Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News

Breaking News

18 ವರ್ಷದೊಳಗಿನ ಪತ್ನಿಯೊಂದಿಗೆ ಸೆಕ್ಸ್‌ ರೇಪ್‌ಗೆ ಸಮ

’18 ವರ್ಷದ ಒಳಗಿನ ಪ್ರಾಯದ ಪತ್ನಿಯೊಡನೆ ನಡೆಸುವ ಲೈಂಗಿಕ ಸಂಪರ್ಕ ಶಿಕ್ಷಾರ್ಹ ಅಪರಾಧ” ಎಂದು ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.               ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿ ತೀರ್ಪು ನೀಡಿದ ಸರ್ವೋಚ್ಛ ನ್ಯಾಯಾಲಯ ”15ರಿಂದ 18 ವರ್ಷದೊಳಗಿನ ವಿವಾಹಿತೆಯ ಮೇಲೆ ಲೈಂಗಿಕ ಕ್ರಿಯೆಗಾಗಿ ಒತ್ತಾಯ ನಡೆದರೆ ಎಫ್ಐಆರ್‌ ದಾಖಲಿಸಿ ಅತ್ಯಾಚಾರ ಎಂದು ಪರಿಗಣಿಸಬೇಕು” ಎಂದು ತೀರ್ಪು ನೀಡಿದೆ.

  Read More

ರಷ್ಯಾದ ಆಗರ್ಭ ಶ್ರೀಮಂತನಿಗೆ ಭಿಕ್ಷಾಟನೆ ಯೋಗ

ವಿಶ್ವಪರ್ಯಟನೆ ಹೊರಟವನು ಕಾಸಿಲ್ಲದೆ ದೇಗುಲದ ಭಿಕ್ಷಾಟನೆಗೆ ಕುಳಿತ ರಷ್ಯಾದ ಆಗರ್ಭ ಶ್ರೀಮಂತ ಪ್ರವಾಸಿಗನ ಕಥೆಯಿದು. ದೇವಸ್ಥಾನ, ಮಠ-ಮಂದಿರಗಳ ಮುಂದೆ, ಬಸ್‌ ನಿಲ್ದಾಣ ಅಥವಾ ರೈಲು ನಿಲ್ದಾಣಗಳಲ್ಲಿ ನಿರ್ಗತಿಕರು ಭಿಕ್ಷಾಟನೆ ಮಾಡುವುದು ಸರ್ವೇಸಾಮಾನ್ಯ. ಆದರೆ, ರಜೆಯ ಮಜಾ ಅನುಭವಿಸಲು ಭಾರತಕ್ಕೆ ಬಂದಿದ್ದ ಶ್ರೀಮಂತ ವಿದೇಶಿ ಪ್ರವಾಸಿಗನೊಬ್ಬ ದೇವಸ್ಥಾನದಲ್ಲಿ ಭಿಕ್ಷಾಟನೆಗಿಳಿಯುವುದೆಂದರೆ? ತಮಾಷೆ ಎನಿಸಬಹುದು. ಆದರೆ ನಡೆದದ್ದು ನಿಜ… ಇಲ್ಲಿನ ಶ್ರೀ ಕುಮಾರಕೊಟ್ಟಂ ದೇವಸ್ಥಾನದ ದ್ವಾರದಲ್ಲಿ ಬುಧವಾರ ಭಕ್ತಾದಿಗಳಿಗೆ ಅಂಥದ್ದೊಂದು ದೃಶ್ಯ ಕಾಣಸಿಕ್ಕಿತು. ಆತ ರಷ್ಯಾ ಪ್ರವಾಸಿಗ. ಹೆಸರು ಎ. ಇವಾಂಗೆಲಿನ್‌ […]

  Read More

ಪತ್ನಿಯ ಹತ್ಯೆ ಮಾಡಿದ ಭಾರತೀಯನಿಗೆ ಶಿಕ್ಷೆ ಏನು ಗೊತ್ತಾ?

ನ್ಯೂ ಯಾರ್ಕ್: ಹೆಂಡತಿಯನ್ನು ಇರಿದು ಕೊಲೆ ಮಾಡಿದ ಅಪರಾಧದಲ್ಲಿ 28 ವರ್ಷದ ಭಾರತೀಯ ಮೂಲದ ವ್ಯಕ್ತಿಗೆ ಅಮೇರಿಕಾದಲ್ಲಿ 20 ವರ್ಷ ಜೈಲು ಶಿಕ್ಷೆಯಾಗಿದೆ. ಹೆಂಡತಿ ತನಗೆ ಮತ್ತೊಬ್ಬನ ಜೊತೆಗೆ ಸಂಬಂಧವಿರುವುದನ್ನ ಹೇಳಿಕೊಂಡಿದ್ದಾಳೆ ಎಂದು ಕುಪಿತಗೊಂಡ ಪತಿ 40 ಬಾರಿ ಇರಿದು ಕೊಲೆ ಮಾಡಿದ್ದಾನೆ. ನಿತಿನ್ ಪಿ ಸಿಂಗ್ ಎಂಬ ವ್ಯಕ್ತಿ ಈ ಅಪರಾಧ ಮಾಡಿದ್ದಾನೆ. ಪ್ರಥಮ ದರ್ಜೆ ಚಿತ್ರಹಿಂಸೆಯ ಹತ್ಯೆ ಇದಾಗಿರುವುದರಿಂದ ಶೇ. 85 ಜೈಲು ಶಿಕ್ಷೆಗೆ ಅನುಭವಿಸುವವರೆಗೆ ಈತನಿಗೆ ಪೆರೋಲ್​ ನೀಡುವಂತೆಯೂ ಇಲ್ಲ ಎಂದು ಕೋರ್ಟ್​ ಆದೇಶಿಸಿದೆ. […]

  Read More

ಬಾಲಿವುಡ್ ನ ಖ್ಯಾತ ನಿರ್ದೇಶಕ ಕುಂದನ್ ಶಾ ನಿಧನ

ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಕುಂದನ್ ಶಾ (69) ಇಂದು ಮುಂಜಾನೆ ಮುಂಬೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. 1983ರಲ್ಲಿ ಜಾನೇ ಭಿ ದೋ ಯಾರೋ ಕಾಮಿಡಿ ಸಿನಿಮಾ ಮೂಲಕ ಜನಪ್ರಿಯರಾಗಿದ್ದ ಅವರು ಕೆಲವು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿದ್ದರು. ಅತ್ಯುತ್ತಮ ನಿರ್ದೇಶನಕ್ಕಾಗಿ ಇಂದಿರಾಗಾಂಧಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದ ಅವರು ಹಲವಾರು ಪುರಸ್ಕಾರಗಳಿಗೂ ಪಾತ್ರರಾಗಿದ್ದರು. ಕುಂದನ್ ಶಾ ನಿಧನಕ್ಕೆ ಬಾಲಿವುಡ್ ನಟ-ನಟಿಯರು, ಮತ್ತು ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

  Read More

27 ಸರಕುಗಳ ಜಿಎಸ್ಟಿ ದರ ಪರಿಷ್ಕರಣೆ: ಕೇಂದ್ರದಿಂದ ದೀಪಾವಳಿ ಗಿಫ್ಟ್

       ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಗಿಫ್ಟ್ ರೂಪದಲ್ಲಿ 27 ಸರಕುಗಳ ಜಿಎಸ್ಟಿ ದರಗಳನ್ನು ತೆರಿಗೆ ಪರಿಷ್ಕರಣೆ ಮಾಡಿದ್ದು,ಈ ಮೂಲಕ ತೆರಿಗೆ ಸುಧಾರಣೆಯಿಂದ ತೊಂದರೆಯಲ್ಲಿದ್ದ ರಫ್ತುದಾರರು ಮತ್ತು ವ್ಯಾಪಾರಿಗಳಿಗೆ ನೆಮ್ಮದಿಯನ್ನು ನೀಡಿದೆ. ಕೆಲವು ಸ್ಟೇಷನರಿ ವಸ್ತುಗಳು, ಡೀಸೆಲ್ ಇಂಜಿನ್ ಬಿಡಿಭಾಗಗಳ ಮೇಲಿನ ಜಿಎಸ್ಟಿಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ. ವಾರ್ಷಿಕ ಒಂದೂವರೆ ಕೋಟಿಯೊಳಗೆ ವ್ಯವಹಾರ ನಡೆಸುವ ವ್ಯವಹಾರಸ್ಥರಿಗೆ ಮೂರು ತಿಂಗಳಿಗೊಮ್ಮೆ ತೆರಿಗೆ ಪಾವತಿಸಲು ಜಿಎಸ್ ಟಿ ಕೌನ್ಸಿಲ್ ಅವಕಾಶ ನೀಡಿದೆ. 22ನೇ ಜಿಎಸ್ ಟಿ ಕೌನ್ಸಿಲ್ […]

  Read More

ಉಗ್ರ ಸಂಘವಿರುವುದಾಗಿ ಒಪ್ಪಿದ ಪಾಕ್ ಸೇನೆ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಭಯೋತ್ಪಾದಕರ ಜತೆ ಸಂಪರ್ಕ ಹೊಂದಿದೆ ಎಂಬುದನ್ನು ಕಡೆಗೂ ಪಾಕಿಸ್ತಾನ ಸೇನೆ ಒಪ್ಪಿಕೊಂಡಿದೆ. ಆದರೆ, ಇದರರ್ಥ ಉಗ್ರ ಸಂಘಟನೆಗಳಿಗೆ ಐಎಸ್‌ಐ ಬೆಂಬಲಿಸುತ್ತಿದೆವೆಂದಲ್ಲ, ಎಂಬ ಅಡ್ಡ ಗೋಡೆ ಮೇಲೆ ದೀಪವಿಟ್ಟಂತ ಹೇಳಿಕೆ ನೀಡಿದೆ. ಒಂದೆಡೆ ಉಗ್ರರಿಗೆ ಬೆಂಬಲವಿಲ್ಲವೆಂಬುದನ್ನು ಸ್ಪಷ್ಟಪಡಿಸಿದ ಸೇನೆ, ಮತ್ತೊಂದೆಡೆ ಮುಂಬಯಿ ದಾಳಿ ರೂವಾರಿ ಹಫೀಜ್ ಬೆಂಬಲಿತ ಸಯೀದ್‌ ಉಗ್ರ ಸಂಘಟನೆಯ ರಾಜಕೀಯ ಘಟಕ ಮಿಲ್ಲಿ ಮುಸ್ಲಿಂ ಲೀಗ್‌ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂದೂ ಹೇಳಿದೆ. ಆದರೆ, ಪಾಕಿಸ್ತಾನ ಚುನಾವಣಾ ಆಯೋಗ […]

  Read More

ಮಾನನಷ್ಟ ನೋಟಿಸ್‍ಗೆ ಹೆದರಲ್ಲ ಎಂದ ಕಂಗನಾ

ಹಿಮಾ ಚಲ ಪ್ರದೇಶದ ಬೆಡಗಿ ಕಂಗನಾ ರನಾವತ್ ಬಾಲಿವುಡ್ ಸಿಡಿಗುಂಡು(ಫೈರ್‍ಬ್ರಾಂಡ್) ಮತ್ತು ಜಗಳಗಂಟಿ ಎಂಬುದು ಅಗಾಗ ಜಗಜ್ಜಾಹೀರವಾಗುತ್ತಲೇ ಇರುತ್ತದೆ. ಸಿಕ್ಸ್‍ಪ್ಯಾಕ್ಸ್ ಹ್ಯಾಂಡ್‍ಸಮ್ ಹೀರೋ ಹೃತಿಕ್ ರೋಷನ್ ಮತ್ತು ಅವರ ತಂದೆ ನಿರ್ಮಾಪಕ/ನಿರ್ದೇಶಕ ರಾಕೇಶ್ ರೋಷನ್ ಅವರಿಗೇ ತಿರುಗೇಟು ನೀಡಿದ ಮಹಾ ಬಜಾರಿ ಈಕೆ. ನಾನು ಗಂಡುಬೀರಿ. ಇಂಥ ಜನರ ನಡುವೆ ನಾನು ಹಾಗೆಯೇ ಇರಬೇಕು ಎಂದು ಎಷ್ಟೋ ಸಂದರ್ಭಗಳಲ್ಲಿ ಹೇಳಿಕೊಂಡಿರುವ ಕಂಗನಾ ಈಗ ವಿವಾದಾತ್ಮಕ ಹಿರಿಯ ಅಭಿನೇತ ಆದ್ಯಿತ ಪಂಚೋಲಿಗೂ ಬಿಸಿ ಮುಟ್ಟಿಸಿದ್ದಾಳೆ. ಕಂಗನಾ-ಹೃತಿಕ್ ಕಾನೂನು ಸಮರದ […]

  Read More

ಒಂದೇ ದಿನ 13.46 ಕೋಟಿ ಆದಾಯ ಗಳಿಸಿದ ಕೆಎಸ್‌ಆರ್‌ಟಿಸಿ

ಒಂದೇ ದಿನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಂಸ್ಥೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ 13.46 ಕೋಟಿ ರೂ. ಅತ್ಯಧಿಕ ದಾಖಲೆಯ ಆದಾಯವನ್ನು ಗಳಿಸಿದೆ.  ಅ.3 ರಂದು ನಿಗಮವು ಒಟ್ಟು 13.46ಕೋಟಿ ರೂ. ಆದಾಯ ಗಳಿಸಿದೆ. ಈ ಆದಾಯವು ನಿಗಮದ ಚರಿತ್ರೆಯಲ್ಲಿಯೇ ದಾಖಲೆಯ ಸಾಧನೆಯಾಗಿದೆ.  2015ರ ದಸರಾ ಸಂದರ್ಭದಲ್ಲಿ ಸಂಸ್ಥೆ ಗಳಿಸಿದ ಆದಾಯ 12.75 ಕೋಟಿ ರೂ. ಆಗಿತ್ತು. ಏಪ್ರಿಲ್ 2017 ರಿಂದ ಅಕ್ಟೋಬರ್ 03ರವರೆಗೆ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ 132.16 ಕೋಟಿಯಷ್ಟು ಹೆಚ್ಚುವರಿ […]

  Read More

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಳೆ ನೀರಿಗೆ ಮಹಾನಗರಿಯ ಕೆಲ ರಸ್ತೆಗಳು ಜಲಾಮಯವಾಗಿವೆ. ಇದರಿಂದ ವಾಹನ ಸವಾರರು ಪರದಾಡುವಂತ ಸ್ಥಿತಿ ಉಂಟಾಗಿದೆ. ವಿಪರೀತ ಗುಡುಗು ಸಿಡಿಲುಗಳು ಇದ್ದು, ಎಲ್ಲಿ ನೋಡಿದರೂ ನೀರು ನೀರು ಎನ್ನುವಂತಾಗಿದೆ… ನಿನ್ನೆ ಸಂಜೆಯೂ ಮಳೆ ಜೋರಾಗಿದ್ದು, ಇವತ್ತು ಮಧ್ಯಾಹ್ನದಿಂದಲೇ ಪ್ರಾರಂಭಗೊಂಡು ಭರ್ರನೇ ಸುರಿಯುತ್ತಲೇ ಇದೆ. ರಜಾದಿನವಾದ್ದರಿಂದ ಅಷ್ಟೊಂದು ಜನ ಸಂದಣಿ ಇಲ್ಲ ಆದರೂ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ…

  Read More

ಪೆರೋಲ್ಗೆ ಶಶಿಕಲಾ ಅರ್ಜಿ ಸಲ್ಲಿಕೆ- ಚೆನ್ನೈ ಕಮಿಷನರ್ ಕಚೇರಿಯಿಂದ ಅನುಮತಿ ಸಾಧ್ಯತೆ- ಇಂದು ಮಧ್ಯಾಹ್ನದ ವೇಳೆಗೆ ಹೊರ ಬರಬಹುದು ಚಿನ್ನಮ್ಮ

  Read More