Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Others > ನೀವು ಡೇಟಿಂಗ್ ಮಾಡುವ ಹುಡುಗ ಅಥವಾ ಹುಡುಗಿಯ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು

ನೀವು ಡೇಟಿಂಗ್ ಮಾಡುವ ಹುಡುಗ ಅಥವಾ ಹುಡುಗಿಯ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು

dating_advice

 

ಡೇಟಿಂಗ್… ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಸಾಮಾನ್ಯ ಪದ… ಹುಡುಗ ಹುಡುಗಿ ಡೇಟಿಂಗ್ ನಡೆಸುವುದು ಒಂದು ಫ್ಯಾಶನ್ ಆಗಿಬಿಟ್ಟಿದೆ. ಸಿನಿಮಾಗಳ ಪ್ರಭಾವವೋ ಅಥವಾ ಪಾಶ್ಚಿಮಾತ್ಯರ ಅನುಕರಣೆಯೋ ಡೇಟಿಂಗ್ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ. ನಗರ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚು. ಹಾಗಾದರೆ, ನೀವು ಡೇಟಿಂಗ್ ಮಾಡುವ ಪುರುಷ ಅಥವಾ ಮಹಿಳೆ ಹೇಗಿರಬೇಕು. ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಷಯಗಳು ಇಲ್ಲಿವೆ.
01. ಗೌರವಾನ್ವಿತನೇ..?:
ನೀವು ಆಯ್ಕೆ ಮಾಡಿಕೊಂಡಿರುವ ವ್ಯಕ್ತಿ ಪ್ರಾಮಾಣಿಕನೇ ಅಥವಾ ಸುಳ್ಳುಗಾರನೇ ಎಂಬದನ್ನು ತಿಳಿದುಕೊಳ್ಳಿ. ಅವರ ತಂದೆ- ತಾಯಿ ಜೊತೆ ವಿಧೇಯನಾಗಿದ್ದಾನೆ ಎಂದು ಅರಿಯಿರಿ.
02. ಮೆಡಿಕಲ್ ಕಂಡೀಷನ್:
ನಿಮ್ಮ ಪ್ರೀತಿ ಪಾತ್ರ ಹುಡುಗನ ಮೆಡಿಕಲ್ ಕಂಡೀಷನ್ ತಿಳಿಕೊಳ್ಳುವುದು ಬಹುಮುಖ್ಯವಾದ ಅಂಶ. ಯಾವುದೇ ರೀತಿಯ ಮಾರಕ ರೋಗಗಳ ಸೋಂಕಿನ ಬಗ್ಗೆ ಖಚಿತ ಪಡಿಸಿಕೊಂಡರೆ ಉತ್ತಮ. ನಡವಳಿಕೆಯಲ್ಲಿನ ಮಾನಸಿಕ ಸ್ಥಿತಿ ಅರಿಯಬೇಕು.
03. ಉದ್ದೇಶ:
ಯಾವುದೇ ಹುಡುಗ ಅಥವಾ ಹುಡುಗಿ ನಿಮ್ಮ ಜೊತೆ ಡೇಟಿಂಗ್ ಮಾಡಲು ಇಚ್ಚಿಸುತ್ತಿರುವುದು ನಿಮ್ಮನ್ನ ಲೈಂಗಿಕವಾಗಿ ಅನುಭವಿಸಲೋ…? ಹಣದ ಆಸೆಯಿಂದಲೋ ಅಥವಾ ಇನ್ಯಾವುದೇ ಸ್ವಾರ್ಥದ ಮನೋಭಾವ ಇದೆಯೇ ಎಂಬುದನ್ನ ತಿಳಿದುಕೊಳ್ಳಿ.
04.
ಪರ್ಮನೆಂಟ್ ಅಡ್ರೆಸ್: ನೀವು ಡೇಟಿಂಗ್ ಮಾಡುವ ವ್ಯಕ್ತಿ ಪರ್ಮನೆಂಟ್ ಅಡ್ರೆಸ್ ಅನ್ನ ತಪ್ಪದೇ ತಿಳಿದುಕೊಳ್ಳಿ, ಮೂಲದ ಬಗ್ಗೆ ಕೆದಕಿ ಕೆದಕಿ ಮಾಹಿತಿ ಪಡೆಯಿರಿ.
05.
ಕ್ರಿಮಿನಲ್ ಇತಿಹಾಸ: ನೀವು ಡೇಟಿಂಗ್ ಮಾಡುವ ಪುರುಷ ಅಥವಾ ಮಹಿಳೆ ಪೂರ್ವಾಪರಗಳನ್ನ ಪರಿಶೀಲಿಸಿ, ಕ್ರಿಮಿನಲ್ ಕೇಸ್ ನಂತಹ ಹಿನ್ನೆಲೆ ಇದ್ದರೆ ಎಚ್ಚರಿಕೆ ವಹಿಸಿ.
06. ಸಂಗಾತಿಯ ಕೆಲಸ:
ನೀವು ಮನಃಪೂರ್ವಕವಾಗಿ ಸಂಗಾತಿಯೆಂದು ಒಪ್ಪಿಕೊಳ್ಳುವ ವ್ಯಕ್ತಿಯ ಹುದ್ದೆಯನ್ನು ಖಚಿತಪಡಿಸಿಕೊಳ್ಳಿ. ಕೆಲಸದ ಬಗ್ಗೆ ಸುಳ್ಳು ಹೇಳುತ್ತಿರುವ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ನಡೆಸಿ. ಸತ್ಯಾಸತ್ಯತೆ ಅರಿಯಿರಿ.

07. ಹವ್ಯಾಸ:
ನಿಮ್ಮ ಸಂಗಾತಿ ಹವ್ಯಾಸದ ಬಗ್ಗೆ ತಿಳಿದುಕೊಳ್ಳಿ, ಇದರಿಂದ ನಿಮ್ಮಿಬ್ಬರ ಬಾಂಧವ್ಯ ಹೆಚ್ಚುತ್ತದೆ.

08. ಮಕ್ಕಳು ಪಡೆಯುವ ಬಗ್ಗೆ:
ನಿಮ್ಮ ಸಂಗಾತಿಯ ಜೊತೆ ಲಿವ್ ಇನ್ ರಿಲೇಶನ್ ಶಿಪ್ ಹೊಂದುವಂತಿದ್ದರೆ ಮಕ್ಕಳನ್ನ ಮಾಡಿಕೊಳ್ಳುವ ಮೊದಲೇ ಚರ್ಚಿಸಿ ನಿರ್ಧಾರ ಕೈಗೊಳ್ಳಿ.

download

Leave a Reply