Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema > ಎನ್ ಶಾಸ್ತ್ರಿ ಕೊನೆಯ ಹಾಡು – ‘ಇಲ್ಲ’ದಲ್ಲಿದೆ

ಎನ್ ಶಾಸ್ತ್ರಿ ಕೊನೆಯ ಹಾಡು – ‘ಇಲ್ಲ’ದಲ್ಲಿದೆ

ಇಲ್ಲ ಸಿನಿಮಾದ” ಐ ಡೋಂಟ್ ನೋ ಇಂಗ್ಲಿಷ್ ” ಹಾಡಿಗೆ ಈಗ ಎಲ್ಲಿಲ್ಲದ ಬೇಡಿಕೆ ಅಂತಹದ್ದೇನಪ್ಪ ಈ ಸಿನಿಮಾದಲ್ಲಿ ಇದೆ ಅಂತೀರ ಇದು ಖ್ಯಾತ ಗಾಯಕ ಎಲ್ ಎನ್ ಶಾಸ್ತ್ರಿಯವರ ಕೊನೆಯ ಹಾಡು.
ಸ್ವತಃ ಅವರೇ ಧ್ವನೀಗೂಡಿಸಿರುವಂತಹ ಈ ಹಾಡು ಈಗ ಎಲ್ಲೆಡೆ ವೈರಲ್ ಆಗಿದೆ 3 ನಿಮಿಷ 20 ಸೆಕೆಂಡ್ ಇರುವ ಈ ಸಾಂಗ್ ಯುಥ್ಸ್ ಹಾಗು ಕನ್ನಡ‌ ಅಭಿಮಾನಿಗಳನ್ನ ಸಿನಿಮಾದತ್ತ ಆಕರ್ಷಿಸುತ್ತಿದೆ ಈಗಾಗಲೇ ಹೊಸ ಸಿನಿಮಾನ ಹೊಸ ರೀತಿಯಲ್ಲಿ ಹೊಸ ಶೈಲಿಯಲ್ಲಿ ತರ್ತಿರೊ ಈ ಸಿನಿಮಾಗೆ ಬಹಳಷ್ಟು ಮಂದಿ ವಿತರಕರು ಗಾಂಧಿನಗರದಲ್ಲಿ ಮುಗಿಬಿದ್ದಿದ್ದಾರೆ , ಈ ಸಿನಿಮಾದ ದೊಡ್ಡ ಸಹಾಸಕ್ಕೆ ಕೈ ಹಾಕಿರೊ ನಿರ್ದೇಶಕ ರಾಜ್‌ಪ್ರಭು ಸ್ವತಃ ತಾವೇ  ಗೀತೆಯನ್ನು ರಚಿಸಿದ್ದಾರೆ ಇದಕ್ಕೆ ಪವನ್ ಪಾಥ್ ಸಂಗೀತ ನೀಡಿದ್ದಾರೆ ,ಸಧ್ಯ ಈ ಸಾಂಗ್‌ನ  C music ಕಂಪನೀಯ ಮಾಲಿಕರು ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ
ಚಿತ್ರದ ರಾಜ್ ಪ್ರಭು- ರಚಿಸಿ ನಿರ್ದೇಶಿಸಿ ನಾಯಕನಾಗಿ ಎಲ್ಲವನ್ನೂ ತಾವೇ ಹೊರೆ ಹೊತ್ತಿದ್ದಾರೆ ಸಧ್ಯ ವಿಭಿನ್ನ ರೀತಿಯಲ್ಲಿ “ಇಲ್ಲ ಎಂಬ ಟೈಟಲ್ ಇಟ್ಕೊಂಡು ಬರ್ತಿರೊ ಈ ಸಿನಿಮಾ ವರ್ಷದ ಕೊನೆಯ ತಿಂಗಳಲ್ಲಿ ಬಿಡುಗಡೆ ಆಗಲಿದೆ ಸಧ್ಯ ಚಿತ್ರತಂಡ  ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಭಿಜಿಯಾಗಿದೆ. ಚಿತ್ರದಲ್ಲಿ ಇವರದ್ದು ಸತೀಶ್ ಎಂಬ ಪಾತ್ರ ಒಂದೇ ಕ್ಯಾರೆಕ್ಟರ್ ಆದ್ರೆ  13 ತರಹದ ಲುಕ್ಗಳ್ನ ಕೊಡ್ತಿದ್ದಾರೆ , ಈ ಸಿನಿಮಾಗೆ ನಿರ್ಮಾಪಕ ಸುಶಾಂತ್ ಬಂಡವಾಳ ಹೂಡಿದ್ದಾರೆ . ಒಟ್ಟಾರೆಯಾಗಿ ಹೇಳೊದಾದರೇ ಸ್ಯಾಂಡಲ್ವುಡ್‌ನಲ್ಲಿ ದಿನೇ ದಿನೇ ಹೊಸ  ಪ್ರಯೋಗಕ್ಕೆ ನವ ಪ್ರತಿಭೆಗಳು ಮುಂದೆಬರ್ತಿದ್ದಾರೆ ಎಲ್ಲಾ ಅಂದುಕೊಂಡಂತೆ ಆದರೆ  ಸಿನಿಮಾ ಒಂದು ರೀತಿಯ ಟ್ರೆಂಡ್ ಸೆಟ್ ಮಾಡೋದರಲ್ಲಿ ಡೌಟೇ ಇಲ್ಲ.
 

Leave a Reply