Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cine Face > ಫ್ಯಾಷನ್ ಡಿಸೈನಿಂಗ್ -ಚಂದನ ಆರಾಧ್ಯ

ಫ್ಯಾಷನ್ ಡಿಸೈನಿಂಗ್ -ಚಂದನ ಆರಾಧ್ಯ

ಹೆಸರು:- ಚಂದನ
ಫೋನ್ ನಂಬರ್:- 8123217999
ಈಮೇಲ್: chinnuaradhya.km@gmail.com

siri-cini face-chandana aradya

The best of chandana

ಕಲೆಯ ಹಲವು ಮಜಲುಗಳಲ್ಲಿ ಫ್ಯಾಷನ್ ಡಿಸೈನಿಂಗ್ ಕೂಡ ಒಂದು. ಒಬ್ಬ ಸಾಮಾನ್ಯ ವ್ಯಕ್ತಿಯಾಗಲಿ, ಕಲಾವಿಧರಾಗಲಿ, ಆತ ಧರಿಸುವ ಉಡುಪಿನ ಶೈಲಿ, ಕೇಶವಿನ್ಯಾಸ ನೋಡಗರನ್ನು ತನ್ಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ಫ್ಯಾಷನ್ ಡಿಸೈನಿಂಗ್‍ನ ಮಹತ್ವ ಅಧಿಕವಾಗಿದೆ. ಇಂತಹ ಕಲೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಇಂದು “ಲಿಮ್ಕಾ” ದಾಖಲೆಯಲ್ಲಿ ಚಂದನ ರವರ ಹೆಸರು ದಾಖಲುಗೊಂಡಿದ್ದು ಇವರ ಫ್ಯಾಷನ್ ಡಿಸೈನಿಂಗ್‍ನ ಅದ್ಭುತ ಪ್ರತಿಭೆ ವ್ಯಕ್ತವಾಗುತ್ತದೆ. 2012 ರಲ್ಲಿ ಚಂದನರವರು ಫ್ಯಾಷನ್ ಡಿಸೈನಿಂಗ್ ಅನ್ನು ತಲ್ಲೀನವಾಗಿ ಕರಗತವಾಗಿಸಿಕೊಂಡ ಬಳಿಕ ಅದನ್ನು ಹಲವು ವ್ಯಕ್ತಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಬಳಸಿ ಕಲೆಯನ್ನು ಹಲವರಿಗೆ ಪಸರಿಸುವ ನಿಟ್ಟಿನಲ್ಲಿ ತಮ್ಮ ನಿಲುವನ್ನು ಹೊಂದಿದ್ದಾರೆ. ಹಲವು ಫ್ಯಾಷನ್ ಶೋಗಳಲ್ಲಿ ಇವರ ಡಿಸೈನಿಂಗ್ ಚಾಕಚಕ್ಯತೆ, ವರ್ಣರಂಜಿತ ವಿನ್ಯಾಸ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿದೆ. ಇದೀಗ ಹಲವು ಫ್ಯಾಷನ್ ಶೋಗಳಲ್ಲಿ ಚಂದನ ಹೆಸರು ಮಿನುಗುವ ನಿಟ್ಟಿನಲ್ಲಿ ಉತ್ತಮ ಭವಿಷ್ಯದ ಲಕ್ಷಣವನ್ನು ತೋರ್ಪಡಿಸಬಹುದು. ಕೇವಲ ನಗರಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿ ಹಿಂದುಳಿದ ಮಕ್ಕಳಿಗೆ, ಅಲ್ಲಿಯ ಜನಗಳಿಗೂ ಕೂಡ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಅವರಲ್ಲಿ ಹೊಸಬಗೆಯ ಚೈತನ್ಯವನ್ನು ಉಂಟುಮಾಡಿದ್ದಕ್ಕಾಗಿ ದೆಹಲ್ಲಿಯಲ್ಲಿ ಇವರ ಹೆಸರು ಉಲ್ಲೇಖಿತವಾಗಿ ಗುರುತಿಸಲ್ಪಟ್ಟಿತು. ಚಿಕ್ಕ ವಯಸ್ಸಿನಲ್ಲಿಯೇ ಸಾಧನೆ ಮಾಡುತ್ತಿರುವ ಚಂದನ ಫ್ಯಾಷನ್ ವಿನ್ಯಾಸ ಸಂಸ್ಥೆಯ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳಲ್ಲಿ 12 ಗಂಟೆಗಳ ಕಾಲ ಸತತವಾಗಿ ಫ್ಯಾಷನ್ ಶೋ ಮಾಡಿದ ವಿಷಯ “ಲಿಮ್ಕಾ” ದಾಖಲೆಯಲ್ಲಿ ನಮೂದಿಸಲ್ಪಟ್ಟಿರುವುದು ಹೆಮ್ಮೆಯ ವಿಷಯ. ಇನ್ನು ಹೆಚ್ಚಿನ ಸಾಧನೆ ಇವರಿಂದ ಜರುಗಲಿ ಮತ್ತು ಅನೇಕ ಯುವತಿಯರು ಇವರ ಫ್ಯಾಷನ್ ಡಿಸೈನಿಂಗ್ ಅನ್ನು ಕಲಿತು ಜೀವನ ರೂಪಿಸಿಕೊಳ್ಳಲಿ ಹಾಗೂ ಇವರ ನೂತನ ನಿರ್ಮಾಣದ “ವಿನ್ಯಾಸ” ಎಂಬ ಶಾಲೆ ಬೆಳೆಯಲಿ ಎಂದು ಹಾರೈಸೋಣ.

siri-cini face-chandana aradya2

Leave a Reply