Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cine Face > ಗೆಜ್ಜೆ ಕಟ್ಟಿದ ರೂಪಿಕಾ

ಗೆಜ್ಜೆ ಕಟ್ಟಿದ ರೂಪಿಕಾ

rupika siri magazine           ರೂಪಿಕಾ ರೂಪವಂತೆ. ಕಲಾ ವಲ್ಲಭೆ. ನಟನೆಯಲ್ಲಿ, ನಾಟ್ಯದಲ್ಲಿ ನಾವಿಣ್ಯಭರಿತ ಸರಸ್ವತಿ ಪುತ್ರಿ. ಚಿಕ್ಕಂದಿನಿಂದಲೂ ವೇದಿಕೆ ಏರಿ ಕಾರ್ಯಕ್ರಮಗಳನ್ನು ನೀಡುವುದೆಂದರೆ ಇವಳಿಗೊಂಥರ ಪ್ರಿಯ. ಆ ಆಸಕ್ತಿಯೇ ಮುಂದೆ ಕನ್ನಡ ಚಿತ್ರರಂಗಕ್ಕೆ ನಟಿಯೊಬ್ಬಳನ್ನು ನೀಡಿತು ಎಂದರೆ ತಪ್ಪಿಲ್ಲ.
ಹೌದು!, ಚಿಕ್ಕಂದಿನಿಂದಲೂ ಸದಾ ಒಂದಿಲ್ಲೊಂದು ವಿಭಾಗದಲ್ಲಿ ಮಿನುಗುತ್ತಾ ಬೆಳೆದಿದ್ದ ರೂಪಿಕಾ, ವಿಶಾಲ ಪ್ರಪಂಚಕ್ಕೆ ಗೋಚರಿಸಿದ್ದು ಎಸ್. ನಾರಾಯಣ್ ನಿರ್ದೇಶನದಲ್ಲಿ ಮೂಡಿ ಬಂದ ‘ಚೆಲುವಿನ ಚಿಲಿಪಿಲಿ’ ಚಿತ್ರದಿಂದ. ಆನಂತರದಲ್ಲಿ ‘ಕಾಲ್ಗೆಜ್ಜೆ, ಕುಂಭರಾಶಿ’ ಹೀಗೆ ಸಾಲು ಸಾಲು ಚಿತ್ರಗಳು ಆಕೆಯನ್ನು ಅರಸಿ ಬಂದವು. ಚಿತ್ರನಟಿಯಾಗಿ ಒಂದು ಕಡೆ ಮಿಂಚುತ್ತಿದ್ದರೂ, ತಾನು ಬೆಳೆದು ಬಂದ, ತನ್ನ ಹವ್ಯಾಸ ಮತ್ತು ಆಸಕ್ತಿಯ ಕ್ಷೇತ್ರವಾದ ನಾಟ್ಯವನ್ನು ಮಾತ್ರಾ ಮರೆಯದೇ ಆ ಕ್ಷೇತ್ರದಲ್ಲಿಯೇ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಳ್ಳಬೇಕೆನ್ನುವ ಆಸೆಯಿಂದ ‘ಗೆಜ್ಜೆ’ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ, ನೃತ್ಯ ಪ್ರತಿಭೆಗಳನ್ನು ಬೆಳೆಸುತ್ತಿರುವುದು ಇವರ ಕಲಾ ಆಸಕ್ತಿಯ ಪುಟದಲ್ಲಿ ಹೊಸ ಮೈಲಿಗಲ್ಲೆನ್ನಬಹುದು.
ಭರತನಾಟ್ಯ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಚಲನಚಿತ್ರ ನೃತ್ಯ, ಶಾಸ್ತ್ರೀಯ ನೃತ್ಯ, ಸುಗಮ ಸಂಗೀತ, ನಾಟಕಾಭಿನಯ ಹಾಗೂ ನೃತ್ಯ ಸಂಯೋಜನೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿರುವ ರೂಪಿಕಾ, ಸಾಂಸ್ಕøತಿಕ ಚಟುವಟಿಕೆಗಳು ಮತ್ತು ಸ್ಫರ್ಧೆಗಳಲ್ಲಿ ರಾಜ್ಯ, ರಾಷ್ಟ್ರ, ಹಾಗೂ ಮಹಾನಗರ ಹಂತಗಳಲ್ಲಿ 5000ಕ್ಕೂ ಹೆಚ್ಚು ಪ್ರದರ್ಶನ ಹಾಗೂ ಸ್ಫರ್ಧೆಗಳಲ್ಲಿ ಭಾಗವಹಿಸಿರುವುದು ಇವರ ಟ್ಯಾಲೆಂಟ್‍ನ ಹೆಗ್ಗಳಿಕೆ ಎಂದರೆ ತಪ್ಪಿಲ್ಲ.

Telugu Actress Roopika Hot Stills in Churidar Dress

Telugu Actress Roopika Hot Stills in Churidar Dress

ಚಿಕ್ಕಂದಿನಿಂದಲೂ ಬಾಲ ನಟಿಯಾಗಿ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಗುರುತಿಸಿಕೊಂಡಿದ್ದ ರೂಪಿಕಾ ಸದ್ಯ ‘ಸೊಂಬೇರಿ’ ಎನ್ನುವ ತಮಿಳು ಹಾಗೂ ‘ಮಂಜರಿ’ ಎನ್ನುವ ಕನ್ನಡ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.
ಕೇವಲ ನಟನೆ ಅಷ್ಟೇ ಅಲ್ಲದೇ ವಿವಿಧ ಕಾರ್ಯಕ್ರಮಗಳಲ್ಲಿ ನೃತ್ಯ ಸಂಯೋಜನೆಯೊಂದಿಗೆ ರಂಜಿಸುತ್ತಾ ಕಣ್ಮನ ಸೆಳೆಯುವ ರೂಪಿಕಾರವರ ಪ್ರತಿಭೆ ಮೇರು ಪರ್ವತವೇರಲಿ, ಅವರೇ ಕಟ್ಟಿ ಮುನ್ನಡೆಸುತ್ತಿರುವ ‘ಗೆಜ್ಜೆ’ ಸಂಸ್ಥೆಯಿಂದ ಹೊಸ ಹೊಸ ಪ್ರತಿಭೆಗಳು ಹೊರಹೊಮ್ಮಲಿ ಎನ್ನುವುದು ನಮ್ಮ ಆಶಯ.

rupika siri magazine1ಪ್ರಶಸ್ತಿಗಳು:
ಬಹುಮುಖ ಪ್ರತಿಭೆಗಾಗಿ 3000 ಹೆಚ್ಚು ಪ್ರಶಸ್ತಿ ಹಾಗೂ ಬಹುಮಾನಗಳು ಲಭಿಸಿವೆ.
2008ರಲ್ಲಿ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ
2010ರಲ್ಲಿ ಅಸಾಧಾರಣ ಪ್ರತಿಭೆ ಪ್ರಶಸ್ತಿ
2014ರಲ್ಲಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ
ವಿಶ್ವ ಮಾನ್ಯ ಪ್ರಶಸ್ತಿ
ಬೆಳ್ಳಿ ದೀಪ ಪ್ರಶಸ್ತಿ
ವಿಶ್ವೇಶ್ವರಯ್ಯ ಪ್ರಶಸ್ತಿ
‘ಪ್ರಕೃತಿ’ ಕಿರುಚಿತ್ರಕ್ಕೆ ಶ್ರೇಷ್ಠ ಬಾಲ ನಟಿ ಪ್ರಶಸ್ತಿ
ಚಿತ್ರರಸಿಕ ಸಂಘದಿಂದ ‘ಕಾಲ್ಗೆಜ್ಜೆ’ ಚಿತ್ರಕ್ಕೆ ಶ್ರೇಷ್ಠನಟಿ ಪ್ರಶಸ್ತಿ

Leave a Reply