Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News

Breaking News

ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು:ರಾಜ್ಯ ಸರ್ಕಾರ

ಬೆಂಗಳೂರು: 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು. ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗಲು ಅವಕಾಶ ನೀಡದಂತೆ ನಿಯಮ ರೂಪಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಹೊಸ ನಿಯಮವು ಈಗಾಗಲೇ ರಸ್ತೆಯಲ್ಲಿ ಓಡಾಡುತ್ತಿರುವ ದ್ವಿಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲ. ಆದರೆ ಹೊಸದಾಗಿ ಮಾರಾಟವಾಗುವ 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ. ಬೈಕ್​ ತಯಾರಕರು ಕೇವಲ ಓರ್ವ ವ್ಯಕ್ತಿ ಮಾತ್ರ ಕುಳಿತುಕೊಳ್ಳುವಂತೆ ಸೀಟಿನ […]

  Read More

ಯೋಧರೇ, ನಿಮಗಿದೋ ಸಲಾಂ! ನನ್ನಿಂದ ಏನಾಗ್ಬೇಕು ಹೇಳಿ, ಮಾಡುವೆ ಅಂದ್ರು ದೀದಿ

ಮುಂಬೈ: ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್​ ಅವರು ಭಾಯ್​ ದೂಜಾ ಹಬ್ಬದ ಪ್ರಯುಕ್ತ ದೇಶ ಕಾಯುವ ಯೋಧರಿಗೆ ವಿಶೇಷ ವಿಡಿಯೋ ಸಂದೇಶವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಶುಕ್ರವಾರ ರಾತ್ರಿ ಲತಾ ಮಂಗೇಶ್ಕರ್​ ಅವರು ವಿಡಿಯೋವನ್ನು ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಯೋಧರಿಗೆ ಶುಭ ಕೋರಿದ್ದು, ಭಾರತೀಯ ಸೇನೆಯ ಯೋಧರಿಗೆ ನಾನು ಸೆಲ್ಯೂಟ್​ ಮಾಡುತ್ತೇನೆ. ನಾನು ನಿಮ್ಮ ಸಹೋದರಿಯಾಗಿದ್ದು, ನಿಮ್ಮನ್ನು ಗೌರವಿಸುತ್ತೇನೆ. ಭಾರತ ಇರುವುದೇ ಯೋಧರಿಂದ, ನಾವಿರುವುದೇ ಭಾರತದಿಂದ ಎಂದು ತಿಳಿಸಿದ್ದಾರೆ. 88 ವರ್ಷದ ಹಿರಿಯ ಗಾಯಕಿ ತಮ್ಮ ವೃತ್ತಿ […]

  Read More

ರೈಲ್ವೆಯ ಅಮೂಲ್ಯ ಚಿಂತನೆ! ಇಷ್ಟು ದಿನ ಇಲ್ಲದ್ದು ಈಗ ಹೇಗೆ ಸಾಧ್ಯ?

ನವದೆಹಲಿ: ಇಂದಿನ ವೇಗದ ಪ್ರಪಂಚದಲ್ಲಿ ಸಮಯದ ಮೌಲ್ಯ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ರೈಲುಗಳ ಸಂಚಾರ ಅವಧಿಯನ್ನು ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಸುಮಾರು 500 ಪ್ರಮುಖ ರೈಲುಗಳ ಸಂಚಾರದ ಸಮಯವನ್ನು 2 ಗಂಟೆಗಳವರೆಗೂ ಇಳಿಸಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಈ ನೂತನ ರೈಲ್ವೆ ವೇಳಾಪಟ್ಟಿಯು​ ಮುಂದಿನ ನವೆಂಬರ್​ನಿಂದ ಜಾರಿಗೆ ಬರಲಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಅವರ ನಿರ್ದೇಶನದಂತೆ ಎಲ್ಲಾ ರಾಷ್ಟ್ರೀಯ ರೈಲು ಸಂಚಾರದ ಆಧುನಿಕ ವೇಳಾಪಟ್ಟಿಯನ್ನು ಜಾರಿಗೆ ತರಲಾಗುತ್ತಿದೆ. […]

  Read More

ಮಹಾಲಕ್ಷ್ಮಿಗೆ 100 ಕೋಟಿ ರೂ. ಮೌಲ್ಯದ ನೋಟುಗಳಿಂದ ಅಲಂಕಾರ

ಭೋಪಾಲ್​: ಮಧ್ಯಪ್ರದೇಶದ ರತ್ಲಮ್​ನ ಮಹಾಲಕ್ಷ್ಮೀಜೀ ದೇವಾಲಯದಲ್ಲಿ ಧನ್​ತೇರಾಸ್​ ಅಂಗವಾಗಿ ಸುಮಾರು 100 ಕೋಟಿ ರೂ. ಮೌಲ್ಯದ ನೋಟುಗಳಿಂದ  ದೇವರ ವಿಗ್ರಹಕ್ಕೆ ಅಲಂಕಾರ ಮಾಡಲಾಗಿದೆ. ಈ ದೇವಸ್ಥಾನದ ಮತ್ತೊಂದು ವಿಶೇಷತೆಯೆಂದ್ರೆ, ದೀಪಾವಳಿಯ ವೇಳೆಯಲ್ಲಿ ಭಕ್ತರು ಇಲ್ಲಿನ ಪ್ರಧಾನ ಅರ್ಚಕರಿಗೆ ಹಣ, ಒಡವೆ ಮುಂತಾದ ಬೆಲೆಬಾಳುವ ವಸ್ತುಗಳನ್ನು ದಾನ ಮಾಡುತ್ತಾರೆ. ಒಟ್ಟಾರೆ 100 ಕೋಟಿ ರೂ. ಮೌಲ್ಯದ ನೋಟುಗಳು ಅಪಾರ ಪ್ರಮಾಣದ ಒಡವೆಗಳನ್ನು ಮಹಾಲಕ್ಷ್ಮೀಜೀ ದೇವಾಲಯದಲ್ಲಿ ಅಲಂಕಾರಕ್ಕೆ ಇಡಲಾಗಿದೆ. ಹಲವು ವರ್ಷಗಳಿಂದ ಈ ದೇವಾಲಯದಲ್ಲಿ ಇದೇ ಪದ್ಧತಿ ಇದೆ ಅಂತ ಹೇಳಲಾಗುತ್ತಿದೆ. (ಏಜೆನ್ಸೀಸ್​)

  Read More

ಜನಧನ ಎಫೆಕ್ಟ್: ಗ್ರಾಮೀಣ ಭಾಗದಲ್ಲಿ ಮದ್ಯಸೇವನೆ ಪ್ರಮಾಣ ಇಳಿಕೆ

ನವದೆಹಲಿ: ದೇಶದಲ್ಲಿ ಪ್ರತಿಯೊಬ್ಬರೂ ಬ್ಯಾಂಕ್​ ಖಾತೆ ಹೊಂದಿರಬೇಕು ಎಂದು ಕೆಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಜನಧನ ಯೋಜನೆಗೆ ಚಾಲನೆ ನೀಡಿತ್ತು. ಜನಧನ ಯೋಜನೆ ಈಗ ಫಲ ನೀಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಉಳಿತಾಯ ಮಾಡುತ್ತಿದ್ದಾರೆ. ಇದಕ್ಕಿಂತಲೂ ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಜನರು ಮದ್ಯಸೇವನೆ ಮತ್ತು ತಂಬಾಕು ಸೇವನೆ ಇಳಿಮುಖವಾಗಿದೆ ಎಂಬುದು ತಿಳಿದು ಬಂದಿದೆ. ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಆರ್ಥಿಕ ಸಂಶೋಧನಾ ಘಟಕ ತನ್ನ ವರದಿಯಲ್ಲಿ ಜನಧನ ಯೋಜನೆಯ ಫಲಶೃತಿಯ ಕುರಿತು […]

  Read More

ಮಳೆಗೆ ಐದು ಜೀವ ಬಲಿ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ ರಾಜಧಾನಿಯಲ್ಲಿ ತಾಯಿ-ಮಗಳು ಸೇರಿ ಐವರು ಬಲಿಯಾಗಿದ್ದಾರೆ. ಮೂವರು ನೀರಿನಲ್ಲಿ ಕೊಚ್ಚಿ ಹೋದರೆ ಇನ್ನಿಬ್ಬರು ಮನೆ ಕುಸಿದು ಕೊನೆಯುಸಿರೆಳೆದಿದ್ದಾರೆ. ಮಳೆ ಆರ್ಭಟಕ್ಕೆ ಜಾನುವಾರುಗಳೂ ತತ್ತರಿಸಿದ್ದು, ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ 15 ಹಸುಗಳು ಹಾಗೂ 6 ಎಮ್ಮೆಗಳು ಮೃತಪಟ್ಟಿವೆ. ಈ ಅನಾಹುತಗಳ ಬೆನ್ನಲ್ಲೇ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಭಾರಿ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಜನಜೀವನ ಇನ್ನಷ್ಟು ಅಯೋಮಯವಾಗುವ ಲಕ್ಷಣಗಳು ಗೋಚರಿಸಿವೆ. […]

  Read More

ವಕೀಲರ ಬಡ್ತಿಗೆ ಸುಪ್ರೀಂ ಸೂತ್ರ

ಹೊಸದಿಲ್ಲಿ: ನ್ಯಾಯವಾದಿಗಳಿಗೆ ಹಿರಿತನದ ಶ್ರೇಣಿ ಗುರುತಿಸುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ ತನಗೆ ಹಾಗೂ 24 ಹೈಕೋರ್ಟ್‌ಗಳು ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳ ಪಟ್ಟಿಯನ್ನು ಪ್ರಕಟಿಸಿದೆ. ಇದೇ ವೇಳೆ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಒಂದು ಕಾಯಂ ಸಮಿತಿ ರಚನೆಗೂ ಸಲಹೆ ನೀಡಲಾಗಿದೆ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ಗೆ ಸೀನಿಯರ್‌ ಅಡ್ಟೊಕೇಟ್‌ಗಳನ್ನು ನೇಮಕ ಮಾಡಲು ಅಧಿಕಾರ ನೀಡುವ 1961ರ ಅಡ್ವೊಕೇಟ್‌ ಆ್ಯಕ್ಟ್ನ ಸೆಕ್ಷನ್‌ 16ನ್ನು ಅಸಾಂವಿಧಾನಿಕ ಎಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌, ಆರ್‌ ಆಫ್‌ […]

  Read More

ಟೆಸ್ಟ್ ಬೌಲರ್‌ ರ‍್ಯಾಂಕಿಂಗ್: ಅಶ್ವಿನ್‌ ಹಿಂದಿಕ್ಕಿದ ರಬಾಡ

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ಟೆಸ್ಟ್ ಬೌಲರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಬುಧವಾರ ಮೂರನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಭೂತಪೂರ್ವ ಬೌಲಿಂಗ್ ಸಾಮರ್ಥ್ಯ ತೋರಿರುವ ರಬಾಡ ರ‍್ಯಾಂಕಿಂಗ್‌ನಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ. ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರಬಾಡ ಎರಡೂ ಇನಿಂಗ್ಸ್‌ಗಳಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಇವರ ಬೌಲಿಂಗ್ ಸಾಮರ್ಥ್ಯದಿಂದಾಗಿ ದಕ್ಷಿಣ ಆಫ್ರಿಕಾ ತಂಡ ಇನಿಂಗ್ಸ್ ಹಾಗೂ 254 ರನ್‌ಗಳ […]

  Read More

ಇಂದಿನಿಂದ ಹಾಸನಾಂಬೆ ದರ್ಶನ

 ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಅ. 12ರಿಂದ ಪ್ರಾರಂಭವಾಗಲಿದ್ದು, ಈ ಬಾರಿ 8 ದಿನ 24 ತಾಸು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 12ರಿಂದ 21ರ ವರೆಗೆ ಹಾಸನಾಂಬ ದೇವಿ ಬಾಗಿಲು ತೆರೆದಿರುತ್ತದೆ. ಬಾಗಿಲು ತೆರೆಯುವ ದಿನ (ಅ.12) ಹಾಗೂ ಮುಚ್ಚುವ ದಿನ (ಅ.21ರಂದು) ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಪೂಜಾ ಅವಧಿಯನ್ನು ಕಡಿಮೆಗೊಳಿಸಲಾಗಿದ್ದು, ನೈವೇದ್ಯ, ಅಲಂಕಾರ ಮತ್ತು ಶುಚಿತ್ವಕ್ಕಾಗಿ ಎರಡು ತಾಸು ನೀಡಲಾಗಿದೆ. ದೇವಾಲಯ ಪ್ರವೇಶಕ್ಕೆ ಪ್ರತಿ ವರ್ಷ ನೀಡುತ್ತಿದ್ದ ವಿಶೇಷ ಪಾಸ್‌ ವ್ಯವಸ್ಥೆ […]

  Read More

ಮೊದಲ ಪಂದ್ಯದಲ್ಲೇ ಲಯ ಕಂಡುಕೊಳ್ಳುವ ವಿಶ್ವಾಸವಿದೆ : ಮನ್​ಪ್ರೀತ್

ಏಷ್ಯಾದ ನಂ. 1 ಪಟ್ಟ ಉಳಿಸಿಕೊಳ್ಳುವ ಹಂಬಲದಲ್ಲಿರುವ ಭಾರತ ತಂಡ ಢಾಕಾದಲ್ಲಿ ಬುಧವಾರ ಆರಂಭವಾಗಲಿರುವ 10ನೇ ಆವೃತ್ತಿಯ ಪುರುಷರ ಹಾಕಿ ಏಷ್ಯಾಕಪ್​ನಲ್ಲಿ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ. ಜಪಾನ್ ವಿರುದ್ಧ ಮೊದಲ ಪಂದ್ಯ ಆಡಲಿರುವ ಮಿಡ್​ಫೀಲ್ಡರ್ ಮನ್​ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡಕ್ಕೆ ಹೊಸ ಕೋಚ್ ನೆದರ್ಲೆಂಡ್​ನ ಜೊಯೆರ್ಡ್ ಮರಿಜ್ನೆ ಮಾರ್ಗದರ್ಶನದಲ್ಲಿ ಇದು ಮೊದಲ ಸವಾಲಾಗಿದೆ. ಕಳೆದ 4 ವರ್ಷಗಳ ಕಾಲ ರೋಲ್ಯಾಂಟ್ ಓಲ್ಟ್​ಮನ್ಸ್ ಗರಡಿಯಲ್ಲಿ ಪಳಗಿದ್ದ ಭಾರತ ತಂಡ ಇದೀಗ 43 ವರ್ಷದ ಮರಿಜ್ನೆ ತರಬೇತಿಯಲ್ಲಿ ಹೊಸ […]

  Read More