Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ಇಂದಿನಿಂದ ಹಾಸನಾಂಬೆ ದರ್ಶನ

ಇಂದಿನಿಂದ ಹಾಸನಾಂಬೆ ದರ್ಶನ

 ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಅ. 12ರಿಂದ ಪ್ರಾರಂಭವಾಗಲಿದ್ದು, ಈ ಬಾರಿ 8 ದಿನ 24 ತಾಸು ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

12ರಿಂದ 21ರ ವರೆಗೆ ಹಾಸನಾಂಬ ದೇವಿ ಬಾಗಿಲು ತೆರೆದಿರುತ್ತದೆ. ಬಾಗಿಲು ತೆರೆಯುವ ದಿನ (ಅ.12) ಹಾಗೂ ಮುಚ್ಚುವ ದಿನ (ಅ.21ರಂದು) ಸಾರ್ವಜನಿಕರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಪೂಜಾ ಅವಧಿಯನ್ನು ಕಡಿಮೆಗೊಳಿಸಲಾಗಿದ್ದು, ನೈವೇದ್ಯ, ಅಲಂಕಾರ ಮತ್ತು ಶುಚಿತ್ವಕ್ಕಾಗಿ ಎರಡು ತಾಸು ನೀಡಲಾಗಿದೆ.

ದೇವಾಲಯ ಪ್ರವೇಶಕ್ಕೆ ಪ್ರತಿ ವರ್ಷ ನೀಡುತ್ತಿದ್ದ ವಿಶೇಷ ಪಾಸ್‌ ವ್ಯವಸ್ಥೆ ನಿಷೇಧಿಸಲಾಗಿದ್ದು, ಸಾರ್ವಜನಿಕರಿಗೆ ಎರಡು ತಾಸಿನಲ್ಲಿ ದರ್ಶನ ವ್ಯವಸ್ಥೆ ಮಾಡಲಾಗಿದೆ.

‘ಈ ಬಾರಿ ಪ್ರಸಾದವನ್ನು ದೇವಾಲಯದಿಂದ 200 ಮೀಟರ್‌ ದೂರದಲ್ಲಿರುವ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿತರಿಸಲಾಗುವುದು. ತುರ್ತು ದರ್ಶನ ಬಯಸುವವರು ವಿಶೇಷ ದರ್ಶನದ ಟಿಕೆಟ್‌ ₹ 300, ₹ 1,000 ಪಡೆದು ದೇವರ ಆಶೀರ್ವಾದ ಪಡೆಯಬಹುದು’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಎಚ್‌.ಎಲ್‌.ನಾಗರಾಜ್‌ ತಿಳಿಸಿದರು.

Leave a Reply