Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cine Face > ಚೆಂದುಟಿಯ ಚೆಲುವೆ ವಿಭಾ…

ಚೆಂದುಟಿಯ ಚೆಲುವೆ ವಿಭಾ…

vibha

skill  : dancing,singing…

height: 5.2

weight: 49

mobile: 9916106904

  1. siri-cini face-vibha1
    ಸಿನಿ ರಂಗಕ್ಕೆ ಅವಕಾಶ ಗಿಟ್ಟಲು ಮಾಡೆಲಿಂಗ್ ಲೋಕ ತಳಹದಿಯಿದ್ದಂತೆ. ಅಂತಹದೊಂದು ಅನುಭವ ಇದೀಗ ಈಕೆಗೂ ಆಗಿದೆ. ಈ ಮುದ್ದು ಮುಖದ ಚೆಲುವೆಯ ಹೆಸರು ವಿಭಾ. ಚಿಕ್ಕಂದಿನಿಂದಲೂ ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದರೂ, ಸಾಕಷ್ಟು ನೇಮ್ ಫೇಮ್ ಬಂದಿದ್ದು ‘ಮಿಸ್ ಸೌತ್ ಇಂಡಿಯಾ-2015’ ರ ವಿಜೇತೆಯಾದ ಮೇಲೆ. ಈಕೆ ಹುಟ್ಟಿದ್ದು ಬೆಳೆದಿದ್ದೆಲ್ಲಾ ರಾಜಧಾನಿಯಲ್ಲಾದರೂ, ಈಕೆಯ ಕುಟುಂಬದವರು ಮೂಲತಃ ಮೈಸೂರಿನವರು. ಕ್ಕಂದಿನಿಂದಲೂ ಆಟ, ಪಾಠ, ನೃತ್ಯ ಹೀಗೆ ಎಲ್ಲಾ ವಿಷಯಗಳಲ್ಲೂ ಚುರುಕಾಗಿದ್ದ ಚೂಟಿ ವಿಭಾ ನಮ್ಮ ಸಿನಿ ಫೇಸ್‍ಗೆ ಸೂಟ್ ಆದ ಹುಡುಗಿ…
    ‘ನಾನು ಓದಿದ್ದು ಡಿಪ್ಲಾಮಾ ಆರ್ಕಿಟೆಕ್ಟ್ ಆದ್ದರಿಂದ ಸದ್ಯ ಬ್ಯುಸಿನೆಸ್ ಫೀಲ್ಡ್‍ನಲ್ಲಿದ್ದೇನೆ, ನನ್ನ ಅಜ್ಜ ಮತ್ತು ತಂದೆಗೆ ಕಲೆಯಲ್ಲಿ ತುಂಬಾ ಆಸಕ್ತಿ. ಅದರಂತೆ ನನಗೂ ಕಲೆ ಎನ್ನುವುದು ರಕ್ತ ಗತವಾಗಿ ಬಂದಿತೇನೋ ಅನ್ನಿಸುತ್ತಿದೆ. ಚಿಕ್ಕವಯಸ್ಸಿನಿಂದಲೂ ಬಣ್ಣದ ಲೋಕ ನನ್ನನ್ನೂ ಸೆಳೆಯುತ್ತಿದ್ದು, ಜೀವನದಲ್ಲಿ ಅದನ್ನು ಫ್ಯಾಷನ್ ಆಗಿ ತೆಗೆದುಕೊಂಡು ಇಷ್ಟೆಲ್ಲಾ ಸಾಧಿಸಿರುವೆ ಅಷ್ಟೆ’ ಎನ್ನುತ್ತಾರೆ ವಿಭಾ.
  • siri-cini face-vibha2
    ಕ್ಯೂಟ್ ಅ್ಯಂಡ್ ಹಾಟ್ ಬೆಡಗಿಯಂತೆ ಕಂಗೊಳಿಸುವ ಈಕೆಗೆ ಈಗಾಗಲೇ ಸಾಕಷ್ಟು ಚಿತ್ರದಲ್ಲಿ ನಟಿಸುವ ಅವಕಾಶ ಒದಗಿಬಂದಿದ್ದರೂ, ನಾನಿನ್ನು ಪಾತ್ರ ನಿರ್ವಹಿಸಲು ಸಮರ್ಥಳಾಗಿಲ್ಲ ಎನ್ನುವ ಮಾತಿನಲ್ಲೇ, ಇನ್ನೂ ಒಂದಿಷ್ಟು ಸಮಯ ಕಳೆಯಲಿ ನೋಡೋಣ ಎನ್ನುತ್ತಾ, ದಿನ ದೂಡುತ್ತಿರುವುದು ಒಂದು ರೀತಿಯ ಸೋಜಿಗದ ಸಂಗತಿ. ಈ ಬಾರಿಯ ‘ಮಿಸ್ ಸೌತ್ ಇಂಡಿಯಾ’ ಆಗಿರುವ ವಿಭಾಗೆ ಸಿನಿಮಾ ಫೀಲ್ಡ್‍ನಲ್ಲಿ ಬಣ್ಣ ಹಚ್ಚುವುದಕ್ಕಿಂತ ಜಾಹೀರಾತು ಶೂಟ್‍ಗಳಲ್ಲಿ ಭಾಗವಹಿಸಬೇಕು ಎನ್ನುವ ಆಸೆಯೇ ಜಾಸ್ತಿ. ಈಗಾಗಲೇ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ವಿಭಾ, ಅನೇಕ ಇವೆಂಟ್, ಫ್ಯಾಷನ್ ಶೋ, ಜಾಹೀರಾತು ಶೂಟ್ ಇತ್ಯಾದಿಗಳಲ್ಲಿ ಸಕ್ರೀಯವಾಗಿದ್ದು, ದೂರದ ದುಬೈನಲ್ಲೂ ಕೂಡ ಫ್ಯಾಷನ್ ಶೋ ಮಾಡಿ ಇಲ್ಲಿನ ಹವ್ಯಾಸವನ್ನು ಹೊರದೇಶದಲ್ಲೂ ಪಸರಿಸಬೇಕೆಂಬ ಆಸೆಯನ್ನು ಹೊತ್ತುಕೊಂಡಿದ್ದಾರೆ. ‘ಆ್ಯಡ್ ಶೂಟ್‍ಗಳೆಂದರೆ ನನಗೆ ಇಷ್ಟ. ಈಗಾಗಲೇ ಸುಮಾರು ಪೋರ್ಟ್‍ಪೊಲಿಯೋಗಳನ್ನು ಮಾಡಿರುವೆ. ಮುಂದೆಯೂ ಕೂಡ ಅಂತಹ ಅವಕಾಶಗಳು ಸಿಕ್ಕರೇ ಮನಸಾ ಇಚ್ಚೆಯಿಂದ ಪಾಲ್ಗೊಳ್ಳುವೆ’ ಎನ್ನುತ್ತಾಳೆ ವಿಭಾ.
  • siri-cini face-vibha5
    ಬಣ್ಣದ ಲೋಕವನ್ನು ಆರಿಸಿಕೊಂಡಿದ್ದು ನನ್ನ ಹಾಬಿಯಾಗಿ, ಹೆಸರು ಮಾಡಬೇಕೆನ್ನುವುದು ನನ್ನ ಆಸೆ ಎನ್ನುವ ಈ ಚೆಂದುಟಿಯ ಚೆಲುವೆಯ ಅಂದ, ಆಸೆ ಮತ್ತು ಪ್ರತಿಭೆಯ ಸಮಾಗಮಕ್ಕೆ ತಕ್ಕ ಅವಕಾಶಗಳು ದೊರಕಲಿ ಎಂದು ಸಿರಿ ಈ ಮೂಲಕ ಶುಭ ಹಾರೈಸುತ್ತದೆ.siri-cini face-vibha4

Leave a Reply