Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > About Siri

About Siri

ಎಲ್ಲಾ ಕನ್ನಡ ಪ್ರಿಯರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು..

ಹೊಸ ವರ್ಷ ಎಂದಾಕ್ಷಣ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಏನಾದರೊಂದು ಚೈತನ್ಯ ನನ್ನಲ್ಲೂ ಇಂದಿನಿಂದ ಉದ್ಭವಿಸಲ್ಫಡಬೇಕು ಎಂದೂ ಆಜ್ಞೆ ಕೈಗೊಳ್ಳುತ್ತಾನೆ. ಇಂತಹ ಪ್ರಸ್ತುತ ಸಂದಂರ್ಭದಲ್ಲಿ ಸಿರಿಗನ್ನಡ ನಾಡ ನಿಮ್ಮೆಲ್ಲೆರ ಹೆಮ್ಮೆಯ ಪತ್ರಿಕೆ “ಸಿರಿ ಸೌಂದರ್ಯ” ಅಂತಹ ನೂತನ ಸ್ಫೂರ್ತಿಯನ್ನು ನಿಮ್ಮಿಂದ ಬಯಸುತ್ತದೆ. ಜೊತೆಗೆ ಕೊಟ್ಟಿರುವ ಪ್ರೀತಿಗೆ ಎಂದೆಂದೂ ನಿಮ್ಮನ್ನು ಪ್ರತೀ ಮಾಸದ ಸಂಚಿಕೆಯಲ್ಲೂ ಸಂತೃಪ್ತ ಪಡಿಸಲು ಹವಣಿಸುತ್ತದೆ. ನಿಮ್ಮ ಸಹಕಾರಕ್ಕಾಗಿ, ಪ್ರೀತಿಗಾಗಿ ಸಿರಿಯ ಸೊಬಗು,

ಜಗತ್ತಿನ ಎಲ್ಲಾ ಅದ್ಭುತಗಳ ಕಾರಣ ಸೃಷ್ಟಿ,
ಸೃಷ್ಟಿಯ ಸಮ್ಮಿಲನವೇ ಅದ್ಭುತವಾದ ಸಮಾಜ,
ಸೃಷ್ಟಿಯ ಸಮಾಜದ ಮನೋರಂಜೆನೆಗಾಗಿ ಸಿನಿಮಾ,
ಈ ಎಲ್ಲಾ ಅದ್ಭುತಗಳ ಸಮ್ಮಿಲನವೇ ಸಿರಿ…

ಮೇಲೆ ಹೇಳಿದ ತುಣುಕು ಅಕ್ಷರಶ: ನಿಜವಾಗಿ ನಿಮ್ಮ ಮುಂದೆ ಈವರೆಗೆ ಸಿರಿ ಸಡಗರದಿಂದಲೇ ಸಾಗಿ ಬಂದಿದೆ. ಅದಕ್ಕೆ ಕಾರಣ ಹಲವು,

ಶ್ರೀಯುತರುಗಳಾದ ಶ್ರೀ ಶ್ರೀ ರಾಮಚಂದ್ರ ಗುರೂಜಿ, ಈಶ್ವರ್ ದೈತೋಟ, ಚಕ್ರವರ್ತಿ ಸೂಲಿಬೆಲೆ, ಶ್ರೀಮತಿ ಲಲಿತಾ ನಾರಾಯಣ, ಡಾ|| ರಂಗನಾಥ್, ಡಾ|| ಭರತ್ ಚಂದ್ರ, ಮಲ್ಲೇಪುರಂ ವೆಂಕಟೇಶ್, ವಿ. ಆರ್. ಸತ್ಯನರಾಯಣ್, ಶ್ರೀಮತಿ ವನಿತಾ ರಾಮಸ್ವಾಮಿ, ಶ್ರೀಮತಿ ತನುಜಾ ಶಿವಕುಮಾರ್, ರಾಹುಲ್ ಕಪೂರ್, ಬಿ. ಸುರೇಶ್, ಡೈರೆಕ್ಟರ್ ಚೈತನ್ಯ, ಮಿಮಿಕ್ರಿ ದಯಾನಂದ್, ಸಂದೀಪ್ ಶೆಟ್ಟಿ ಹೆಗ್ಗದ್ದೆ, ಶ್ರೀಕಾಂತ್ ಎನ್. ಎಸ್,ಚಂದ್ರು ಎಂ.ಹುಣಸೂರು ಮತ್ತು ಅನೇಕ ಗಣ್ಯ ವ್ಯಕ್ತಿಗಳು, ಲೇಖಕರು, ಬರಹಗಾರರು, ಜ್ಯೋತಿಷ ವಿದ್ವಾಂಸರ ಮತ್ತು ಓದುಗರ ಸಲಹೆ, ಸೂಚನೆಗಳಿಂದ ಅದು ಮುಕ್ತವಾಗುತ್ತದೆ.

ಇನ್ನು ಸಿರಿಯ ವರ್ಣವಿನ್ಯಾಸವಂತೂ ಪ್ರತೀ ಪುಟಕ್ಕೂ ತನ್ನದೆ ಆದ ಮೆರಗು ಹಚ್ಚಿ ಓದುಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು. ಅಭಿನಯ್ ಶೆಟ್ಟಿಯವರ ವಿನ್ಯಾಸ, ಕೆ. ಆರ್. ರವಿಕುಮಾರ್ ರವರ ಪ್ರೋತ್ಸಾಹ ಸಿರಿಯ ಸೊಬಗಿಗೆ ಕೊಡುಗೆಯಾಗಿದೆ.

ಇಂತಹ ಉತ್ತಮ ಬಳಗ ಕಟ್ಟಿ ನಡೆಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರಾದ ಸನ್ಮಾನ್ಯ ಶ್ರೀಯುತರಾದ ಸುರೇಶ್ ಚಿಕ್ಕಣ್ಣನವರ ತಲ್ಲೀನತೆಯ ಫಲಿತಾಂಶ ಇಷ್ಟಕ್ಕೆಲ್ಲ ಮೂಲ ಕಾರಣವೆಂದರೆ ಅತಿಶಯೋಕ್ತಿಯಲ್ಲ.

ಸಿರಿಯು ಸರಳ ವ್ಯಕ್ತಿತ್ವಗಳಿಂದ ರೂಪುಗೊಳ್ಳುತ್ತಿರುವ ಕಸ್ತೂರಿ ಕನ್ನಡದ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕಂದಮ್ಮನ ಹಾಗೆ.. ಬೆರಳಿಡಿದು ನೀವು ನಡೆಸುವುದೂ ತುಂಬಾ ಅವಶ್ಯವಾಗಿದೆ…

ನಿಮ್ಮ ಸಿರಿ, ನಿಮ್ಮ ಪತ್ರಿಕೆ, ನಿಮ್ಮ ಆಶೀರ್ವಾದವೇ ಸಿರಿಯ ಭಾಗ್ಯ.