Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cine Face > ಸಿನಿ ಫೇಸ್ : ಅಂದಗಾತಿ ಅಭಿತಾ ಬಂಡಾರಿ

ಸಿನಿ ಫೇಸ್ : ಅಂದಗಾತಿ ಅಭಿತಾ ಬಂಡಾರಿ

abhitha bandari-siri magazineಖದರ್ ಲುಕ್, ಸೂಪರ್ ಪರ್ಸಾನಾಲಿಟಿ, ಸುಮ್ಮನೆ ನೋಡಿದರೆ ಎಲ್ಲೋ ಕಂಡ ಹಾಗಿದ್ಯಲ್ಲ ಅನ್ನಿಸುವ ಫ್ಯಾಮಿಲಿಯರ್ ಫೇಸ್!!, ಅಂದದ ಬೆಡಗಿ, ಚಂದದ ಚಿನಕುರುಳಿ, ಸೀರೆಯುಟ್ಟರೆ ಸತ್ಯಭಾಮೆ, ಮಾಡರ್ನಾಗಿ ಬಂದರೆ ಮಿಂಚೋ ತಾರೆ…ಹೀಗೆ ಪ್ರತಿಯೊಂದರಲ್ಲೂ ಗಮನ ಸೆಳೆಯುವ ವಯ್ಯಾರಿಯೇ ಈ ತಿಂಗಳ ಸಿನಿ ಫೇಸ್‍ನ ಹೊಸ ಪ್ರತಿಭೆ ‘ಅಭಿತಾ ಬಂಡಾರಿ…’

ಮೂಲತಃ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಅಭಿತಾ ಚಿಕ್ಕಂದಿನಿಂದಲೂ ನಾಟಕ, ನೃತ್ಯ ಇತ್ಯಾದಿಗಳಲ್ಲಿ ಮಿಂಚುತ್ತಾ ಬೆಳೆದ ಪ್ರತಿಭೆ. ಅಂದಿನ ಆ ಮುದ್ದು ಹುಡುಗಿಯೇ ಇಂದು ಚಿತ್ರರಂಗದಲ್ಲಿ ಅವಕಾಶ ಗಿಟ್ಟಿಸಿಕೊಂಡು ಬೆಳೆಯುತ್ತಿರುವ ಅಪ್ಪಟ ಕನ್ನಡತಿ. ಬೆಳಿಗ್ಗೆ ಏದ್ದು ಯೋಗಾಭ್ಯಾಸ ಮಾಡುವುದರಿಂದ ಹಿಡಿದು, ಸಂಜೆ ಮಲಗುವ ತನಕವೂ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಈಕೆಗೆ ಚಾಲೆಂಜಿಂಗ್ ಆಗಿ ಬದುಕೋದೆಂದರೆ ಇಷ್ಟವಂತೆ. ಸಣ್ಣ ಪ್ರಾಯದಿಂದಲೂ ನಟನೆ ಬಗ್ಗೆ ತೀವ್ರ ಜ್ಞಾನಗಿಟ್ಟಿಸಿಕೊಂಡು ಬಂದಿರುವ ಅಭಿತಾ ಈಗಾಗಲೇ ‘ಮೋಹ’ ಎನ್ನುವ ಶಾರ್ಟ್ ಮೂವಿ, ಸುವರ್ಣ ವಾಹಿನಿಯಲ್ಲಿ ಭಿತ್ತರವಾದ ‘ಹರಹರ ಮಹದೇವ’ ಸೀರಿಯಲ್ ಹಾಗೂ ‘ಡೈರಿ ಡೇ ಐಸ್ ಕ್ರೀಮ್’ ಒಂದರ ಜಾಹೀರಾತಿನಲ್ಲೂ ಗುರುತಿಸಿಕೊಂಡಿದ್ದು, ಸದ್ಯ ಹೆಸರಿಡದ ತಮಿಳು ಚಿತ್ರವೊಂದರಲ್ಲಿ ನಟಿಯಾಗಿ ಅಭಿನಯಿಸುತ್ತಿರುವುದು ವೃತ್ತಿಯ ಮೈಲಿಗಲ್ಲಿನ ಹೆಜ್ಜೆಗುರುತುಗಳನ್ನು ಸಾರುತ್ತವೆ.

‘ತಂದೆ ಡ್ರಾಮಾಗಳಲ್ಲಿ ಅಭಿನಯಿಸುತ್ತಿದ್ದು, ಆ ರಕ್ತಗತವೇ ನನ್ನನ್ನು ನಟನೆಗೆ ಪ್ರಚೋದಿಸಿದೆ’ ಎನ್ನುವ ಅಭಿತಾ ಧೈರ್ಯವಂತ ಹುಡುಗಿ. ಈಗಾಗಲೇ ಕನ್ನಡ ತಮಿಳು, ತೆಲುಗುಗಳಿಂದ ಆಫರ್‍ಗಳು ಕದ ತೆರೆದಿದ್ದು ಎಂತಹ ಪಾತ್ರಗಳನ್ನು ನೀಡಿದರೂ ನಿರ್ವಹಿಸಲು ರೆಡಿ ಎನ್ನುವ ದಿಟ್ಟ ನಿಲುವನ್ನು ಹೊಂದಿದ್ದಾಳೆ.
ಮೊಗಬಿಚ್ಚಿ ನಕ್ಕರೆ ಮಂದಹಾಸ, ಕಣ್ಣು ಕೆಂಪಗಾಗಿಸಿ ಕ್ಷುದ್ರಳಾದರೆ ತೀರಾ ನೆಗೆಟಿವ್ ರೋಲ್‍ಗೆ ಪಕ್ಕಾ ಸೋಟೆಬಲ್ ಎನಿಸುವ ಅಭಿತಾ ಬಂಡಾರಿ, ‘ನನಗೆ ರಿಯಾಲಿಟಿ ಶೋಗಳೆಂದರೆ ತುಂಬಾ ಇಷ್ಟ. ಅದರಲ್ಲೂ ಹಳ್ಳಿ ಹುಡುಗಿಯ ಪಾತ್ರ ಮಾಡಬೇಕೆನ್ನುವುದು ಬಾಲ್ಯದಾಸೆ’ ಅದಕ್ಕಾಗಿ ಕಾಯುತ್ತಿರುವೆ ಎನ್ನುತ್ತಾಳೆ.abhitha bandari-siri magazine.jpg 1

ಮನೆಯವರ ಪೂರ್ಣ ಸಹಕಾರ ಸಹಾಯದಿಂದ ಸಿನಿ ಲೋಕದಲ್ಲಿ ಏನಾದರೂ ಸಾಧಿಸಬೇಕೆನ್ನುವ ಕನಸನ್ನು ಹೊತ್ತಿರುವ ಈಕೆಗೆ ಬಣ್ಣದ ಲೋಕದಲ್ಲಿ ಇನ್ನಷ್ಟು ಅವಕಾಶಗಳು ಅರಸಿ ಬರಲಿ, ಇವಳ ಪ್ರತಿಭೆಯ ಪ್ರಭೆ ದೇಶ ವಿದೇಶದಲ್ಲಿ ಬೀರುವಂತಾಗಲಿ ಎನ್ನುವುದು ಸಿರಿ ಆಶಯ…

Leave a Reply