Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ಬೆಂಗಳೂರಿನಲ್ಲಿ ಇಂದಿನಿಂದ ಅನಿಯಮಿತ ಲೋಡ್​ ಶೆಡ್ಡಿಂಗ್​

ಬೆಂಗಳೂರಿನಲ್ಲಿ ಇಂದಿನಿಂದ ಅನಿಯಮಿತ ಲೋಡ್​ ಶೆಡ್ಡಿಂಗ್​

ತಾಂತ್ರಿಕ ದೋಷದಿಂದ ವಿದ್ಯುತ್​ ಉತ್ಪಾದನೆಯಲ್ಲಿ ಕೊರತೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಿಯಮಿತ ಲೋಡ್​ ಶೆಡ್ಡಿಂಗ್​ ಪ್ರಾರಂಭವಾಗಲಿದ್ದು, ಕತ್ತಲೆ ಭಾಗ್ಯ ನೀಡಲು ಸರ್ಕಾರ ಸಜ್ಜಾಗಿದೆ.

ತಾಂತ್ರಿಕ ದೋಷದಿಂದ ವಿದ್ಯುತ್​ ಉತ್ಪಾದನೆಯಲ್ಲಿ ಕೊರತೆ ಉಂಟಾಗಿರುವ ಕಾರಣ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಉಂಟಾಗಿರುವ ವಿದ್ಯುತ್ ಕೊರತೆ ನೀಗಿಸಲು ಐಇಎಕ್ಸ್​​​ನಲ್ಲಿ ವಿದ್ಯುತ್ ಖರೀದಿಸಿ ಸರಬರಾಜು ಮಾಡಲು ಸರ್ಕಾರ ನಿರ್ಧರಿಸಿದೆ.

ಕರೆಂಟ್​ ಕಣ್ಣಾಮುಚ್ಚಾಲೆ ಆಟ ಶುರುವಾಗಲಿದ್ದು, ಸಮಸ್ಯೆ ಯಾವಗ ಬಗೆಹರಿಯಬಹುದು ಎಂಬುದರ ಬಗ್ಗೆ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Leave a Reply