Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema > ಚಿತ್ರ ವಿಮರ್ಶೆ ದಯವಿಟ್ಟು ಗಮನಿಸಿ:

ಚಿತ್ರ ವಿಮರ್ಶೆ ದಯವಿಟ್ಟು ಗಮನಿಸಿ:

ಚಿತ್ರ ವಿಮರ್ಶೆ

ಸಂದೀಪ್ ಶೆಟ್ಟಿ ಹೆಗ್ಗದ್ದೆ:

ದಯವಿಟ್ಟು ಗಮನಿಸಿ:

ಮೌನ ಎಲ್ಲದಕ್ಕೂ ಉತ್ತರ ಅಂತಾರೆ. ಪುಸ್ತಕ ಓದಿದಾಗ, ಹೇಳಬೇಕಾದ ವಿಷಯ ಹೇಳದೆ ಉಳಿದಾಗ, ಒಂಟಿತನ ಕಾಡಿದಾಗ, ತೀರಾ ಸಂತೋಷವಾದಾಗ, ದುಃಖವಾದಾಗ, ಹೀಗೆ ಅನೇಕ ಬಾರಿ ಮೌನ ನಮ್ಮೊಳಗೆ ಮಾತನಾಡುತ್ತಾ ಇರುತ್ತದೆ. ಹೌದು!.. ಬಹುಶಃ ಈ ಸಿನಿಮಾ ನೋಡಿ ಹೊರಗೆ ಬರುವಾಗಲೂ ಒಂದು ಹೊಸ ಬಗೆಯ ಆಲೋಚನೆಗೆ ಇಳಿಸುವಂತಹ ಮೌನ ಸೃಷ್ಟಿಯಾಗುತ್ತದೆ.

ಚಿತ್ರದಲ್ಲಿ ಒಟ್ಟು 4 ಅಧ್ಯಾಯಗಳಿವೆ. ಅಂದರೆ 4 ಕಥೆಗಳಿವೆ. ಪ್ರತಿಯೊಬ್ಬರ ಬದುಕಲ್ಲೂ ಒಂದೊಂದು ಹುಟುಕಾಟ ಹೇಗಿರುತ್ತದೋ ಹಾಗೆಯೇ ಒಂದೊಂದು ಕಥೆಗಳೂ ಇರುತ್ತವೆ. ಅಂತಹ ಹುಡುಕಾಟ ಮತ್ತು ಕಥೆಯನ್ನು ಹೆಕ್ಕಿ ತೆಗೆದು ರೋಹಿತ್ ಪದಕಿ ಸಿನಿಮಾ ಕಟ್ಟಿದ್ದಾರೆ ಅದನ್ನು ನೀವೆಲ್ಲಾ ಒಮ್ಮೆ ಗಮನಿಸಲೇಬೇಕು.

ಒಂದು ಸಿನಿಮಾ ವ್ಯಕ್ತಿಯ ಇಡೀ ಬದುಕಿನ ಪಯಣವನ್ನು ಧ್ವನಿಸುತ್ತದೆ ಎನ್ನುತ್ತಾರೆ ಅಂತೆಯೇ ಈ ಚಿತ್ರದಲ್ಲೂ ನಾಲ್ಕು ಕಥೆಗಳ, ನಾಲ್ಕು ನಾಯಕರ, ನಾಲ್ಕಾರು ನಾಯಕಿಯರ ಪಾತ್ರ ಬಣ್ಣದ ರೇಖೆಯಲ್ಲಿ ಧ್ವನಿಸುತ್ತದೆ.

ಕೇವಲ ಕಥೆಯಲ್ಲ, ಫಿಲಾಸಫಿ ಅಲ್ಲ, ಮನರಂಜನೆಯ ಮೂಲಕ ತತ್ವವನ್ನು ಹೇಳುವ ಒಂದೊಳ್ಳೆ ಸಿನಿಮಾ ಇದು. ಇಡೀ ಸಿನಿಮಾ ನೋಡಿ ಹೊರಬಂದಾಗ ಅದರಲ್ಲಿರುವ ಕಥೆಯ ಆಳ ಮತ್ತು ಶ್ರಮದ ಜೊತೆಗೆ ಕನ್ನಡದಲ್ಲೂ ಇಂತಹ ಪ್ರಯೋಗಗಳು ನಡೆಯುತ್ತಿರುವುದು ಜಾಗತಿಕ ಮಟ್ಟದಲ್ಲಿ ನಮ್ಮ ಇಂಡಸ್ಟ್ರೀಯನ್ನು ಜನ ಗುರುತಿಸಲು ದಾರಿ ಎನಿಸದೆ ಇರದು.

ಒಂದು ಕಷ್ಟದ ಬದುಕು, ಇನ್ನೊಂದು ಕಳ್ಳತನ, ಮತ್ತೊಂದು ವಿಶ್ವಮಾನವನಾಗುವ ಬದುಕು, ಹೀಗೆ ಒಂದೊಂದು ವಿಭಿನ್ನವಾದ ಜೊತೆಗೊಂದಿಷ್ಟು ತೀರಾ ಸೀದಾ ಸಾದಾವಾಗಿ ಕಾಣಿಸುವ ಫನ್ನಿ ಡ್ರಾಮಾವನ್ನು ನೀಡುವ ಕಂಪ್ಲೀಟ್ ಎಂಟರ್‍ಟೈನರ್ ಎನ್ನುವುದರಲ್ಲಿ ಎರಡು ಮಾತಿಲ್ಲ.

ಪ್ರಕಾಶ್ ಬೆಳ್ವಾಡಿ, ರಘುಮುಖರ್ಜಿ, ವಸಿಷ್ಟಾ, ರಾಜೇಶ್ ನಟರಂಗ, ಅವಿನಾಶ್, ಸಂಯುಕ್ತ ಹೊರ್ನಾಡ್, ಭಾವನ, ಸಂಗೀತಾ ಭಟ್, ಸುಕೃತಾ, ಪೂರ್ಣಚಂದ್ರ, ಅರವಿಂದ್ ಹೀಗೆ ಅಭಿನಯಿಸಿದವರೆಲ್ಲರ ಅಭಿನಯವೂ ಚಿತ್ರಕ್ಕೆ ಜೀವ ತುಂಬಿದೆ.

ಸೈಲೆಂಟಾಗಿ ಸಾಗುವ ಚಿತ್ರ ಅಲ್ಲಲ್ಲಿ ನಗಿಸುತ್ತೆ, ಹೊಸ ಕೌತುಕ ಮೂಡಿಸುತ್ತೆ, ಸಣ್ಣಕಥೆಗಳನ್ನು ಓದಿ ಆಸ್ವಾದಿಸಿದಂತೆ ಪುಳಕಿಸುತ್ತೆ, ಎದ್ದು ಬರುವಾಗ ನಮ್ಮೊಳಗೂ ಹೀಗೊಂದು ಕಥೆ ಇದ್ದಂತೆ ಇದ್ಯಲ್ಲ ಅನಿಸುತ್ತೆ. ಟೋಟಲಿ ಹೊಸ ಹುಡುಗರು ಒಳ್ಳೆಯ ಸಿನಿಮಾ ಮಾಡಿದ್ದಾರೆ ಎನಿಸುತ್ತೆ, ಸಾಹಿತ್ಯ, ಹಾಡು, ಹೊಸ ಬಗೆಯ ಅನೂಪ್ ಸೀಳಿನ್‍ರವರ ಸಂಗೀತ ಹೊರಜಗತ್ತಿಗೆ ನಿಮ್ಮನ್ನು ನೀವು ತೆರೆದುಕೊಳ್ಳುವಂತೆ ಮಾಡುತ್ತೆ.

ಸಿರಿ ರೇಟಿಂಗ್: 4/5

ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಿರಿ ಸಂಪಾದಕ

Leave a Reply