Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Siri Magazine > ಅಷ್ಟಮಂಗಲದಲ್ಲಿ ಗಣಪತಿ ಪೂಜೆ; ಭಕ್ತಿ ಸಿರಿ

ಅಷ್ಟಮಂಗಲದಲ್ಲಿ ಗಣಪತಿ ಪೂಜೆ; ಭಕ್ತಿ ಸಿರಿ

bronze-ganesha-500x500

‘ಅಷ್ಟಮಂಗಲೆ ಸಮಸ್ತ ವಿಘ್ನ ಭಾದಾ ಪರಿಹಾರಾರ್ತಂ ಶ್ರೀ ಮಹಾ ಗಣಪತಿ ಪೂಜಾ ಕರಿಷ್ಯೆ..’ ಈ ರೀತಿ ಸಂಕಲ್ಪವನ್ನು ಮಾಡಿಕೊಂಡು ಗಣಪತಿ ಮಂಡಲವನ್ನು ಅಷ್ಟಮಂಗಲ ಇಡುವ ಮನೆಯ ಬಲಭಾಗದಲ್ಲಿ ಬರೆಯಬೇಕು. ಇದನ್ನು ಬರೆಯುವ ವಿಧಾನ ಹೇಗೆಂದರೆ, ಮೊದಲು ಷಟ್ಕೋನವನ್ನು ಮಾಡಿ ಆನಂತರ ಅದರಲ್ಲಿ ಮೂರು ವೃತ್ತವನ್ನು ಮಾಡಿ ಷಟ್ಕೋನವನ್ನು ಚತುಷ್ಕೋನ ಆಕೃತಿಗೆ ಪರಿವರ್ತಿಸಿ ಅದರ ತನ್ಮಧ್ಯೆಯಲಿ,್ಲ ಆ ಸಮಕೋನ ಮಂಡಲದ ಮಧ್ಯಭಾಗದಲ್ಲಿ ತ್ರಿಕೋನದ ಬಿಂದುವಿನಲ್ಲಿ ಮಹಾಗಣಪತಿಯನ್ನು ಕುಂಕುಮದಿಂದ ಅಲಂಕರಿಸಿ ಪೂಜೆಯನ್ನು ಮಾಡಲು ಪ್ರಾರಂಭಿಸಬೇಕು. ‘ಅಶ್ವಿನೀ ಮಂಡಲೇ ಶ್ರೀ ಓಂ ಬ್ರೊಬ್ರೋಹ ಸ್ವಾಹಃ ಮಹಾಗಣಪತಿಆವಾಹಯಾಮಿ’ ಎಂಬ ಮಂತ್ರದಿಂದ ನಾಲ್ಕು ಸಾರಿ ಅಕ್ಷತೆಯನ್ನು ಮತ್ತು ದೂರ್ವೆಯನ್ನು ಹಾಕಿ ನಂತರ ಮಹಾಗಣಪತಿಯಾಯೇ ನಮಃ, ಧ್ಯಾಯಾಮೇಧ್ಯಾಯ ಸಮರ್ಪಯಾಮಿ, ಮಹಾಗಣಪತಿಯೇ ನಮಃ, ಆವಾಹಂ ಸಮರ್ಪಯಾಮಿ ಶ್ರೀ ಮಹಾಗಣಪತಿಯೇ ನಮಃ, ಸ್ಥಾನಂ ಸಮರ್ಪಯಾಮಿ, ಓಂ ಏಕದಂತಾಯ ವಿಘ್ನಹೇ, ವಕ್ರತುಂಡಾಯ ಧೀಮಹೇ ತನ್ನೋದಂತಿ ಪ್ರಚೋದಯಾತಃ ಈ ಮಂತ್ರದಿಂದ ಗಣಪತಿಗೆ ಅಭಿಷೇಕವನ್ನು ಮಾಡಿ ಅರ್ಕಾತ ದೂರ್ವೆಯಿಂದ ಜಲವನ್ನು ತೋಕ್ಷಣೆ ಮಾಡಿ ಅನಂತರದಲ್ಲಿ ಗಣಪತಿಗೆ ಗೆಜ್ಜೆ ವಸ್ತ್ರವನ್ನಿಟ್ಟು ಗಣಪತಿಯೇ ನಮಃ, ಚಂದನ ಸಮರ್ಪಣೇ ನಮಃ, ಅಕ್ಷತಾಂ ಸಮರ್ಪಯಾಮಿ ಮಹಾಗಣಪತಿಯೇ ನಮಃ, ನಾನಾ ವಿಧಾನೆ ಪರಿಮಳ ಪುಷ್ಪಂ ಸಮರ್ಪಯಾಮಿ, ದೂರ್ವಾಕರಿಶ್ಯೇ ಮಹಾಗಣಪತಿಯೇ ನಮಃ, ನಾಮಂ ಪೂಜಾ ಕರಿಶ್ಯೆ, ಓಂ ಸುಮುಕಾಯ ನಮಃ, ಓಂ ಏಕದಂತಾಯ ನಮಃ, ಓಂ ಕಪಿಲಾಯ ನಮಃ, ಓಂ ಗಜಚರಣಾಚಾಯ ನಮಃ, ಓಂ ಲಂಭೋದರಾಯ ನಮಃ, ಓಂ ವಿಕಟಾಯ ನಮಃ, ಓಂ ವಿಘ್ನರಾಜಾಯ ನಮಃ, ಓಂ ಧೂಮಕೇತುವೆ ನಮಃ, ಓಂ ಗಣಾಧೀಪಾದಾಯ ನಮಃ, ಓಂ ಗಣಾಧ್ಯಕ್ಷಾಯ ನಮಃ, ಓಂ ಬಾಲಚಂದ್ರಾಯ ನಮಃ, ಓಂ ಗಜಾನನಾಯಾ ನಮಃ, ಈರೀತಿಯಲ್ಲಿ ದ್ವಾದಶನಾಮ ಪೂಜೆಯಿಂದ ಗಣಪತಿಯನ್ನು ಅರ್ಚಿಸಿ ಧೂಪವನ್ನು ಬೆಳಗಬೇಕು. ನಂತರ ದೀಪವನ್ನು ದರ್ಶನ ಮಾಡಿ ಗಣಪತಿಗೆ ಮುಂಭಾಗದಲ್ಲಿರುವ ತಾಂಬೂಲ, ಬಾಳೆಹಣ್ಣು, ಕಡಲೆಕಾಳು ಅದಾದ ನಂತರ ಪಂಚ ಮುದ್ರೆಯನ್ನು ನೈವೇದ್ಯ ಮಾಡಬೇಕು. ಆಮೇಲೆ ಅದನ್ನು ವಿಸರ್ಜನೆ ಮಾಡಿ ಮಂಗಳಾರತಿ ಬೆಳಗಬೇಕು. ಗಣಪತಿಗೆ ಪ್ರದಕ್ಷಣೆ ನಮಸ್ಕಾರ ಮಾಡಿ ಪ್ರಾರ್ಥನೆ ಮಾಡಿಕೊಳ್ಳಬೇಕು. ಬಂದಿರುವ ಗಣ್ಯಾತೀಗಣ್ಯರಲ್ಲೆರಿಗೂ ಮಂತ್ರಾಕ್ಷತೆಯನ್ನು ಕೊಟ್ಟು ಗಣಪತಿಯನ್ನು ಪ್ರಾರ್ಥನೆ ಮಾಡಲು ಹೇಳಬೇಕು. ‘ಶ್ರೀ ಮಹಾಗಣಪತಿ ಈ ದಿವಸ ನಾವು ಇವರ (ಯಜಮಾನ) ಹೆಸರಿನಲ್ಲಿ ಅಷ್ಟಮಂಗಲವನ್ನು ಇಡುತ್ತಿದ್ದೆವೆ ಇದರ ಮಧ್ಯದಲ್ಲಿ ಯಾವುದೇ ರೀತಿಯಾದಂತಹ ವಿಘ್ನಗಳು ಬಾದೆಗಳು ತೊಂದರೆ ತಾಪತ್ರೆಗಳು ಕಂಡುಬಾರದಂತೆ ನೀನೆ ರಕ್ಷಣೆ ಮಾಡಬೇಕು ಅದರ ಜೊತೆಯಲ್ಲಿ ನಾವು ಮಾಡುವಂತಹ ಈ ಅಷ್ಟಮಂಗಲವನ್ನು ಸಕ್ರೀಯವಾಗಿ ನಡೆಸಿಕೊಟ್ಟು ಸಮಗ್ರ ಜ್ಞಾನವನ್ನು ಕೊಟ್ಟು ನಿಜವಾಗಿಯೂ ಇಲ್ಲಿ ಏನೇನೂ ಒಳಗುಟ್ಟಿದೇಯೊ, ಈ ಯಜಮಾನನ ಸಾಂಸಾರಿಕ ವಿಷಯದ ಸಂಪೂರ್ಣ ಮಾಹಿತಿಯನ್ನು ಮನವರಿಕೆ ಮಾಡಿಕೊಟ್ಟು ನಮಗೆ ಭಾರತೀ ಅನುಗ್ರಹ ಮಾಡುವ ಹಾಗೆ ಅಕ್ಷತೆಯನ್ನು ಮಂಡಲಕ್ಕೆ ಎಲ್ಲರೂ ಹಾಕಬೇಕು.
ಮುಂದಿನ ಸಂಚಿಕೆಯ ಅಷ್ಟಮಂಗಲದಲ್ಲಿ ನವಗ್ರಹ ಪೂಜಾವಿಧಾನದ ಬಗ್ಗೆ ತಿಳಿಸಲಾಗುತ್ತದೆ.

Leave a Reply