Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ಚಿತ್ರವಿಮರ್ಶೆ- ಕಾಲೇಜ್ ಕುಮಾರ

ಚಿತ್ರವಿಮರ್ಶೆ- ಕಾಲೇಜ್ ಕುಮಾರ

ಸಂದೀಪ್ ಶೆಟ್ಟಿ ಹೆಗ್ಗದ್ದೆ

ಬಹುನಿರೀಕ್ಷಿತ ಕಾಲೇಜ್ ಕುಮಾರ ಚಿತ್ರ ಇಂದು ಬಇಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಬಾಚಿಕೊಂಡಿದೆ.

ವಿಭಿನ್ನವಾದ ಕತೆಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವ ಈ ಚಿತ್ರ ಎರಡು ಜನರೇಷನ್‍ನ ಕತೆಯನ್ನು ಹೊಂದಿರುವುದು ನೋಡುಗನಿಗೆ ವಿಶೇಷವೆನಿಸುತ್ತದೆ.

ನಿರ್ದೇಶಕ ಎನಿಸಿಕೊಂಡವನು ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು ಎನ್ನುವ ಮಾತಿನಂತೆ ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಚಿತ್ರವನ್ನ ಕಟ್ಟಿದ್ದಾರೆ.

ಕಾಲೇಜು, ಮನೆ ಹೀಗೆ ಇವುಗಳ ಸುತ್ತಮುತ್ತವೇ ತಿರುಗುವ ಕಥೆಯನ್ನು ನಿರ್ದೇಶಕ ಅಲೆಮಾರಿ ಸಂತು ಭಾವನಾತ್ಮಕ ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.

ಮಗ ಓದಿ ವಿದ್ಯಾವಂತನಾಗಿ ದೊಡ್ಡ ಆಫೀಸರ್ ಆಗಬೇಕೆನ್ನುವ ಅಪ್ಪ, ಅಪ್ಪನ ಹಣದಲ್ಲಿ ಮಜಾ ಉಡಾಯಿಸುವ ಮಗ, ಅವರಿಬ್ಬರ ನಡುವೆ ಇಕ್ಕಟ್ಟಿಗೆ ಸಿಲುಕುವ ತಾಯಿ, ಕಾಲೇಜು ದಿನಗಳ ಹುಡುಗಾಟಿಕೆಯಲ್ಲಿ ಪ್ರೀತಿಯ ಕನಸು ಕಾಣುವ ನಾಯಕಿ ಹೀಗೆ ಕಥೆಯ ಪಾತ್ರಗಳು ಸಾಗುತ್ತಾ ಹೊಸ ಬಗೆಯ ಪುಳಕವೆಬ್ಬಿಸುತ್ತೆ.


ಈ ಹಿಂದೆ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದ, ಬಹುಕೋನಗಳಲ್ಲಿ ಜೀವ ತುಂಬಬಲ್ಲ ನಟ ರವಿಶಂಕರ್ ಅವರ ಅಭಿನಯ ಸಿನಿಮಾ ನೋಡಿ ಹೊರಗೆ ಬಂದಾಗಲೂ ಕಾಡದೆ ಇರದು.

 

ಜೊತೆಗೆ ನಾಯಕ ವಿಕ್ಕಿ, ಟಾಮ್ ಬಾಯ್ ಹುಡ್ಗಿ ಸಂಯುಕ್ತ ಹೆಗ್ಡೆ, ತಾಯಿ ಪಾತ್ರದಲ್ಲಿ ಶ್ರುತಿ ಹೀಗೆ ಎಲ್ಲರ ಅಭಿನಯ ಮನಮುಟ್ಟುತ್ತದೆ.

ಮಗನ ಅಜಾಗರೂಕತೆ ಅಪ್ಪನ ವಯಸ್ಸಿನ ಮೀರಿಕೆಯ ಓದಿಗೆ ಕಾರಣವಾಗುತ್ತಾನೆ. ಮಗ ಕೃಷಿಕನಾದರೆ ಅಪ್ಪ ವಿದ್ಯಾರ್ಥಿಯಾಗುತ್ತಾನೆ. ಅಂತಿಮವಾಗಿ ಅಪ್ಪ ಪಾಸಾಗುತ್ತಾನೋ!?, ಫೇಲಾಗುತ್ತಾನೋ!? ಮಗ ಬದುಕು ಕಟ್ಟಿಕೊಳ್ಳುತ್ತಾನೋ, ಬದುಕೇ ಮಗನನ್ನು ಕಟ್ಟಿಸುತ್ತೋ!? ಎನ್ನುವುದನ್ನ ನೀವು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು.

 

 

ಸಿರಿ ರೇಟಿಂಗ್ 3.5/5

ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಿರಿ ಸಂಪಾದಕ

Leave a Reply