Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ನೋಟು ನಿಷೇಧ ಬಳಿಕ ಸಿಬಿಐ ಹೊರಗೆಳೆದಿದ್ದು 396 ಕೋಟಿ ರೂಪಾಯಿ

ನೋಟು ನಿಷೇಧ ಬಳಿಕ ಸಿಬಿಐ ಹೊರಗೆಳೆದಿದ್ದು 396 ಕೋಟಿ ರೂಪಾಯಿ

>> ಸಾರ್ವಜನಿಕರಿಂದ 92 ದೂರುಗಳು, 84 ಪ್ರಕರಣ ದಾಖಲು, ತನಿಖೆ

ನವದೆಹಲಿ : ನೋಟು ನಿಷೇಧ ಬಳಿಕ ನಡೆದ ಹಣ ಅಕ್ರಮ ವರ್ಗಾವಣೆ ಸಂಬಂಧ ಸಿಬಿಐ ದಾಖಲಿಸಿರುವ 84 ಪ್ರಕರಣಗಳಿಂದ 396 ಕೋಟಿ ರೂ. ಬಹಿರಂಗಗೊಂಡಿದೆ. ಖಾಸಗಿ ಮತ್ತು ಸಹಕಾರಿ ಬ್ಯಾಂಕ್ ಗಳು , ಅಂಚೆ ಕಚೇರಿ, ರೈಲ್ವೆ ಮತ್ತು ವಿಮಾ ಕಂಪನಿಗಳಲ್ಲಿ ನಿಷೇಧಿತ ನೋಟು ಬದಲಾವಣೆಗೆ ಯತ್ನಿಸಲಾಗಿದ್ದಂಥ 84 ಪ್ರಕರಣಗಳಲ್ಲಿ ಈ ಭಾರಿ ಮೊತ್ತ ಸಿಕ್ಕಿಬಿದ್ದಿದೆ ಎಂದು ಸಿಬಿಐ ಹೇಳಿದೆ.

ನಿಷೇಧಿತ ನೋಟು ಬದಲಾವಣೆಯಾಗುತ್ತಿರುವ ಕೇಳಿಬರುವ ಯಾವೊಂದು ಆರೋಪಗಳನ್ನು ಲಘುವಾಗಿ ಪರಿಗಣಿಸದೇ ದಾಳಿ ನಡೆಸಲಾಗಿದೆ. ಸಾರ್ವಜನಿಕರಿಂದ 92 ದೂರುಗಳು ವಿವಿಧ ಸಂಸ್ಥೆಗಳ ವಿರುದ್ಧ ಕೇಳಿಬಂದಿದ್ದವು ಎಂದು ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಹೇಳಿದ್ದಾರೆ. ಕೆಲವು ಪ್ರಕರಣಗಳಲ್ಲಿ ನಿಷೇಧಿತ ನೋಟುಗಳ ಬೇಟೆಗೆ ತೆರಳಿದ್ದ ಅಧಿಕಾರಿಗಳಿಗೆ ಭಾರಿ ಪ್ರಮಾಣದಲ್ಲಿ ಹೊಸ 2 ಸಾವಿರ ಮುಖಬೆಲೆ ನೋಟು ಸಿಕ್ಕಿದೆ. ಇದರ ಹಿಂದಿನ ರಹಸ್ಯವನ್ನು ಬೇಧಿಸಲಾಗುತ್ತಿದೆ ಎಂದು ಸಿಬಿಐ ತಿಳಿಸಿದೆ.- (ಏಜೆನ್ಸೀಸ್ )

Leave a Reply