರೇತಸ್ಸಿನಲ್ಲಿರುವ ಭಾಗವ ದೂಪವು ಪುರುಷನು ಸ್ತ್ರೀಯಲ್ಲಿ ಸಂಗಮಿಸುವಾಗ ಮಾತ್ರ ಗರ್ಭದಲ್ಲಿ ಪ್ರಾದುರ್ಭಾವಗೊಳ್ಳುತ್ತದೆ. ಹೀಗೆ ಪ್ರತಿಯೊಂದು ಗರ್ಭದಲ್ಲಿರುವ ವಿಶ್ವ ಶಕ್ತಿಯೇ ಆಕಾರ ಪಡೆದು ಚೈತ್ಯನ್ಯ ರೂಪಿಯಾಗಿ ಹುಟ್ಟುತ್ತದೆ ಎಂಬುದು ಉಪನಿಷತ್ ಉಕ್ತಿ.
ಈ ಧನ ಧಾನ್ಯಾದಿ ಅನ್ನವು ಪಂಚ ಮಹಾಭೂತಗಳ ಸಮ್ಮಿಲನಾದ ಫಲ ಎಂದು ಭಾವಿಸಿದಾಗ ದೇಹವೆಂಬುದು ಪಂಚ ಮಹಾ ಭೂತಗಳಿಂದಾದ ಒಂದು ಚೈತ್ಯನ್ಯ ಶಿಲ್ಪ ಎಂಬುದಾಗಿ ಭಾವಿಸಬಹುದಾಗಿದೆ. ಆದರೆ ಇಷ್ಟು ಮಾತ್ರದಿಂದಲೇ ಗರ್ಭಕ್ರಿಯೆ ಪರಿಪೂರ್ಣಲಾಗಲಾರರು. ಬ್ರಹ್ಮಾಂಡದ ಮೂಲ ದವ್ಯವಾದ ಅವಿಚ್ಚಿನ್ನ ಸೃಷ್ಟಿ ಚೈತನ್ಯವೊಂದು ಆತ್ಮವಾಗಿ ಈ ಜೀವವನ್ನು ಸೇರಿಕೊಳ್ಳುತ್ತದೆ. ಎಂಬುವುದು ನಮ್ಮ ನಂಬಿಕೆಯಾಗಿದೆ. ಈ ಸೃಷ್ಟಿ ಚೈತನ್ಯವೇ ಪರಮಾತ್ಮ ಎಂಬುದಾಗಿ ತಿಳಿಯಬಹುದು. ಪರಮಾತ್ಮನು ತನ್ನದೇ ಚೈತನ್ಯವನ್ನು ಬ್ರಹ್ಮಾಂಡದಲ್ಲಿ ವಿವಿಧ ವಸ್ತುಜೀವಿಗಳಾಗಿ ಪುನರ್ ಸೃಷ್ಟಿಸಿದ ಎಂಬ ನಂಬಿಕೆಯನ್ನು ಇಂದಿನ ವಿಜ್ಞಾನವೂ ಪರಮಾಣು ಸಿದ್ಧಾಂತಗಳು ಮೂಲಕ ಶಾಸ್ತ್ರೋಕ್ತವಾಗಿ ಹೇಳಕೊಡದೆ ಯಾವುದೇ ಒಂದು ಭೌತ ವಸ್ತುವಿನ ಎಲೆಕ್ಟ್ರಾನ್ ನ್ಯೂಟ್ರಾನ್ ಪ್ರೋಟಾನ್ ಕಣಗಳ ಮೊತ್ತ ಮತ್ತೊಂದು ಭೌತ ವಸ್ತುವಿನ ಕಣಗಳ ಸಂಖ್ಯೆಗೆ ಸಾಲಿಯಾಗುವುದಿಲ್ಲ.
ಗರ್ಭದಲ್ಲಿರುವ ಭ್ರೂಣವು ತಾಯಿಯ ರಕ್ತದಲ್ಲಿರುವ ಆಹಾರ ಪಾನೀಯಗಳ ಮೂಲಕ ಬೆಳೆಯುತ್ತದೆ. ತಾಯಿ ಮತ್ತು ತಂದೆ ಇಬ್ಬರ ಗುಣಾವರ್ಗುಣಗಳನನ್ನು ಗರ್ಭೀಕರಿಸಿಕೊಂಡು ಭಿನ್ನವಾಗಿ ಬೆಳೆಯುತ್ತದೆ. ತಂದೆಯ ಗುಣವೂ ಹೌದು ತಾಯಿಯ ಗುಣವೂ ಹೌದು ಆದರೆ ಇಬ್ಬರು ಗುಣವೂ ಅಲ್ಲ ಇಬ್ಬರಿಂದ ಪಡೆದ ಗುಣಗಳ ಒಟ್ಟಾರೆ ಮೊತ್ತವಾಗಿ ಬೇರೆಯದೇ ಘಟಕವಾಗಿರುತ್ತದೆ. ಇದನ್ನೇ ವಿಜ್ಞಾನ ಡಿ.ಎನ್.ಎ. ಕಣಗಳು ಎನ್ನುತ್ತದೆ. ಬೇರೆ ಬೇರೆ ಬಣ್ಣಗಳ ಸಂಯೋಗದಿಂದ ಇನ್ನೊಂದು ಬಣ್ಣ ಮೇದಾಳುವಂತೆ ಅವುಗಳಂತೆ ಜೀವ ಸೃಷ್ಟಿಯ ಕ್ರಿಯೆಯ ವಿಸ್ಮಯಭರಿತವಾದದ್ದು ತಾಯಿಯ ಸೇವಿಸುವ ಆಹಾರ ಆಕೆಯು ಪಡುವ ಮಾನಸಿಕ ಏರಳಿತಗಳು ಆಕೆಯ ಇರುವ ಪರಿಸರ ಹೀಗೆ ಭ್ರೂಣದ ಬೆಳವಣೀಗೆಯಲ್ಲಿ ಬಾಹ್ಯ ಸಂಘಟನೆಗಳು ಸಹ ಮಹತ್ವದ ಪಾತ್ರವಹಿಸುತ್ತದೆ. ಸುಭದ್ರೆಯು ಗರ್ಭಿಣಿಯಾಗಿರುವಾಗ ಕೃಷ್ಣನು ಆಕೆಗೆ ಚಕ್ರವ್ಯೂಹ ಪ್ರವೇಶದ ವಿಧಾನಗಳನ್ನು ಹೇಳುತ್ತಿದ್ದನಂತೆ. ಇದನ್ನು ಕೇಳುವಾಗ ಆಕೆ ನಿದ್ರಾವಶಾಳಾದಳು. ಆಗ ಗರ್ಭದಿಂದ ಅಭಿಮನ್ಯು ……………. ಕೊಡಗಿದೆ ಎಂಬುದನ್ನು ಮಹಾಭಾರತದ ಕತೆ ತಿಳಿಸುತ್ತದೆ. ಪ್ರಹ್ಲಾದನು ಕಯಾದುವಿನ ಗರ್ಭದಲ್ಲಿದ್ದಾಗ ನಾರದರು ಹೇಳಿದ ನಾರಾಯಣನ ಮಹಿಮೆಯಿಂದ ಶ್ರೀ ಹರಿಯ ಪರಮಭಕ್ತನಾಧ ಪ್ರಹ್ಲಾದ ಇದನ್ನು ಕೇಳುವ ಕತೆ ಎಂದು ತಳ್ಳಿಹಾಕಲಾಗದು. ಗರ್ಭದಲ್ಲಿರುವ ಶಿಶುವು ಬಾಹ್ಯ ಪ್ರೇರಣೆಗಳಿಗೆ ಸ್ಪಂದಿಸುತ್ತದೆ. ಎಂಬುದನ್ನು ಈಗಿನ ವಿಜ್ಞಾನವು ಪ್ರಯೋಗ ಪೂರ್ವಕವಾಗಿ ಒಪ್ಪುತ್ತದೆ. ಹೀಗಾಗಿಯೇ ಇರಬೇಕು ಗರ್ಭಿಣಿ ಸ್ತ್ರೀಯರು ಶಬ್ಧ ಮಾಲಿನ್ಯದಿಂದ ದೂರವಿದ್ದು ಉತ್ತಮ ಪರಿಸರದಲ್ಲಿರಬೇಕೆಂದು ವೈದ್ಯರು ಸಲಹೆ ಮಾಡುತ್ತಾರೆ. ವಾತಾವರಣದ ಅತಿಶಾಕದಿಂದ ಮೊಟ್ಟೆಗಳು ಅವಧಿಗೆ ಮುನ್ನವೇ ಒಡೆಯುವುದು ಅಥವಾ ವಿಕೃತ ಉರಿಯ ಜನನಗಳನ್ನು ಸಾಮಾನ್ಯವಾಗಿ ನೋಡುತ್ತೇವೆ. ಅತಿಯಾದ ಮಾನಸಿಕ ಒತ್ತಡದಿಂದಾಗಿ ಗರ್ಭಿಣಿಯರು ಅವಧಿಗೆ ಮುನ್ನವೇ ಪ್ರಸವಿಸುವುದು ಅಥವಾ ಗರ್ಭಸ್ರಾವವಾಗುವುದು ಇದೆಲ್ಲಕ್ಕೂ ಬಾಹ್ಯಪ್ರೇರಣೆಯೋ ಮೂಲ ಎನ್ನುವುದರಿಂದ ಯಾವ ಅನುಮಾನವೂ ಇಲ್ಲ.
ಸಾಮಾನ್ಯವಾಗಿ ತಾಯಿಯ ಗರ್ಭದಿಂದ ಹೊರಬರುವ ಘಳಿಗೆಯನ್ನು ಜನನಸಮಯ ಎನ್ನಲಾಗುತ್ತದೆ. ಇದು ಕೇವಲ ಜಡ ದೇಹದ ಜನ್ಮಘಳಿಗೆಯೇ ವಿನಹ ಆದೇಹವನ್ನು ಧರಿಸಿರುವ ಆತ್ಮದಲ್ಲ. ಪುರುಷನ ರೇತಸ್ಸು ಸ್ತ್ರೀ ಯ ಅಂಡಾಶಯದಲ್ಲಿ ಮಿಳಿತ ಫಲಿತವಾತ ಘಳಿಗೆಯಲ್ಲಿಯೋ ಆಕೆಯ ಶರೀರದೊಳಕ್ಕೆ ಮಗುವಿನ ಶರೀರವನ್ನು ಹೊಂದಿಕೊಳ್ಳುತಕ್ಕ ಆತ್ಮನ ಪ್ರವೇಶವು ಆಗಿರುತ್ತದೆ. ಎಂಬುದಾಗಿ ಋಗ್ವೇದ ತಿಳಿಸುತ್ತದೆ. ಅದೇನೇ ಇದ್ದರೂ ಸಕಲ ಜೀವ ರಾಶಿಗಳಲ್ಲಿ ಅತ್ಯಂತ ಉತ್ಕøಷ್ಟವಾದದ್ದು ಮಾನವ ಜನ್ಮ ಎಂಬ ಅಭಿಪ್ರಾಯವಿದೆ. ಏಕೆಂದರೆ ಇತರೆ ಪ್ರಾಣಿಗಳಿಗಿಂತ ಈತನು ತುಂಬಾ ಭಿನ್ನನಾಗಿದ್ದಾನೆ. ಒಳಿತು ಕೆಡುಕುಗಳನ್ನು ವಿಮರ್ಶೆಮಾಡಿ ಪಾಪ ಪುಣ್ಯಗಳನ್ನು ತಿಳಿಯಬಲ್ಲವನಾಗಿದ್ದಾನೆ. ದೇವತೆಗಳ ನಂತರ ಮಾನವನೆ ಉತ್ಕøಷ್ಟ ಜೀವಿ ಎನ್ನಲಾಗುತ್ತದೆ. ಪಿತರೆಯೋಸ ನಿಷತ್‍ನಲ್ಲಿ ದೇವತೆಗಳ ಹುಟ್ಟಿನ ಬಗ್ಗೆ ಕುತೂಹಲಕಾರಿ ವಿಷಯಗಳಿವೆ.

ಬ್ರಹ್ಮನ ಶರೀರದಲ್ಲಿ ಅಂಗಗಳನ್ನು ಸೃಜಿಸಲು ಬಯಸಿದನು. ಆಗ ಶರೀರದಲ್ಲಿ ಅಂಡಾಕಾರದಲ್ಲಿ ಮುಖಹುಟ್ಟಿತು. ಬಳಿಕ ಮುಕದಲ್ಲಿ ಬಾಯಿಯೂ ವಾಗಿಂದ್ರಿಯವಾದ ನಾಲಿಗೆಯೂ ಹುಟ್ಟಿತು. ಅವುಗಳಲ್ಲಿ ಮೊದಲಿಗೆ ಆಧ್ಯತ್ಮದಲ್ಲಿ ವಾಕ್ ನಾಮಕವಾಗಿಯೂ ಅನಂತರ ಅಧಿ ದೈವ ಅಗ್ನಿ ನಾಮಕವಾಗಿಯೂ ವಹ್ನಿ ಹುಟ್ಟಿದನು. ಮೂಗು ಮತ್ತು ಪ್ರಾಣೇಂದ್ರಿಯಗಳೂ ಶ್ವಾಸವಾಯುವೂ ಹುಟ್ಟಿತು. ಅವುಗಳಿಂದ ಮೊದಲಿಗೆ ಆಧ್ಯತ್ಮದಲ್ಲಿ ಪ್ರಾಣನಾಮನಾಗಿಯೂ ಅನಂತರ ಅಧಿ ದೈವದಲ್ಲಿ ವಾಯು ನಾಮಕನಾಗಿಯೂ ವಾಯುವೂ ಹುಟ್ಟಿದ್ದನು. ಕಣ್ಣುಗಳು ಚಕ್ಷುರಿಂದ್ರಿಯವೂ ಹುಟ್ಟಿತು. ಅವುಗಳಿಂದ ಆಧ್ಯಾತ್ಮದಲ್ಲಿ ಚಕ್ಷುರ್ನಾಕನಾಗಿ ಅಧಿ ದೈವದಲ್ಲಿ ಆದಿತ್ಯನಾಮಕವಾಗಿ ಸೂರ್ಯ ಹುಟ್ಟಿದನು. ಶ್ರೋತ್ರೇಂದ್ರಿಯ ಕಿವಿಗಳು ಹುಟ್ಟಿದವು. ಅವುಗಳಿಂದ ಆಧ್ಯಾತ್ಮದಲ್ಲಿ ಶ್ರೋತ್ರನಾಮಕನಾಗಿ ಅಧಿ ದೈವದಲ್ಲಿ ದಿಕ್ ನಾಮಕರಾಗಿ ಮಿತ್ರಾದಿಗಳು ಹುಟ್ಟಿದರು. ಚರ್ಮವೂ ರೋಮವು ದೃಗಿಂದ್ರಯವೂ ಹುಟ್ಟಿದವು. ಅವುಗಳಿಂದ ಆಧ್ಯತ್ಮದಲ್ಲಿ ರೋಮನಾಟುಕರಾಗಿ ಅಧಿ ದೈವದಲ್ಲಿ ಓಷಧಿ ವನಸ್ಪತಿ ನಾಮಕರಾಗಿ ಪಾರಿಜಾತಾದಿ ದೇವತೆಗಳು ಹುಟ್ಟಿದರು. ಹೃದಯವೂ ಮನಸ್ಸು, ಇಂದ್ರಿಯಗಳೂ ಹುಟ್ಟಿದವು. ಅವುಗಳಿಂದ ಆಧ್ಯಾತ್ಮ ಮನೋನಾಮಕರಾಗಿ ಅಧಿ ದೈವದಲ್ಲಿ ಚಂದ್ರಾದಿ ನಮಕರಾಗಿ ಚಂದ್ರಾದಿಗಳು ಹುಟ್ಟಿದವು. ನಾಭಿಯು ಹುಟ್ಟಿತು. ಅದರಿಂದ ಅಸ್ವಾ ನಾಮಕರಾಗಿ ಅಧಿ ದೈವದಲ್ಲಿ ಮೃತ್ಯು ನಾಮಕರಾಗಿ ಮುಖ್ಯವಾಯುವು ಹುಟ್ಟಿದನು. ಶಿಶ್ನವು ಹುಟ್ಟಿತು, ಮರ್ಮಾಂಗಳು ಹುಟ್ಟಿದವು. ಅದರಿಂದ ಆಧ್ಯಾತ್ಮದಲ್ಲಿ ರೇತೋ ನಾಮಕನಾಗಿ ಅಧಿ ದೈವದಲ್ಲಿ ‘ಅಸ್’ ನಾಮಕನಾಗಿ ಶಿವನು ಹುಟ್ಟಿದನು. ಹೀಗೆ ಶರೀರದ ಅಂಗಾಂಗಳು ಮತ್ತು ಅವುಗಳ ಶಕ್ತಿ ಸಾಮಥ್ರ್ಯಗಳಿಗೆ ಅನುಸಾರವಾಗಿ ಅವುಗಳಿಗೆ ದೈವತ್ವದ ಅರೋಪ ನಿಜಕ್ಕೂ ಕುತೂಹಲಕಾರಿಯಾಗಿದೆ. ಭಾರತೀಯ ಪುರಾಣಗಳು, ವೇದಗಳು, ಶಿಕ್ಷಾನಿರುತ್ತಾ, ವ್ಯಾಕರಣ ಕಲ್ಪಗಳಲ್ಲಿ ಕೇಳಿರುವಂತೆ ಪ್ರತಿಯೊಂದು ಅಧಿ ದೈವಗಳಿಗೂ ಅವುಗಳದೇ ಶಕ್ತಿಗಳನ್ನು ಹೇಳಲಾಗಿದೆ. ಶ್ವಾಸವಾಯುವೂ ಮುಖ್ಯ ಪ್ರಾಣನಾದರೆ ಚಕ್ಷುರಿಂದ್ರಿಯವೂ ಸೂರ್ಯನಾಗಿದ್ದಾನೆ.

ಕೂರ್ಮ ಪುರಾಣದಲ್ಲಿ ಹೇಳಿದಂತೆ “ಏಕಸ್ತಥಾ ಭೂತಾಂತರಾತ್ಮಾ ರೂಪಂ ರೂಪಂ ಪ್ರತಿ ರೂಪೋ ಬಭೂವ” ಭಗವಂತನೂ ಒಬ್ಬನೇ ಆಗಿದ್ದರೂ ಅನೇಕರೂ ಸಮಳ್ಳವನಾಗಿದ್ದಾನೆ.
ಈಶೋಸನಿಷತ್‍ನಲ್ಲಿ ಪ್ರಣೀತವಾಗಿರುವಂತೆ ಶರೀರವೆಂಬ ಉಂದಲ್ಲಿ ಎರಡು ಹಕ್ಕಿಗಳಂತೆ ಜೀವನ ಪರಮಾತ್ಮನೂ ವ್ಯಾಪಿಸಿದ್ದಾರೆ. ಜೀವನಾತ್ಮರು ಪರಮಾತ್ಮನ ಅಧೀನರಾಗಿ ಕರ್ಮಾನುಸಾರ ಸುಖ ದುಃಖಗಳಿಗೆ ಭಾಜನರಾಗುತ್ತಾರೆ. ಒಂದೇ ಶರೀರದಲ್ಲಿರುವ ಜೀವಾತ್ಮ ಪರಮಾತ್ಮರ ಸಂಭಂದ ಇದಾಗಿದೆ. ಪಾಪ ಪುಣ್ಯನುಸಾರ ಆತ್ಮನು ಮತ್ತೆ ಮತ್ತೆ ನಾನಾ ಗರ್ಭಗಳನು ಸೇರಿ ಮತ್ತೆ ಮತ್ತೆ ಹುಟ್ಟುತ್ತಾನೆ ಎಂಬ ನಂಬಿಕೆ ನಮ್ಮ ಭಾರತೀಯರದು “ ಪುನರ ಪಿಜನ ನಂ ಪುನರಸಿಮರಣಂ ಪುನರಪಿಜನನಿ ಜಠರೇಶಯನಂ” ಎಂಬುದು ಶಂಕುಭಗತ್ಪಾದರ ಮೋಹಮುದ್ಗಂದ ಅಂಶವಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ….

Leave a Reply