Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News

Breaking News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಕುರ್ಚಿಯಲ್ಲಿ…

ಬೆಂಗಳೂರು, ಜೂ.22- ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿರುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಂಚಿಕೆ ಪ್ರಸಾರಗೊಂಡ ನಂತರ ಅದರ ಬಗ್ಗೆ ಸಾಕಷ್ಟು ಕ್ರೇಜ್ ಹುಟ್ಟಿದೆ. ಈ ವಾರ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಧಕರ ಕುರ್ಚಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರು ಆ ಕಾರ್ಯಕ್ರಮದಲ್ಲಿ ತಮ್ಮ ಬಾಲ್ಯದ ನೆನಪು, ಹೋರಾಟದ ಬದುಕು, ಅವರ ವಿದ್ಯಾಭ್ಯಾಸ, ಹಳ್ಳಿ ಸೊಗಡಿನ ಜೀವನದ ಸ್ಮರಣೆ, ರಾಜಕೀಯ […]

  Read More

ವಿವಾದಿತ ಪಿಓಕೆಯಲ್ಲಿ ಪಾಕಿಸ್ಥಾನದ ಬೃಹತ್ ಅಣೆಕಟ್ಟಿಗೆ ಚೀನದ ಹಣ ?

ಬೀಜಿಂಗ್ : ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಬೃಹತ್ ದೈಮರ್-ಭಾಷಾ ಅಣೆಕಟ್ಟು ನಿರ್ಮಾಣಕ್ಕಾಗಿ ಚೀನವು 14 ಶತಕೋಟಿ ಡಾಲರ್ ಮೊತ್ತವನ್ನು ಒದಗಿಸಲಿದ್ದು ಇದನ್ನು 50 ಶತಕೋಟಿ ಡಾಲರ್ಗಳ ಚೀನ – ಪಾಕಿಸ್ಥಾನ ಆರ್ಥಿಕ ವಲಯ ಯೋಜನೆಗೆ ಸೇರ್ಪಡೆಗೊಳಿಸಲಿದೆ ಎಂಬ ವರದಿಗಳು ಪಾಕ್ ಮಾಧ್ಯಮದಲ್ಲಿ ಪ್ರಕಟವಾಗಿದ್ದು ಈ ಬಗ್ಗೆ ಚೀನ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವನ್ನು ಪ್ರದರ್ಶಿಸಿದೆ. ಪಾಕ್ ಮಾಧ್ಯಮಗಳಲ್ಲಿ ವರದಿಯಾಗಿರುವ ಬೃಹತ್ ಪಿಓಕೆ ಅಣೆಕಟ್ಟಿನ ಬಗ್ಗೆ ನಮಗೆ ಯಾವುದೇ ಮಾಹಿತಿಗಳಿಲ್ಲ; ಆ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು […]

  Read More

ಅಶ್ರಫ್ ಕೊಲೆ; ಜೂನ್ 27 ರ ತನಕ ನಾಲ್ಕು ತಾಲೂಕುಗಳಲ್ಲಿ ನಿಷೇಧಾಜ್ಞೆ

ಬಂಟ್ವಾಳ: ಬಂಟ್ವಾಳದ ಬೆಂಜನಪದುವಿನಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತ ಅಶ್ರಫ್ ಎಂಬವರನ್ನು ದುಷ್ಕರ್ಮಿಗಳು ಹತ್ಯೆ ನಡೆಸಿರುವ ಹಿನ್ನಲೆಯಲ್ಲಿ ದಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಜೂನ್ 29 ರ ತನಕ ನಿಷೇಧಾಜ್ಷೆ ಹೇರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಶ್ರಫ್ ಕೊಲೆಯ ಬಳಿಕ ಕೆಲವು ದುಷ್ಕರ್ಮಿಗಳು ಬಸ್ಸುಗಳು ಹಾಗೂ ಕೆಲವು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಪೋಲಿಸರು ಹೆಚ್ಚಿನ ಮಟ್ಟದ ಭದ್ರತೆಯನ್ನು ಒದಗಿಸಿದ್ದಾರೆ. ಮುಂಜಾಗ್ರತ ಕ್ರಮವಾಗಿ ಜಿಲ್ಲಾಧಿಕಾರಿ ನಾಲ್ಕು […]

  Read More

ರಾಜಕೀಯ ಬದ್ಧವೈರಿಗಳು ಎನ್ನಲಾಗುವ ಹೆಚ್ಡಿಕೆ-ಡಿಕೆಶಿ ಮುಖಾಮುಖಿ…

ಬೆಂಗಳೂರು. ಜೂ.20 : ಇಂದು ನಡೆದ ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆ ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. ರಾಜ್ಯ ರಾಜಕೀಯದಲ್ಲಿ ಬದ್ಧವೈರಿಗಳು ಎನ್ನಲಾಗುವ ಡಿಕೆಶಿ ಮತ್ತು ಹೆಚ್ಡಿಕೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಲ್ಲದೆಯೇ ಕೈಕುಲುಕುವ ಮೂಲಕ ನೆರೆದಿದ್ದವರಲ್ಲಿ ಅಚ್ಚರಿಗೆ ಕಾರಣರಾದರು. ಒಕ್ಕಲಿಗರ ಸಂಘದ ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ವೇದಿಕೆಗೆ ಬಂಧ ಹೆಚ್ಡಿಕೆಗೆ ಡಿಕೆಶಿ ಹಸ್ತಲಾಘವ ಮಾಡುವ ಮೂಲಕ ಬರಮಾಡಿಕೊಂಡಿದ್ದು ಆಶ್ಚರ್ಯವನ್ನುಂಟುಮಾಡಿತ್ತು. ಅಷ್ಟೇ ಅಲ್ಲ ಈ ದೃಶ್ಯ ಕಂಡ ಜನರು ಜೈಕಾರ ಕೂಗಿದರು. ನಿರ್ಮಲಾನಂದನಾಥ ಶ್ರೀ ಸಮ್ಮುಖದಲ್ಲಿ ನಡೆದ […]

  Read More

ಮೈದಾನದಲ್ಲೇ ಎಂಎಸ್ ಧೋನಿ ಮೇಲೆ ಸಿಟ್ಟಾದ ವಿರಾಟ್ ಕೊಹ್ಲಿ!

ಎಂಎಸ್ ಧೋನಿ-ವಿರಾಟ್ ಕೊಹ್ಲಿ ಲಂಡನ್: ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೈದಾನದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಜಿ ನಾಯಕ ಎಂಎಸ್ ಧೋನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ಮುಂಗೋಪಿ ಎನ್ನುವುದು ತಿಳಿದ ವಿಚಾರವೇ. ಕೆಲವೊಂದು ವೇಳೆ ಆಟಗಾರರ ಮೇಲೆ ಸಿಟ್ಟಿಗೆಳುವುದು ಸಾಮಾನ್ಯ. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ಕೂಲ್ ನಾಯಕ ಎಂದೇ ಖ್ಯಾತಿ ಗಳಿಸಿದ್ದ ಎಂಎಸ್ ಧೋನಿ ವಿರುದ್ದ ಸಿಟ್ಟಾಗಿದ್ದರು. ಆದರೆ ಕೊಹ್ಲಿ ಧೋನಿ ಮೇಲೆ ಸಿಟ್ಟಾಗಿದ್ದು […]

  Read More

20 ನಕಲಿ ಕಂಪನಿ ಸೃಷ್ಟಿಸಿದ್ದ ಮಲ್ಯ

ಹೊಸದಿಲ್ಲಿ: ವಿವಿಧ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ಸಾಲ ಸುಸ್ತಿ ಮಾಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್‌ ಮಲ್ಯ, 20 ನಕಲಿ ಕಂಪನಿಗಳನ್ನು ಸೃಷ್ಟಿಸಿದ್ದರು ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಈ ಕಂಪನಿಗಳಿಗೆ ಮಲ್ಯ ತಮ್ಮ ವೈಯಕ್ತಿಕ ಸಿಬ್ಬಂದಿ ಅಥವಾ ನಿವೃತ್ತ ಸಿಬ್ಬಂದಿಯನ್ನು ನಿರ್ದೇಶಕರನ್ನಾಗಿ ನೇಮಿಸಿದ್ದರು ಎಂದು ‘ಕಿಂಗ್‌ಫಿಷರ್‌-ಐಡಿಬಿಐ’ ಪ್ರಕರಣದಲ್ಲಿ ಸಲ್ಲಿಸಲಾದ ಆರೋಪ ಪಟ್ಟಿಯಲ್ಲಿ ಇ.ಡಿ. ಉಲ್ಲೇಖಿಸಿದೆ. ಏತನ್ಮಧ್ಯೆ, ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕರ್ನಾಟಕದ ಕೊಡಗಿನಲ್ಲಿರುವ ಕಾಫಿ ಎಸ್ಟೇಟ್‌ ಮತ್ತು ಬೆಂಗಳೂರಿನಲ್ಲಿರುವ ಮಲ್ಯ […]

  Read More

ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ್ರೆ 30 ಸಾವಿರ ಮಾಶಾಸನ ಕೊಡಿ!

ನವದೆಹಲಿ:ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ವೃದ್ಧಾಶ್ರಮಕ್ಕೆ(ಪೋಷಕರನ್ನು ತೊರೆಯುವ) ಸೇರಿಸಲ್ಪಡುವ ಪೋಷಕರು ಅಥವಾ ಹಿರಿಯ ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಶಾಸನ ಕಾಯ್ದೆಗೆ ತಿದ್ದುಪಡಿ ತರುವ ಸಿದ್ಧತೆಯಲ್ಲಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಹಾಲಿ ಪಾಲಕರು ಮತ್ತು ಹಿರಿಯ ನಾಗರಿಕರ ಮಾಸಾಶನ ಕಾಯ್ದೆ-2007ರ ಪ್ರಕಾರ ತಿಂಗಳಿಗೆ 10 ಸಾವಿರ ರೂ ಮಾಶಾಸನ ಎಂದು ನಿಗದಿಯಾಗಿದ್ದು, ಆದರೆ ಹೊಸ ತಿದ್ದುಪಡಿ ಕಾಯ್ಷೆ ಪ್ರಕಾರ ತಿಂಗಳಿಗೆ 25ಸಾವಿರದಿಂದ 30 ಸಾವಿರ ರೂಪಾಯಿ ಹಣವನ್ನು ಮಕ್ಕಳು ಪೋಷಕರ ಪಾಲನೆಗೆ ನೀಡಬೇಕಾಗುತ್ತದೆ […]

  Read More

ಜಂತಕಲ್ ಮೈನಿಂಗ್ ಕೇಸ್; HDKಗೆ ಬಂಧನ ಭೀತಿ, ಜಾಮೀನು ಅರ್ಜಿ ವಜಾ .

ಬೆಂಗಳೂರು: ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ವಿಶೇಷ ಎಸ್ ಐಟಿ ಕೋರ್ಟ್ ಮಂಗಳವಾರ ತಿರಸ್ಕರಿಸಿದ್ದು, ಕುಮಾರಸ್ವಾಮಿ ಬಂಧನ ಭೀತಿ ಎದುರಿಸುವಂತಾಗಿದೆ. ಅಕ್ರಮ ಗಣಿಕಾರಿಕೆ ಪ್ರಕರಣ ಸಂಬಂಧ ಎಚ್ ಡಿ ಕುಮಾರ ಸ್ವಾಮಿ ಅವರು ಜಂತಕಲ್‌ ಮೈನಿಂಗ್‌ ಕಂಪನಿಯಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಕುಮಾರಸ್ವಾಮಿ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಆದರೆ ಲೋಕಾಯುಕ್ತ ಕೋರ್ಟ್ ಕೂಡಾ ನಿರೀಕ್ಷಣಾ ಜಾಮೀನು ಅರ್ಜಿಯನ್ನು […]

  Read More

ಜೂನ್‌ 25-26: ಅಮೆರಿಕ್ಕೆ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್‌ ಆಹ್ವಾನ

ಹೊಸದಿಲ್ಲಿ: ಜಾಗತಿಕ ಹವಾಮಾನ ಬದಲಾವಣೆ ಕುರಿತಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತವನ್ನು ಹೀಗಳೆದ ಬೆನ್ನಲ್ಲೇ, ಈ ಮಾಸಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಜೂ. 25 ಮತ್ತು 26ರಂದು ಮೋದಿ ಅವರು ಶ್ವೇತಭವನದಲ್ಲಿ ದ್ವಿಪಕ್ಷೀಯ ಸಂಬಂಧ ಕುರಿತಂತೆ ಟ್ರಂಪ್‌ ಜತೆ ಮಾತು ಕತೆ ನಡೆಸಲಿದ್ದಾರೆ. ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಜತೆಗೆ ಮುನಿಸಿಕೊಂಡಿರುವ ಟ್ರಂಪ್‌, ಜಾಗತಿಕ ತಾಪಮಾನ ವಿಚಾರದಲ್ಲಿ ಚೀನ ಮತ್ತು ಭಾರತದ ವಿರುದ್ಧ ಮಾತನಾಡಿ ಕೆಲವು ಅಸಮಾಧಾನಗಳಿಗೂ ಕಾರಣವಾಗಿದ್ದಾರೆ. ಜತೆಗೆ ಅಮೆರಿಕ ಫ‌ಸ್ಟ್‌ ಎನ್ನುವ […]

  Read More

ಸಂಘಟಿತ ಯತ್ನವಿಲ್ಲದೆ ಉಗ್ರವಾದವನ್ನು ಮಟ್ಟ ಹಾಕಲಾಗದು: ಪ್ರಧಾನಿ ಮೋದಿ.

ಅಸ್ತಾನಾ : ಭಯೋತ್ಪಾದನೆಯ ಪಿಡುಗನ್ನು ಆಮೂಲಾಗ್ರವಾಗಿ ಮಟ್ಟಹಾಕಲು ಶಾಂಘೈ ಸಹಕಾರ ಸಂಘಟನೆಯ ಸದಸ್ಯರ ಸಂಘಟಿತ ಪ್ರಯತ್ನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಾರ್ವಭೌಮತೆ ಮತ್ತು ಭಾವೈಕ್ಯಕ್ಕೆ ಧಕ್ಕೆಯಾಗದಂತೆ ಸಂಘಟನೆಯ ಸದಸ್ಯರು ತಮ್ಮೊಳಗಿನ ಸಂಪರ್ಕ, ಸಂವಹನವನ್ನು ಹೆಚ್ಚಿಸಿಕೊಳ್ಳಲು ಶ್ರಮಿಸುವ ಅಗತ್ಯವಿದೆ ಎಂದು ಮೋದಿ ಹೇಳಿದರು. ಅವರು ಕಝಕ್‌ ರಾಜಧಾನಿ ಅಸ್ತಾನಾದಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಓ) ವಾರ್ಷಿಕ ಶೃಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಂಘಟಿತ ಯತ್ನದಲ್ಲಿ […]

  Read More