Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > 2017 > November

ಚಿತ್ರ ವಿಮರ್ಶೆ- ಉಪ್ಪು ಹುಳಿ ಖಾರ…

– ಸಂದೀಪ್ ಶೆಟ್ಟಿ ಹೆಗ್ಗದ್ದೆ ಸ್ಯಾಂಡಲ್‍ವುಡ್ ಸಂತೆಯಲ್ಲಿ ಪ್ರತಿವಾರ ಒಂದಿಷ್ಟು ಸಿನಿಮಾಗಳು ಎಗ್ಗಿಲ್ಲದೇ ಸೆಟ್ಟೇರುತ್ತಲೇ ಇವೆ, ಜೊತೆ ಜೊತೆಗೆ ಒಂದೇ ದಿನ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಅದರಲ್ಲಿ ಹೊಸಬರ ಚಿತ್ರಕ್ಕಂತೂ ಭರವೇ ಇಲ್ಲ. ಅಂತೆಯೇ ಈ ವಾರವು ಹೊಸಬರ ಚಿತ್ರವೊಂದು ಬಿಡುಗಡೆಯಾಗಿ ಪ್ರೇಕ್ಷಕನಿಂದ ಒಳ್ಳೆಯ ರೆಸ್ಫಾನ್ಸ್ ಬಾಚಿಕೊಂಡಿದೆ. ಅದುವೆ ಉಪ್ಪು ಹುಳಿ ಖಾರ… ಚಿತ್ರದ ಟೈಟಲ್ಲೇ ಹೇಳುವಂತೆ ಚಿತ್ರ ನೋಡಿ ಹೊರಗೆ ಬಂದಾಗ ಇದರಲ್ಲಿ ಉಪ್ಪು-ಹುಳಿ-ಖಾರ ಇವು ಮೂರರ ಸಮಾನ ಮಿಶ್ರಣ ಇದೆ ಮತ್ತು […]

  Read More

ಉಪೇಂದ್ರ ಮತ್ತೆ ಬಾ…ಚಿತ್ರ ವಿಮರ್ಶೆ

– ಸಂದೀಪ್ ಶೆಟ್ಟಿ ಹೆಗ್ಗದ್ದೆ… ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ‘ಉಪೇಂದ್ರ ಮತ್ತೆ ಬಾ’ ಚಿತ್ರ ಇಂದು ಬಿಡುಗಡೆಯಾಗಿದ್ದು, ರಿಯಲ್ ಸ್ಟಾರ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಚಿತ್ರ ತೆಲುಗಿನ ‘ಸೊಗ್ಗಾಡೆ ಚಿನ್ನಿನಾಯನ’ ಚಿತ್ರದ ರೀಮೇಕ್ ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ, ಉಪ್ಪಿಯವರ ಅಭಿನಯಕ್ಕೆ ಪೂರಕವಾಗಿರುವ ಡೈಲಾಗ್‍ಗಳನ್ನು ಪೋಣಿಸಿ ಕಥೆ ಹೆಣೆದಿರುವ ನಿರ್ದೇಶಕ ಲೋಕಿ ಒಂದು ಅರ್ಥದಲ್ಲಿ ಗೆದ್ದಿದ್ದಾರೆ ಎನ್ನಬಹುದು. ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಕೊಡಗಿನ ಬೆಡಗಿ, ಚಂದನವನದಲ್ಲಿ ಈ ಹಿಂದೆ ಹಿಟ್ ಚಿತ್ರಗಳನ್ನು […]

  Read More

ಚಿತ್ರವಿಮರ್ಶೆ- ಕಾಲೇಜ್ ಕುಮಾರ

–ಸಂದೀಪ್ ಶೆಟ್ಟಿ ಹೆಗ್ಗದ್ದೆ ಬಹುನಿರೀಕ್ಷಿತ ಕಾಲೇಜ್ ಕುಮಾರ ಚಿತ್ರ ಇಂದು ಬಇಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಬಾಚಿಕೊಂಡಿದೆ. ವಿಭಿನ್ನವಾದ ಕತೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರ ಎರಡು ಜನರೇಷನ್‍ನ ಕತೆಯನ್ನು ಹೊಂದಿರುವುದು ನೋಡುಗನಿಗೆ ವಿಶೇಷವೆನಿಸುತ್ತದೆ. ನಿರ್ದೇಶಕ ಎನಿಸಿಕೊಂಡವನು ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ಮಾತಿನಂತೆ ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಚಿತ್ರವನ್ನ ಕಟ್ಟಿದ್ದಾರೆ. ಕಾಲೇಜು, ಮನೆ ಹೀಗೆ ಇವುಗಳ ಸುತ್ತಮುತ್ತವೇ ತಿರುಗುವ ಕಥೆಯನ್ನು ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಗ […]

  Read More

ಹುಷಾರ್.. ನೋಟ್ ಬ್ಯಾನ್ ವಿರುದ್ಧ ಮಾತನಾಡಿದರೆ ಬೀಳುತ್ತೆ ಗೂಸಾ..!

  ಬೆಂಗಳೂರು, ನ.9– ನೋಟು ಅಮಾನ್ಯೀಕರಣದ ವಿರುದ್ಧ ಮಾತನಾಡಿದರೆ ಬೀಳುತ್ತೆ ಗೂಸಾ. ಜನಸಾಮಾನ್ಯರೇ ಎಚ್ಚರ…! ಇದು ಬಿಜೆಪಿ ಕಾರ್ಪೊರೇಟರ್ ಬೆಂಬಲಿಗರಿಂದ ಗೂಂಡಾಗಿರಿ ವರ್ತನೆ. ನೋಟ್ ಬ್ಯಾನ್ ಅಂದ್ರೆ ತಪ್ಪು, ನಿಮಗೆ ಥಳಿತ ಗ್ಯಾರಂಟಿ. ನೋಟ್ ಬ್ಯಾನ್ ಮಾಡಿದ್ದು, ತಪ್ಪು ಎಂದ ಸಾರ್ವಜನಿಕರಿಗೆ ಕಾರ್ಪೊರೇಟರ್ ಗಳು ದಂಡ ಹಾಗೂ ಮೋದಿ ಭಕ್ತರಿಂದ ಥಳಿಸಿರುವ ಘಟನೆ ಮಲ್ಲೇಶ್ವರದ ಅರಮನೆನಗರ ವಾರ್ಡ್‍ನಲ್ಲಿ ನಡೆದಿದೆ. ಅರಮನೆನಗರ ವಾರ್ಡ್ ಬಿಬಿಎಂಪಿ ಸದಸ್ಯೆಯ ಪತಿ ಮಹಾಶಯ ಕೇಶವ ಹಾಗೂ ಅವರ ಬೆಂಬಲಿಗರು ನೋಟ್ ಬ್ಯಾನ್ ವಿರೋಧಿಸಿದವರನ್ನು […]

  Read More

ನೋಟು ನಿಷೇಧ ಬಳಿಕ ಸಿಬಿಐ ಹೊರಗೆಳೆದಿದ್ದು 396 ಕೋಟಿ ರೂಪಾಯಿ

>> ಸಾರ್ವಜನಿಕರಿಂದ 92 ದೂರುಗಳು, 84 ಪ್ರಕರಣ ದಾಖಲು, ತನಿಖೆ ನವದೆಹಲಿ : ನೋಟು ನಿಷೇಧ ಬಳಿಕ ನಡೆದ ಹಣ ಅಕ್ರಮ ವರ್ಗಾವಣೆ ಸಂಬಂಧ ಸಿಬಿಐ ದಾಖಲಿಸಿರುವ 84 ಪ್ರಕರಣಗಳಿಂದ 396 ಕೋಟಿ ರೂ. ಬಹಿರಂಗಗೊಂಡಿದೆ. ಖಾಸಗಿ ಮತ್ತು ಸಹಕಾರಿ ಬ್ಯಾಂಕ್ ಗಳು , ಅಂಚೆ ಕಚೇರಿ, ರೈಲ್ವೆ ಮತ್ತು ವಿಮಾ ಕಂಪನಿಗಳಲ್ಲಿ ನಿಷೇಧಿತ ನೋಟು ಬದಲಾವಣೆಗೆ ಯತ್ನಿಸಲಾಗಿದ್ದಂಥ 84 ಪ್ರಕರಣಗಳಲ್ಲಿ ಈ ಭಾರಿ ಮೊತ್ತ ಸಿಕ್ಕಿಬಿದ್ದಿದೆ ಎಂದು ಸಿಬಿಐ ಹೇಳಿದೆ. ನಿಷೇಧಿತ ನೋಟು ಬದಲಾವಣೆಯಾಗುತ್ತಿರುವ ಕೇಳಿಬರುವ ಯಾವೊಂದು […]

  Read More

ಬೆಂಗಳೂರಿನಲ್ಲಿ ಇಂದಿನಿಂದ ಅನಿಯಮಿತ ಲೋಡ್​ ಶೆಡ್ಡಿಂಗ್​

ತಾಂತ್ರಿಕ ದೋಷದಿಂದ ವಿದ್ಯುತ್​ ಉತ್ಪಾದನೆಯಲ್ಲಿ ಕೊರತೆ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಿಯಮಿತ ಲೋಡ್​ ಶೆಡ್ಡಿಂಗ್​ ಪ್ರಾರಂಭವಾಗಲಿದ್ದು, ಕತ್ತಲೆ ಭಾಗ್ಯ ನೀಡಲು ಸರ್ಕಾರ ಸಜ್ಜಾಗಿದೆ. ತಾಂತ್ರಿಕ ದೋಷದಿಂದ ವಿದ್ಯುತ್​ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಕಾರಣ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಉಂಟಾಗಿರುವ ವಿದ್ಯುತ್ ಕೊರತೆ ನೀಗಿಸಲು ಐಇಎಕ್ಸ್​​​ನಲ್ಲಿ ವಿದ್ಯುತ್ ಖರೀದಿಸಿ ಸರಬರಾಜು ಮಾಡಲು ಸರ್ಕಾರ ನಿರ್ಧರಿಸಿದೆ. ಕರೆಂಟ್​ ಕಣ್ಣಾಮುಚ್ಚಾಲೆ ಆಟ ಶುರುವಾಗಲಿದ್ದು, ಸಮಸ್ಯೆ ಯಾವಗ ಬಗೆಹರಿಯಬಹುದು ಎಂಬುದರ ಬಗ್ಗೆ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.

  Read More

ಸಿಎಂ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಯುವಕನೋರ್ವ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸೋಮವಾರ ಸಂಜೆ ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ಭಾಷಣ ಮಾಡಲು ಮುಂದಾಗುತ್ತಿದ್ದಂತೆ, ಯುವಕನೋರ್ವ ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದ. ಜತೆಗೆ ವಿಷದ ಬಾಟಲಿ ಹಿಡಿದು ತನಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಕಾರ್ಯಕ್ರಮ ಸ್ಥಳದಿಂದ ಹೊರಗೆ ಕರೆದೊಯ್ದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೈಸೂರು […]

  Read More

ಪಾಕ್ ವಿರುದ್ಧ ಭಾರತಕ್ಕೆ ಸಿಕ್ತು ಮತ್ತೊಂದು ರಾಜತಾಂತ್ರಿಕ ಗೆಲವು

ನವದೆಹಲಿ, ನ.6-ನಿಷೇಧಿತ ಲಷ್ಕರ್-ಎ-ತೈಬಾ(ಎಲ್‍ಇಟಿ) ಮತ್ತು ಜಮಾತ್-ಉದ್ ದವಾ(ಜೆಯುಡಿ) ಇತ್ಯಾದಿ ಭಯೋತ್ಪಾದಕ ಸಂಘಟನೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಾಗತಿಕ ಕಾವಲು ಸಂಸ್ಥೆಯೊಂದು (ಗ್ಲೋಬಲ್ ವಾಚ್‍ಡಾಗ್) ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಇದು ಭಾರತಕ್ಕೆ ಪಾಕ್ ವಿರುದ್ಧ ದೊರೆತ ಮತ್ತೊಂದು ದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.     ಪಠಾಣ್‍ಕೋಠ್ ಸೇನಾ ಶಿಬಿರದ ದಾಳಿಯ ಸೂತ್ರಧಾರ ಹಾಗೂ ಜೈಷ್-ಎ-ಮಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಯತ್ನದ ನಡುವೆ ಈ ಬೆಳವಣಿಗೆ […]

  Read More

ಯುದ್ಧದಲ್ಲಿ ಹೋರಾಡಿ ಗೆಲ್ಲಲು ಸಿದ್ಧವಾಗಿರಿ, ಚೀನಾ ಸೇನೆಗೆ ಕ್ಸೀ ಜಿನ್ ಪಿಂಗ್ ಕರೆ

ಬೀಜಿಂಗ್: ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಚೀನಾ ಸೇನೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ. ಹೋರಾಟದ ಸಾಮರ್ಥ್ಯವನ್ನು ಸುಧಾರಣೆ ಮಾಡಿಕೊಳ್ಳುವಂತೆ ಹಾಗೂ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ. ಚೀನಾದ ಕೇಂದ್ರೀಯ ಮಿಲಿಟರಿ ಕಮಿಷನ್ (ಸಿಎಂಸಿ)ಯ ತಪಾಸಣೆ ನಡೆಸಿದ ಬಳಿಕ ಯೋಧರನ್ನುದ್ದೇಶಿಸಿ ಮಾತನಾಡಿರುವ ಕ್ಸೀ ಜಿನ್ ಪಿಂಗ್, ಸೇನಾ ಯೋಧರನ್ನು ಯುದ್ಧ ಗೆಲ್ಲುವ ಹಾಗೂ ಹೋರಾಟಕ್ಕೆ ಸಿಎಂಸಿ ಮುನ್ನಡೆಸಬೇಕು ಎಂದು ಹೇಳಿದ್ದಾರೆ. ಕಮ್ಯುನಿಷ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿ ಅಧಿಕಾರ […]

  Read More

ಆಕಸ್ಮಿಕ ಶಾರೀರಿಕ ಸ್ಪರ್ಶ ಲೈಂಗಿಕ ಕಿರುಕುಳವಲ್ಲ: ಹೈಕೋರ್ಟ್

ಹೊಸದಿಲ್ಲಿ: ಲೈಂಗಿಕ ಆಧಾರಿತವಾದ ನಡವಳಿಕೆಯ ಸ್ವರೂಪವಿಲ್ಲದಿದ್ದರೆ ಎಲ್ಲ ಆಕಸ್ಮಿಕ ಶಾರೀರಿಕ ಸ್ಪರ್ಶವನ್ನು ಲೈಂಗಿಕ ಕಿರುಕುಳ ಎಂದು ಕರೆಯಲಾಗದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ವಿಭು ಬಕ್ರು, ಈ ಗಮನಾರ್ಹ ವಿಶ್ಲೇಷಣೆಯನ್ನು ಮಾಡಿದ್ದು, ಇಷ್ಟವಿಲ್ಲದಿದ್ದರೂ ಆಕಸ್ಮಿಕ ಭೌತಿಕ ಸಂಪರ್ಕವು ಲೈಂಗಿಕ ಕಿರುಕುಳಕ್ಕೆ ಒಳಪಟ್ಟಿರುವುದಿಲ್ಲ ಎಂದಿದ್ದಾರೆ. ಲೈಂಗಿಕ ದೌರ್ಜನ್ಯವನ್ನು ಆರೋಪಿಸಿ ಮಾಜಿ ಹಿರಿಯ ಸಹೋದ್ಯೋಗಿ ಮೇಲೆ ಮಾಡಿರುವ ಆರೋಪದಲ್ಲಿ ದೂರುದಾರರ ಸಮಿತಿ ಮತ್ತು ಶಿಸ್ತಿನ ಪ್ರಾಧಿಕಾರ ಕ್ಲೀನ್‌ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಿಆರ್‌ಆರ್‌ಐ ವಿಜ್ಞಾನಿಯು ನೀಡಿದ ಮನವಿಯ ವಿಚಾರಣೆಯಲ್ಲಿ […]

  Read More