Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > 2018ರಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ

2018ರಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ

ಚಂದ್ರಯಾನ-2 ಉಪಗ್ರಹವನ್ನು ಮುಂದಿನ ವರ್ಷ ಉಡಾವಣೆ ಮಾಡಲಾಗುವುದು ಎಂದು ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, 2018ರ ಮಾರ್ಚ್ ತಿಂಗಳೊಳಗಾಗಿ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ವಿಶ್ವಮಟ್ಟದಲ್ಲಿ ಮುಂಚೂಣಿ ಸ್ಥಾನ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ. 2008ರ ನವೆಂಬರ್​ನಲ್ಲಿ ಇಸ್ರೋ ಚಂದ್ರಯಾನ -1 ಯೋಜನೆ ಕೈಗೊಂಡಿತ್ತು. ಸುಮಾರು ಒಂದು ವರ್ಷದ ನಂತರ, ತಾಂತ್ರಿಕ ಕಾರಣಗಳಿಂದ ಉಪಗ್ರಹ ನಿಷ್ಕ್ರಿಯವಾಗಿ ಭೂಮಿಗೆ ಸಂಕೇತ ಕಳಿಸುವುದನ್ನು ಸ್ಥಗಿತಗೊಳಿಸಿತ್ತು.

ಡಿಸೆಂಬರ್​ನಲ್ಲಿ ಉಪಗ್ರಹ ಉಡಾವಣೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಡಿಸೆಂಬರ್ ತಿಂಗಳಲ್ಲಿ ರಿಮೋಟ್ ಸೆನ್ಸಿಂಗ್ ಸ್ಯಾಟಲೈಟ್, ಕಾರ್ಟೆಸ್ಯಾಟ್-2ಅನ್ನು ಉಡಾವಣೆ ಮಾಡಲು ನಿರ್ಧರಿಸಿದೆ. ಇದರ ಜತೆಗೆ ವಿದೇಶದ 30 ಸಣ್ಣ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.

Leave a Reply