Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News

Breaking News

ಸಿಎಂ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಯುವಕನೋರ್ವ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸೋಮವಾರ ಸಂಜೆ ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ಭಾಷಣ ಮಾಡಲು ಮುಂದಾಗುತ್ತಿದ್ದಂತೆ, ಯುವಕನೋರ್ವ ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದ. ಜತೆಗೆ ವಿಷದ ಬಾಟಲಿ ಹಿಡಿದು ತನಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಕಾರ್ಯಕ್ರಮ ಸ್ಥಳದಿಂದ ಹೊರಗೆ ಕರೆದೊಯ್ದಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವಕ ಮೈಸೂರು […]

  Read More

ಪಾಕ್ ವಿರುದ್ಧ ಭಾರತಕ್ಕೆ ಸಿಕ್ತು ಮತ್ತೊಂದು ರಾಜತಾಂತ್ರಿಕ ಗೆಲವು

ನವದೆಹಲಿ, ನ.6-ನಿಷೇಧಿತ ಲಷ್ಕರ್-ಎ-ತೈಬಾ(ಎಲ್‍ಇಟಿ) ಮತ್ತು ಜಮಾತ್-ಉದ್ ದವಾ(ಜೆಯುಡಿ) ಇತ್ಯಾದಿ ಭಯೋತ್ಪಾದಕ ಸಂಘಟನೆಗಳ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಾಗತಿಕ ಕಾವಲು ಸಂಸ್ಥೆಯೊಂದು (ಗ್ಲೋಬಲ್ ವಾಚ್‍ಡಾಗ್) ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಇದು ಭಾರತಕ್ಕೆ ಪಾಕ್ ವಿರುದ್ಧ ದೊರೆತ ಮತ್ತೊಂದು ದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.     ಪಠಾಣ್‍ಕೋಠ್ ಸೇನಾ ಶಿಬಿರದ ದಾಳಿಯ ಸೂತ್ರಧಾರ ಹಾಗೂ ಜೈಷ್-ಎ-ಮಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಯತ್ನದ ನಡುವೆ ಈ ಬೆಳವಣಿಗೆ […]

  Read More

ಯುದ್ಧದಲ್ಲಿ ಹೋರಾಡಿ ಗೆಲ್ಲಲು ಸಿದ್ಧವಾಗಿರಿ, ಚೀನಾ ಸೇನೆಗೆ ಕ್ಸೀ ಜಿನ್ ಪಿಂಗ್ ಕರೆ

ಬೀಜಿಂಗ್: ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಚೀನಾ ಸೇನೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ. ಹೋರಾಟದ ಸಾಮರ್ಥ್ಯವನ್ನು ಸುಧಾರಣೆ ಮಾಡಿಕೊಳ್ಳುವಂತೆ ಹಾಗೂ ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ. ಚೀನಾದ ಕೇಂದ್ರೀಯ ಮಿಲಿಟರಿ ಕಮಿಷನ್ (ಸಿಎಂಸಿ)ಯ ತಪಾಸಣೆ ನಡೆಸಿದ ಬಳಿಕ ಯೋಧರನ್ನುದ್ದೇಶಿಸಿ ಮಾತನಾಡಿರುವ ಕ್ಸೀ ಜಿನ್ ಪಿಂಗ್, ಸೇನಾ ಯೋಧರನ್ನು ಯುದ್ಧ ಗೆಲ್ಲುವ ಹಾಗೂ ಹೋರಾಟಕ್ಕೆ ಸಿಎಂಸಿ ಮುನ್ನಡೆಸಬೇಕು ಎಂದು ಹೇಳಿದ್ದಾರೆ. ಕಮ್ಯುನಿಷ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿ ಅಧಿಕಾರ […]

  Read More

ಆಕಸ್ಮಿಕ ಶಾರೀರಿಕ ಸ್ಪರ್ಶ ಲೈಂಗಿಕ ಕಿರುಕುಳವಲ್ಲ: ಹೈಕೋರ್ಟ್

ಹೊಸದಿಲ್ಲಿ: ಲೈಂಗಿಕ ಆಧಾರಿತವಾದ ನಡವಳಿಕೆಯ ಸ್ವರೂಪವಿಲ್ಲದಿದ್ದರೆ ಎಲ್ಲ ಆಕಸ್ಮಿಕ ಶಾರೀರಿಕ ಸ್ಪರ್ಶವನ್ನು ಲೈಂಗಿಕ ಕಿರುಕುಳ ಎಂದು ಕರೆಯಲಾಗದು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ವಿಭು ಬಕ್ರು, ಈ ಗಮನಾರ್ಹ ವಿಶ್ಲೇಷಣೆಯನ್ನು ಮಾಡಿದ್ದು, ಇಷ್ಟವಿಲ್ಲದಿದ್ದರೂ ಆಕಸ್ಮಿಕ ಭೌತಿಕ ಸಂಪರ್ಕವು ಲೈಂಗಿಕ ಕಿರುಕುಳಕ್ಕೆ ಒಳಪಟ್ಟಿರುವುದಿಲ್ಲ ಎಂದಿದ್ದಾರೆ. ಲೈಂಗಿಕ ದೌರ್ಜನ್ಯವನ್ನು ಆರೋಪಿಸಿ ಮಾಜಿ ಹಿರಿಯ ಸಹೋದ್ಯೋಗಿ ಮೇಲೆ ಮಾಡಿರುವ ಆರೋಪದಲ್ಲಿ ದೂರುದಾರರ ಸಮಿತಿ ಮತ್ತು ಶಿಸ್ತಿನ ಪ್ರಾಧಿಕಾರ ಕ್ಲೀನ್‌ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಿಆರ್‌ಆರ್‌ಐ ವಿಜ್ಞಾನಿಯು ನೀಡಿದ ಮನವಿಯ ವಿಚಾರಣೆಯಲ್ಲಿ […]

  Read More

ಹಸೆಮಣೆ ಏರಿದ ನಟ ಲೂಸ್​ ಮಾದ ಯೋಗೇಶ್​

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಲೂಸ್​ ಮಾದ ಯೋಗೇಶ್​ ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೋಣನ ಕುಂಟೆಯಲ್ಲಿರುವ ಶ್ರೀ ಕನ್ವೆಂಷನ್​ ಹಾಲ್​ನಲ್ಲಿ ಗುರುವಾರ ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ನಟ ಯೋಗಿ ವಿವಾಹ ಬಂಧನಕ್ಕೆ ಒಳಗಾದರು. ಕುರುಬ ಸಂಪ್ರದಾಯದಂತೆ ಯೋಗಿ ಮದುವೆ ಸಂಪ್ರದಾಯಬದ್ಧವಾಗಿ ನೆರವೇರಿತು. ಈ ಸಂದರ್ಭದಲ್ಲಿ ಎರಡೂ ಕುಟುಂಬದವರು ಮತ್ತು ಬಂಧು ಮಿತ್ರರು ಮಾತ್ರ ಹಾಜರಿದ್ದರು. ಹಿರಿಯ ನಟ ಶಿವರಾಜ್​ ಕುಮಾರ್​ ಅವರು ನವದಂಪತಿಗಳಿಗೆ ಶುಭ ಹಾರೈಸಿದರು. (ದಿಗ್ವಿಜಯ ನ್ಯೂಸ್​)

  Read More

ದಯಾನಂದ ಸ್ವಾಮಿ -ನಟಿ ಸಲ್ಲಾಪ: ಸ್ವಾಮಿಗಳು ಎಲ್ಲಿ? ತಾಜಾ ಬೆಳವಣಿಗೆ ಏನು?

ಬೆಂಗಳೂರು: ಜಂಗಮ ಮಠದ ಸ್ವಾಮೀಜಿ ಆಗಬೇಕು ಎಂದು ಕೊಂಡಿದ್ದವ ಮಠದಲ್ಲೇ ನಟಿ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ವಾಮೀಜಿಯನ್ನು ಬಂಧಿಸಬೇಕು ಎನ್ನುವ ಒತ್ತಡಗಳು ಕೇಳಿ ಬಂದಿವೆ. ಪ್ರಕರಣದ ವರದಿಯಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ದಯಾನಂದ ಸ್ವಾಮೀಜಿಯನ್ನು ಬಂಧಿಸುವಂತೆ ಒತ್ತಾಯಿಸಿ ಮಠದ ಎದುರು ಭಕ್ತರು ಗುರುವಾರದಿಂದ ಅಹೋರಾತ್ರಿ ಧರಣಿಯನ್ನು ಕೈಗೊಂಡಿದ್ದಾರೆ. ಯಲಹಂಕದ ಹುಣಸ ಮಾರನಹಳ್ಳಿಯ ಜಂಗಮ ಮಠದ ಎದುರು ಜಮಾಯಿಸಿರುವ ಭಕ್ತರು ಮತ್ತು ಟ್ರಸ್ಟ್‌ ಸದಸ್ಯರು ಸ್ವಾಮೀಜಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಶುಕ್ರವಾರ ಬೆಳಗ್ಗೆ […]

  Read More

ನಗರದಲ್ಲಿ ನಾಳೆ ಮತ್ತೆ ಭಾರಿ ಮಳೆ ಸಾಧ್ಯತೆ

ಜನತೆಯಲ್ಲಿ ಮತ್ತೆ ಆತಂಕ ವಿಕ ಸುದ್ದಿಲೋಕ ಬೆಂಗಳೂರು ರಾಜ್ಯಕ್ಕೆ ಹಿಂಗಾರು ಆಗಮನವಾಗುತ್ತಿರುವುದರಿಂದ ಶುಕ್ರವಾರದಿಂದ (ಅ.27) ನಗರ ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆ ಆರಂಭವಾಗಲಿದೆ. ನಗರದಲ್ಲಿ ಮಳೆ ಮಾಡಿದ ಹಾನಿಯಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಮತ್ತೆ ಮಳೆ ಕಾಟದ ಆತಂಕ ಶುರುವಾಗಿದೆ. ಎರಡು ತಿಂಗಳಲ್ಲಿ ನಗರದಲ್ಲಿ ಸುರಿದ ಮಳೆಯು ಸಾರ್ವಕಾಲಿಕ ದಾಖಲೆ ನಿರ್ಮಿಸಿ ಅಪಾರ ಹಾನಿಯುಂಟುಮಾಡಿದೆ. ನೈಋುತ್ಯ ಮುಂಗಾರಿನ ಅವಧಿ ಮುಗಿದಿರುವುದರಿಂದ ರಾಜ್ಯದಲ್ಲಿ ಮಳೆ ನಿಂತಿದೆ. ಪ್ರತಿ ದಿನ ಬಿಸಿಲು ಬರುತ್ತಿದ್ದು, ಒಣಹವೆ ಆರಂಭವಾಗಿದೆ. ಮುಂಗಾರು ನಗರದಿಂದ ಹೊರಗೆ ಹೋದ […]

  Read More

ಪ್ರದೀಪ್​ ನರವಾಲ್​ ಅತ್ಯದ್ಭುತ ಆಟ: ಡಿಫೆಂಡಿಂಗ್​ ಚಾಂಪಿಯನ್ಸ್​ ಸೆ. ಫೈನಲ್​ಗೆ!

ಪ್ರದೀಪ್​ ನರವಾಲ್​ ಅತ್ಯದ್ಭುತ ಆಟ: ಡಿಫೆಂಡಿಂಗ್​ ಚಾಂಪಿಯನ್ಸ್​ ಸೆ. ಫೈನಲ್​ಗೆ! ಮುಂಬೈ: ಅತ್ಯದ್ಭುತ ರೈಡ್​ಗಳ ಮೂಲಕ ಏಕಾಂಗಿ ಹೋರಾಟ ನಡೆಸಿದ ಪಟನಾ ಪೈರೇಟ್ಸ್​ ತಂಡದ ನಾಯಕ ಪ್ರದೀಪ್​ ನರವಾಲ್​ ತಮ್ಮ ತಂಡವನ್ನು ಸೆಮಿಫೈನಲ್​ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ ಚೊಚ್ಚಲ ಪ್ರವೇಶದಲ್ಲಿಯೇ ಗುಜರಾತ್​ ಫಾರ್ಚೂನ್​ ಜಯಂಟ್​ ಫೈನಲ್​ಗೆ ಸ್ಥಾನ ಪಡೆದಿದೆ. ಇದೀಗ ಬೆಂಗಾಲ್​ ವಾರಿಯರ್ಸ್​ ವಿರುದ್ಧ ಪಟನಾ ಪೈರೇಟ್ಸ್​ ಆಡಬೇಕಿದ್ದು, ಆ ಪಂದ್ಯದಲ್ಲಿ ಜಯಶಾಲಿಯಾದವರು ಗುಜರಾತ್​ ತಂಡದ ವಿರುದ್ಧ ಫೈನಲ್​ನಲ್ಲಿ ಆಡಲಿದೆ. ನಾಳಿದ್ದು ಗುರುವಾರ ಚೈನ್ನೈನಲ್ಲಿ ಸೆಮಿಫೈನಲ್​ ಪಂದ್ಯ ನಡೆಯಲಿದೆ. […]

  Read More

2018ರಲ್ಲಿ ಚಂದ್ರಯಾನ-2 ಉಪಗ್ರಹ ಉಡಾವಣೆ

ಚಂದ್ರಯಾನ-2 ಉಪಗ್ರಹವನ್ನು ಮುಂದಿನ ವರ್ಷ ಉಡಾವಣೆ ಮಾಡಲಾಗುವುದು ಎಂದು ಕೇಂದ್ರ ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, 2018ರ ಮಾರ್ಚ್ ತಿಂಗಳೊಳಗಾಗಿ ಚಂದ್ರಯಾನ-2 ಉಪಗ್ರಹ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ವಿಶ್ವಮಟ್ಟದಲ್ಲಿ ಮುಂಚೂಣಿ ಸ್ಥಾನ ಪಡೆದುಕೊಳ್ಳುತ್ತಿದೆ ಎಂದಿದ್ದಾರೆ. 2008ರ ನವೆಂಬರ್​ನಲ್ಲಿ ಇಸ್ರೋ ಚಂದ್ರಯಾನ -1 ಯೋಜನೆ ಕೈಗೊಂಡಿತ್ತು. ಸುಮಾರು ಒಂದು ವರ್ಷದ ನಂತರ, ತಾಂತ್ರಿಕ ಕಾರಣಗಳಿಂದ ಉಪಗ್ರಹ ನಿಷ್ಕ್ರಿಯವಾಗಿ […]

  Read More

ರಾಜ್ಯದಲ್ಲಿ ಭೀಕರ ಅಪಘಾತಗಳು. ಸೋಮವಾರದ ಮಳೆಯಿಂದಾದ ಅವಾಂತರ.

ಬೆಂಗಳೂರು: ಸೋಮವಾರ ಬೆಳ್ಳಂಬೆಳಗ್ಗೆಯೇ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು ಮೂರು ಭೀಕರ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ ಒಟ್ಟು ಮೂರು ಜನ ಮೃತಪಟ್ಟಿದ್ದು, ಹಲವಾರು ಜನರಿಗೆ ಗಂಭೀರ ಗಾಯಗಳಾಗಿವೆ. ಗಜೇಂದ್ರಗಡದ ಬಳಿಯ ಕೊಟಗಾನೂರು, ಚಿತ್ರದುರ್ಗದ ಬಳಿ ಹಿರಿಯೂರು ಮತ್ತು ಬೆಂಗಳೂರು ಸೇರಿದಂತೆ ಒಟ್ಟು ಮೂರು ಅಪಘಾತಗಳು ಸಂಭವಿಸಿವೆ. ಗಜೇಂದ್ರಗಡದಿಂದ ಗದಗ್​ಗೆ ತೆರಳುತ್ತಿದ್ದ ಬಸ್​ ಪಲ್ಟಿ ಗಜೇಂದ್ರಗಡದ ಕೊಡಗಾನೂರು ಬಳಿ ರಾಜ್ಯ ಸಾರಿಗೆ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ ಮತ್ತು 7 ಮಂದಿಗೆ […]

  Read More