Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

ಉತ್ತರ ಕೊರಿಯ ಮೇಲೆ ಒತ್ತಡ: ಚೀನ ಬ್ಯಾಂಕ್‌ ಅಮೆರಿಕದ ಕಪ್ಪು ಪಟ್ಟಿಗೆ.

ವಾಷಿಂಗ್ಟನ್‌: ಉತ್ತರ ಕೊರಿಯದೊಂದಿಗೆ ಅಕ್ರಮ ವಹಿವಾಟು ನಡೆಸಿರುವ ಆರೋಪದ ಮೇಲೆ ಅಮೆರಿಕ, ಚೀನದ ಬ್ಯಾಂಕ್‌ ಒಂದನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಆ ಮೂಲಕ ಬೀಜಿಂಗ್‌ ತನ್ನ ಮಿತ್ರನಾಗಿರುವ ಉತ್ತರ ಕೊರಿಯದ ಬೇಕಾಬಿಟ್ಟಿ ವರ್ತನೆಯನ್ನು ನಿಯಂತ್ರಿಸುವಂತೆ ಬೀಜಿಂಗ್‌ ಮೇಲೆ ಒತ್ತಡ ಹೇರಿದೆ. ಉತ್ತರ ಕೊರಿಯವನ್ನು ಹದ್ದು ಬಸ್ತಿನಲ್ಲಿಡುವ ನಿಟ್ಟಿನಲ್ಲಿ ಅದರ ಮಿತ್ರನಾಗಿರುವ ಚೀನವು ರಾಜತಾಂತ್ರಿಕ ನೆಲೆಯಲ್ಲಿ  ಏನನ್ನೂ ಮಾಡುತ್ತಿಲ್ಲ  ಎಂಬ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತೀವ್ರ ಅಸಮಾಧಾನವಿದ್ದು  ಅದು ಬೀಜಿಂಗ್‌ನ ಗಮನದಲ್ಲಿದೆ. ಅಮೆರಿಕದಲ್ಲಿದ್ದುಕೊಂಡು ಉತ್ತರ ಕೊರಿಯಕ್ಕೆ […]

  Read More

ಜುಲೈ 1ರಿಂದ ಬದಲಾಗುತ್ತೆ ನಮ್ಮ ಜಗತ್ತು

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆ ಸೇರಿದಂತೆ ಜನಜೀವನದ ಮೇಲೆ ಪರಿಣಾಮ ಬೀರಲಿರುವ 12 ಮಹತ್ವದ ಬದಲಾವಣೆಗಳಿಗೆ ಭಾರತ ಸಜ್ಜಾಗಿದೆ. ಜು.1ರಂದೇ ಈ ಎಲ್ಲ ಬದಲಾವಣೆ ಪ್ರಕ್ರಿಯೆಗಳಿಗೂ ಮುಹೂರ್ತ ನಿಗದಿಯಾಗಿದ್ದು, ಅವುಗಳ ಕುರಿತ ಸಂಕ್ಷಿಪ್ತ ಅವಲೋಕನ ಇಲ್ಲಿದೆ. ಐಟಿ ರಿಟರ್ನ್ಸ್ಗೆ ಬೇಕು ಆಧಾರ್: ಕಳೆದ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಧಾರ್ ಸಂಖ್ಯೆ ಉಲ್ಲೇಖಿಸುವುದು ಕಡ್ಡಾಯ. ಅದಿಲ್ಲದೇ ಹೋದಲ್ಲಿ ಜುಲೈ 1ರಿಂದ ಐಟಿ ರಿಟರ್ನ್ಸ್ ಸಲ್ಲಿಸಲಾಗುವುದಿಲ್ಲ ಪ್ಯಾನ್ ಲಿಂಕ್ […]

  Read More

ಈದ್‌ ಗಿಫ್ಟ್: ಬಡ ಮುಸ್ಲಿಂ ಕುಟುಂಬಕ್ಕೆ ಮನೆ ಕೊಟ್ಟ ಪ್ರಕಾಶ್‌ ರೈ

ಮೆಹಬೂಬ್‌ನಗರ: ಪ್ರಖ್ಯಾತ ನಟ ಪ್ರಕಾಶ್‌ ರೈ ಅವರು ಬಡ ಮುಸ್ಲಿಂ ಕುಟುಂಬವೊಂದಕ್ಕೆ ಈದ್‌ ಸಂದರ್ಭ ಮನೆಯೊಂದನ್ನು ಉಡುಗರೆಯಾಗಿ ನೀಡಿ ಹಬ್ಬದ ಸಂಭ್ರಮವನ್ನು ನಿಜಾರ್ಥದಲ್ಲಿ ಹೆಚ್ಚು ಮಾಡಿದ್ದಾರೆ. ಸೋಮವಾರ ಮೆಹಬೂಬ್‌ನಗರದ ಕೊಂಡರೆಡ್ಡಿ ಪಲ್ಲಿಯಲ್ಲಿ ಛೋಟೆ ಮಿಯಾನ್‌ ಎನ್ನುವವರಿಗೆ ಪ್ರಕಾಶ್‌ ರಾಜ್‌ ಫೌಂಡೇಶ್‌ನ್‌ ಅಡಿಯಲ್ಲಿ ನಿರ್ಮಿಸಿಕೊಟ್ಟ ಮನೆಯನ್ನು ನೀಡಿ , ಹಬ್ಬವನ್ನೂ ಆಚರಿಸಿಕೊಂಡರು. ಇಡೀ ಹಳ್ಳಿಯನ್ನು ದತ್ತು ಪಡೆದುಕೊಂಡಿದ್ದ ಪ್ರಕಾಶ್‌ ರೈ ಮಾದರಿ ಕೆಲಸಗಳನ್ನೂ ಮಾಡಿದ್ದಾರೆ. ಮನೆ ಹಸ್ತಾಂತರಿಸಿ ಈದ್‌ ಆಚರಿಸಿಕೊಂಡ ಸಂತಸವನ್ನು ಪ್ರಕಾಶ್‌ ರೈ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ನಟದ […]

  Read More

ಮೋದಿ-ಟ್ರಂಪ್ ಮುಖಾಮುಖಿ ಹೇಗಿತ್ತು..? ಪ್ರಮುಖ ಬೆಳವಣಿಗಗಳು ಇಲ್ಲಿವೆ ನೋಡಿ

ವಾಷಿಂಗ್ಟನ್. ಜೂ.27 : ಜೂನ್ 27ರಂದು ಭಾರತೀಯ ಕಾಲಮಾನ ರಾತ್ರಿ 1.30ರ ಸುಮಾರಿಗೆ ವೈಟ್ ಹೌಸ್ ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ವಿಶ್ವವೇ ಎದುರು ನೋಡುತ್ತಿರುವ ಈ ಭೇಟಿಯ ವೇಳೆ ಹ್ಯಾಂಡ್ ಶೇಕ್ ಮಾಡಿ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಮೂಲಕ ಆತ್ಮೀಯತೆಯನ್ನು ಪ್ರದರ್ಶಿಸಿದರು. ಮೋದಿ ಅಮೆರಿಕಕ್ಕೆ ಮೂರನೇ ಬಾರಿ ಭೇಟಿ ನೀಡುತ್ತಿದ್ದರೂ, ಇದು ಮೋದಿ ಮತ್ತು ಟ್ರಂಪ್ ನಡುವಿನ ಮೊದಲ […]

  Read More

ಸೌರ ಮಂಡಲದ ಅಂಚಿನಲ್ಲಿ ಮತ್ತೊಂದು ಗ್ರಹ ಗೋಚರ

ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ ಪತ್ತೆಯಾಗಿರುವುದರ ಬಗ್ಗೆ ವಿಜ್ಞಾನಿಗಳು ಇನ್ನಷ್ಟೇ ಅಧಿಕೃತಪಡಿಸಬೇಕಿದೆ. ಈ ಬೆನ್ನಲ್ಲೇ ಸಂಶೋಧಕರಿಗೆ ಮತ್ತೊಂದು ಗ್ರಹ ಗೋಚರವಾಗಿದೆ. ಭಾರತೀಯರೂ ಇರುವ ಸಂಶೋಧಕರ ತಂಡ ಮಂಗಳ ಗ್ರಹದಷ್ಟು ಗಾತ್ರವಿರುವ ಗ್ರಹವನ್ನು ಹೋಲುವ ವಸ್ತುವನ್ನು ಸೌರ ಮಂಡಲದ ಕೊನೆಯ ಭಾಗದಲ್ಲಿ ಗುರುತಿಸಿದ್ದಾರೆ. ಇತ್ತೀಚೆಗಷ್ಟೇ ಪತ್ತೆಯಾಗಿದ್ದ ಭೂಮಿಯನ್ನು ಹೋಲುವ 9 ನೇ ಗ್ರಹಕ್ಕಿಂತ ಭಿನ್ನವಾಗಿದ್ದು, ಅದಕ್ಕಿಂತ ಹತ್ತಿರವೇ ಇದೆ ಎಂದು ಸಂಶೋಧಕರು ಹೇಳಿದ್ದಾರೆ.

  Read More

ಶೀತ, ನೆಗಡಿ, ಕೆಮ್ಮು, ತಲೆನೋವು, ಜ್ವರಗಳನ್ನು ನಿವಾರಿಸಲು ಉಪಾಯ ಇಲ್ಲಿದೆ ನೋಡಿ

ಅನೇಕರಿಗೆ ಮಳೆಯಲ್ಲಿ ನೆನೆಯುವುದರಿಂದ ಶೀತ, ನೆಗಡಿ, ಕೆಮ್ಮು, ತಲೆನೋವು, ಜ್ವರ ಉಂಟಾಗುತ್ತದೆ. ಆಗ ಮೆಣಸು, ಶುಂಠಿ, ಜೀರಿಗೆಗಳನ್ನು 1:2:3ರ ಪ್ರಮಾಣದಲ್ಲಿ ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಬೆಲ್ಲ ಸೇರಿಸಿ ತೆಗೆದುಕೊಂಡರೆ, ಕಫ ಮತ್ತು ಶೀತದಿಂದ ಉಂಟಾದ ಜ್ವರ ಕಡಿಮೆಯಾಗುತ್ತದೆ. ಕೆಲವು ವೇಳೆ ಅಸಾಕ್ಮ್ಯ (ಅಲರ್ಜಿ)ಯಿಂದ ಗಂಟಲು ಕೆರೆತ, ಕೆಮ್ಮುಗಳು ಉಂಟಾಗುತ್ತದೆ. ಶೀತದಿಂದ ಹೆಚ್ಚಾಗುವ ಈ ಕೆಮ್ಮು ರಾತ್ರಿಯಲ್ಲಿ ಉಲ್ಬಣಗೊಂಡು ನಿದ್ದೆಗೆ ತೊಂದರೆಯನ್ನುಂಟುಮಾಡುತ್ತದೆ. ಆಗ ಎರಡು ಮೆಣಸಿನ ಕಾಳುಗಳನ್ನು ಒಂದೆರಡು ಹರಳು ಉಪ್ಪನ್ನು ಸೇರಿಸಿ ದವಡೆಯಲ್ಲಿ ಇಟ್ಟುಕೊಂಡು ರಸವನ್ನು […]

  Read More

80 ಕೋಟಿ ಸಂಭಾವನೆ ಬೇಕೆಂದ ಪ್ರಭಾಸ್‌ !

ಬಾಹುಬಲಿ 2 ಚಿತ್ರ ಬಿಡುಗಡೆಯ ನಂತರ ಪ್ರಭಾಸ್ ಸ್ಟಾರ್‌ ವ್ಯಾಲ್ಯೂ ಮತ್ತಷ್ಟು ಹೆಚ್ಚಾಗಿದೆ. ಸೌತ್‌ ಇಂಡಿಯಾದ ಸ್ಟಾರ್‌ ನಟನಾಗಿದ್ದ ಪ್ರಭಾಸ್‌ಗೆ ಬಾಲಿವುಡ್‌ನಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಇವೆಲ್ಲದರ ನಡುವೆ ಪ್ರಭಾಸ್‌ ಬಗ್ಗೆ ಗಾಸಿಪ್‌ ಸುದ್ದಿಗಳೂ ಹೆಚ್ಚಾಗಿ ಬರ್ತಿವೆ. ಇದೀಗ ಪ್ರಭಾಸ್‌ ಒಂದು ಸಿನಿಮಾಕ್ಕೆ ಬರೋಬರಿ 80 ಕೋಟಿ ಡಿಮ್ಯಾಂಡ್‌ ಮಾಡಿದ್ದಾರೆ ಎಂಬ ಗಾಸಿಪ್ ಕೇಳಿ ಬಂದಿದೆ.

  Read More

ರೈತರ ಸಾಲದ ಮಾಹಿತಿ ನೀಡಲು ಸಹಕಾರ ಸಂಘಗಳಿಗೆ ಸೂಚನೆ

ಬೆಂಗಳೂರು,ಜೂ.23-ರೈತರ ಸಾಲಮನ್ನಾ ಹಿನ್ನೆಲೆಯಲ್ಲಿ ಸಹಕಾರಿ ಸಂಘ ಹಾಗೂ ಬ್ಯಾಂಕ್‍ಗಳು ತಮ್ಮಿಂದ ರೈತರು ಪಡೆದ ಸಾಲದ ಮಾಹಿತಿಯನ್ನು ಇದೇ 27ರೊಳಗೆ ನೀಡುವಂತೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ವಿಧಾನಸಭೆಯಲ್ಲಿ ಅನುದಾನ ಬೇಡಿಕೆಗಳ ಬಗ್ಗೆ ನಡೆದ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಸಹಕಾರ ಸಂಘದ ಮೂಲಕ ಅಲ್ಪಾವಧಿ ಬೆಳೆ ಸಾಲ ಪಡೆದು ಜೂ.20ಕ್ಕೆ ಹೊರ ಬಾಕಿ ಹೊಂದಿರುವ 2,22,750 ರೈತರ ರೂ. 50000 ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದ್ದರು.   ಈ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲು ಸಹಕಾರ ಸಂಘಗಳು ಮತ್ತು […]

  Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ…

ಬೆಂಗಳೂರು, ಜೂ.22- ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿರುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಚಿಕೆ ಪ್ರಸಾರಗೊಂಡ ನಂತರ ಅದರ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟಿದೆ. ಈ ವಾರ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರು ಆ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ನೆನಪು, ಹೋರಾಟದ ಬದುಕು, ಅವರ ವಿದ್ಯಾಭ್ಯಾಸ, ಹಳ್ಳಿ ಸೊಗಡಿನ ಜೀವನದ ಸ್ಮರಣೆ, ರಾಜಕೀಯ […]

  Read More

ವಿವಾದಿತ ಪಿಓಕೆಯಲ್ಲಿ ಪಾಕಿಸ್ಥಾನದ ಬೃಹತ್ ಅಣೆಕಟ್ಟಿಗೆ ಚೀನದ ಹಣ ?

ಬೀಜಿಂಗ್ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಬೃಹತ್ ದೈಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕಾಗಿ ಚೀನವು 14 ಶತಕೋಟಿ ಡಾಲರ್ ಮೊತ್ತವನ್ನು ಒದಗಿಸಲಿದ್ದು ಇದನ್ನು 50 ಶತಕೋಟಿ ಡಾಲರ್ಗಳ ಚೀನ – ಪಾಕಿಸ್ಥಾನ ಆರ್ಥಿಕ ವಲಯ ಯೋಜನೆಗೆ ಸೇರ್ಪಡೆಗೊಳಿಸಲಿದೆ ಎಂಬ ವರದಿಗಳು ಪಾಕ್ ಮಾಧ್ಯಮದಲ್ಲಿ ಪ್ರಕಟವಾಗಿದ್ದು ಈ ಬಗ್ಗೆ ಚೀನ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವನ್ನು ಪ್ರದರ್ಶಿಸಿದೆ. ಪಾಕ್ ಮಾಧ್ಯಮಗಳಲ್ಲಿ ವರದಿಯಾಗಿರುವ ಬೃಹತ್ ಪಿಓಕೆ ಅಣೆಕಟ್ಟಿನ ಬಗ್ಗೆ ನಮಗೆ ಯಾವುದೇ ಮಾಹಿತಿಗಳಿಲ್ಲ; ಆ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು […]

  Read More