Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ಹನಿಮೂನ್ ಮುಗಿಸಿಕೊಂಡು ದಿಲ್ಲಿ ತಲುಪಿದ ವಿರುಷ್ಕಾ

ಹನಿಮೂನ್ ಮುಗಿಸಿಕೊಂಡು ದಿಲ್ಲಿ ತಲುಪಿದ ವಿರುಷ್ಕಾ

ನೂತನ ದಾಂಪತ್ಯಕ್ಕೆ ಅಡಿಯಿಟ್ಟ ವಿರುಷ್ಕಾ ಜೋಡಿ ಭಾರತಕ್ಕೆ ಮರಳಿದೆ. ಡಿಸೆಂಬರ್ 11ರಂದು ಇಟಲಿಯಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆದಿದ್ದು ಗೊತ್ತೆ ಇದೆ. ಆ ಬಳಿಕ ಈ ಜೋಡಿ ಹನಿಮೂನ್‌ನಲ್ಲಿ ಮೂಡ್‌ನಲ್ಲಿ ಮಗ್ನವಾಗಿತ್ತು. ಇತ್ತೀಚೆಗೆ ಇವರು ವಿದೇಶಿ ಪ್ರವಾಸ ಮುಗಿಸಿಕೊಂಡು ಭಾರತ ತಲುಪಿದ್ದಾರೆ.

ಸದ್ಯಕ್ಕೆ ಇವರು ಕುಟುಂಬಿಕರ ನಡುವೆ ತಮ್ಮ ಅತ್ಯಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಈಗ ಅಂತರ್ಜಾಲದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ವಿರುಷ್ಕಾ ಜೋಡಿ ಎಲ್ಲರ ಗಮನಸೆಳೆದಿದೆ.

ಗುರುವಾರ ದೇಶದ ರಾಜಧಾನಿ ದಿಲ್ಲಿಯಲ್ಲಿ ಈ ಜೋಡಿ ಬಂಧುಮಿತ್ರರಿಗಾಗಿ ವಿಶೇಷ ಔತಣವನ್ನು ಏರ್ಪಡಿಸಿದೆ. ಇದಕ್ಕಾಗಿ ಭರದ ಸಿದ್ಧತೆಗಳು ನೆರವೇರುತ್ತಿದೆ. ಆ ಬಳಿಕ ಡಿಸೆಂಬರ್ 26ರಂದು ಮುಂಬೈನಲ್ಲಿ ಏರ್ಪಡಿಸಿರುವ ಮತ್ತೊಂದು ಮದುವೆ ಔತಣಕ್ಕೆ ಸಿನಿಮಾ, ಕ್ರೀಡೆ ಹಾಗೂ ಇತರೆ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖರು ಹಾಜರಾಗಲಿದ್ದಾರೆ.

ಹನಿಮೂನ್‌ಗೆ ಸಂಬಂಧಿಸಿದ ಫೋಟೋವೊಂದನ್ನು ಅನುಷ್ಕಾ ಹಂಚಿಕೊಂಡಿದ್ದರು. ಇದೀಗ ಆ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ನಮ್ಮ ಗಾಂಧಿ ಬಜಾರಿನ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ದೋಸೆ ತಿಂದಂತೆ, ಮಂಗಳೂರು, ತುಮಕೂರಿಗೆ ಬಂದಂತೆ ಅದನ್ನು ಮಾರ್ಪ್ ಮಾಡಿ ನಾನಾ ರೀತಿಯಲ್ಲಿ ಆ ಫೋಟೋ ಬಳಸಿಕೊಳ್ಳುತ್ತಿದ್ದಾರೆ.

Leave a Reply