Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema > ಚಿತ್ರ ವಿಮರ್ಶೆ: ಕಟಕ

ಚಿತ್ರ ವಿಮರ್ಶೆ: ಕಟಕ

  • ಸಂದೀಪ್ ಶೆಟ್ಟಿ ಹೆಗ್ಗದ್ದೆ

ಈ ಹಿಂದೆ ಒಟ್ಟು 13 ಭಾಷೆಗಳಲ್ಲಿ ಟ್ರೈಲರ್ ರಿಲೀಸ್ ಆದಾಗಲೇ ಕೇವಲ ನಮಗಷ್ಟೇ ಅಲ್ಲದೇ ಬೇರೆ ಭಾಗದ, ಬೇರೆ ರಾಜ್ಯದ ಭಾಷೆಯ ಅನೇಕರಿಗೂ ಕುತೂಹಲ ಕೆರಳಿಸಿದ್ದ ಚಿತ್ರ ಕಟಕ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.

ಹೈ ಬಜೆಟ್ ಚಿತ್ರಗಳ ಹಾವಳಿಯ ಮಧ್ಯೆಯೂ ರಿಲೀಸ್ ಆಗಿರುವ ಕಟಕ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಾಚಿಕೊಂಡಿದೆ.


ಈ ಹಿಂದೆ ಗುಡ್ಡದ ಭೂತ ಧಾರಾವಾಹಿಯಲ್ಲಿ ನೀವೊಂದು ಮನೆ ನೋಡಿರಬಹುದು, ಆ ಮನೆಯಲ್ಲಿಯೇ ಈ ಚಿತ್ರವನ್ನು ಚಿತ್ರೀಕರಿಸಿದ್ದು, ರವಿ ಬಸ್ರೂರು ನಿರ್ದೇಶನ ಮೆಚ್ಚಿಕೊಳ್ಳುವಂತಿದೆ.

ಸತ್ಯಘಟನೆಯಾಧಾರಿತ ಕಥೆ ಒಂದು ಕಡೆ ಇಷ್ಟವಾದರೆ, ಇನ್ನೊಂದು ಕಡೆ ರವಿ ಬಸ್ರೂರರ ಬ್ಯಾಗ್ರೌಂಡ್ ಸ್ಕೋರ್ ಮೈನವಿರೇಳಿಸುತ್ತೆ.

ಕರಾವಳಿ ಕುಂದಾಪುರದ ಕಡೆ ಚಿತ್ರೀಕರಿಸಿದ ಈ ಚಿತ್ರ ವಾಮಾಚಾರ ಮತ್ತು ಅದರಿಂದಾಗುವ ಅನಾಚಾರ ಇತ್ಯಾದಿಗಳ ಎಳೆಯನ್ನಿಟ್ಟುಕೊಂಡು ಹೆಣೆಯಲಾಗಿದ್ದು, ಸಮಾಜಘಾತುಕ ಕಟಕವಾಮಾಚಾರದ ಅವಾಂತರವನ್ನು ಬೆಚ್ಚಿಬೀಳಿಸಿ ನೋಡುಗನಿಗೆ ಸಾರಾಂಶ ಉಣಬಡಿಸುತ್ತದೆ.


ಮೊದಲಾರ್ಧಕ್ಕಿಂತಲೂ ಧ್ವಿತಿಯಾರ್ಧ ಮೈನವಿರೇಳಿಸುವುದಲ್ಲದೇ, ಸಣ್ಣಪುಟ್ಟ ಅಭಿನಯ ಮೋಸವನ್ನು ಬಿಟ್ಟರೆ ಉಳಿದೆಲ್ಲಾ ಪಾತ್ರವರ್ಗದ ಕಲಾವಿದರು ಮತ್ತು ಕಥಾನಾಯಕ ಅಶೋಕ್ ರಾಜ್, ಸ್ಪಂಧನಾ, ಮಗುವಿನ ಪಾತ್ರದಲ್ಲಿ ಶ್ಲಾಘಾ ಅಭಿನಯ ಶ್ಲಾಘಿಸುವಂತಿದೆ.

ಹಾರರ್ ಸಿನಿಮಾ ಇಷ್ಟಪಡುವ ಎಲ್ಲರೂ ಒಮ್ಮೆ ಈ ಸಿನಿಮಾ ನೋಡಬಹುದು, ಬಹುದಿನಗಳ ಬಳಿಕ ಮತ್ತೊಂದು ಒಳ್ಳೆಯ ಸಿನಿಮಾ ಬಂದಿದ್ದು, ಅಪ್ಪಿಕೊಂಡು ಒಪ್ಪಿಕೊಳ್ಳಬಹುದು.

ಸಿರಿ ರೇಟಿಂಗ್ 4/5

– ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಿರಿ ಸಂಪಾದಕ

Leave a Reply