Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Mudre > ಲಿಂಗ ಮುದ್ರೆಯಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ!?- ಓದಿ ಮುದ್ರಾ ವಿಶೇಷ

ಲಿಂಗ ಮುದ್ರೆಯಿಂದ ಏನೆಲ್ಲಾ ಉಪಯೋಗ ಇದೆ ಗೊತ್ತಾ!?- ಓದಿ ಮುದ್ರಾ ವಿಶೇಷ

SIRI-Linga Mudra (Mudra of Heat)

-ಶ್ರೀಮತಿ ಲಲಿತಾನಾರಾಯಣ

ಎರಡೂ ತೋಳುಗಳನ್ನು ಒಂದರಲ್ಲೊಂದು ಸೇರಿಸಿ ಒಂದು ಹೆಬ್ಬೆಟ್ಟನ್ನು ಅಂದರೆ ಅಂಗುಷ್ಠವನ್ನು ನೇರವಾಗಿಟ್ಟು ಇನ್ನೊಂದು ಅಂಗುಷ್ಠವನ್ನು ಒಳಗೆ ಹುದುಗಿಸಬೇಕು.
ಎರಡೂ ಕೈಗಳ ಮುಂಭಾಗಗಳು ಅಂಗೈಗಳು ದಬ್ಬಲ್ಪಟ್ಟು ಅವುಗಳಲ್ಲಿರುವ ಗಂಟಲು, ಕತ್ತು, ಪಿತ್ತಾಶಯ, ಯಕೃತ್ತು, ಥೈರಾಯ್ಡ್ ಗ್ರಂಥಿ, ಹೃದಯ, ಪ್ಯಾಂಕ್ರಿಯಾಸ್, ಗ್ರಂಥಿಯ ಬಿಂದುಗಳು ಒತ್ತಡಲ್ಪಡುತ್ತವೆ. ಆದ್ದರಿಂದ ಅವೆಲ್ಲವುಗಳ ಕಾರ್ಯ ಉತ್ತಮಗೊಳ್ಳುತ್ತದೆ. ಅಂಗುಷ್ಠಗಳೂ ಒಂದನ್ನೊಂದು ಒತ್ತಿರುವ ಕಾರಣ ಉಷ್ಣತೆ ಬಲಗೊಳ್ಳುತ್ತದೆ.
ಪರಿಣಾಮ:-
* ಗಂಟಲು ನೋವಿಗೆ ರಾಮಬಾಣ
* ಪಿತ್ತಾಶಯದ ತೊಂದರೆಗಳಿಗೆ ಹೇಳಿ ಮಾಡಿಸಿದ ಮುದ್ರೆ
* ಯಕೃತ್ತಿನ ತೊಂದರೆಗಳಿಗೆ ರಾಮಬಾಣ
* ಥೈರಾಯ್ಡ್ ಗ್ರಂಥಿಯ ತೊಂದರೆಗೆ ರಾಮಬಾಣ
* ಹೃದಯದ ತೊಂದರೆಗಳನ್ನು ನಿವಾರಿಸುತ್ತದೆ
* ಪ್ಯಾಂಕ್ರಿಯಾಸ್ ಗ್ರಂಥಿಯ ಬಿಂದುಗಳು ಸಮತೋಲನದಲ್ಲಿರುತ್ತದೆ
* ಅಧಿಕ ಕೆಮ್ಮಿಗೆ ರಾಮಬಾಣ
* ಸೀನಾಸ್ ತೊಂದರೆಗಳನ್ನು ನಿವಾರಿಸುತ್ತದೆ
* ಶೀತಕ್ಕೆ ಅದರಲ್ಲೂ ಅಧಿಕವಾದ ಶೀತಕ್ಕೆ ಹೇಳಿಮಾಡಿಸಿದ ಮುದ್ರೆ
* ಉಬ್ಬಸಕ್ಕೆ ಹೇಳಿ ಮಾಡಿಸಿದಂತಹ ಮುದ್ರೆ
* ಬ್ಯಾಂಕೈಟೀಸ್ ತೊಂದರೆಗಳಿಗೆ ರಾಮಬಾಣ
* ಶ್ವಾಸಕೋಶದ ತೊಂದರೆಗೆ ಹೇಳಿ ಮಾಡಿಸಿದಂತಹ ಮುದ್ರೆ
* ಟಿ ಬಿ ಮುಂತಾದ ಕಫದ ವ್ಯಾಧಿಗಳಿಗೆ ಹೇಳಿ ಮಾಡಿಸಿದಂತಹ ಮುದ್ರೆ
* ಋತು ಪರಿವರ್ತನೆ ಉಂಟಾಗುವ ಸಂದರ್ಭದಲ್ಲಿ ಆಗುವ ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ
* ಹವಾನಿಯಂತ್ರಿತ ಸ್ಥಳದಲ್ಲಿ ಕೆಲಸ ಮಾಡುವಾಗ ಚಳಿಯ ತೊಂದರೆ ಉಂಟಾಗುತ್ತದೆ. ಅದಕ್ಕೆ ಇದು ರಾಮಬಾಣ.
* ಶರೀರದಲ್ಲಿನ ಚಳಿಯನ್ನು ಹೋಗಲಾಡಿಸುತ್ತದೆ.
* ಶರೀರದಲ್ಲಿ ಉಷ್ಣ ಸಂಚರಿಸುವಂತೆ ಮಾಡುತ್ತದೆ.
* ಶರೀರವನ್ನು ಸಮಶೀತೋಷ್ಣವಾಗಿಡುತ್ತದೆ
* ಪಿತ್ತಕಾಮಾಲೆಯನ್ನು ಸರಿ ಪಡಿಸುತ್ತದೆ
* ನರಗಳ ತೊಂದರೆಯನ್ನು ನಿವಾರಿಸುತ್ತದೆ
* ಕಣ್ಣಿನ ನೋವನ್ನು ಸರಿಪಡಿಸುತ್ತದೆ
* ಶರೀರದ ಬೊಜ್ಜು ಕರಗಲು ಸಮರ್ಥವಾದ ಮುದ್ರೆ
* ಪುರುಷರಲ್ಲಿನ ಲೈಂಗಿಕ ಶಕ್ತಿಯನ್ನು ಸರಿಪಡಿಸುತ್ತದೆ
* ನಾಭಿ ಕೇಂದ್ರವು ಸ್ವಸ್ಥಾನಕ್ಕೆ ಬಂದು ಪಚನ ಕ್ರಿಯೆ ಸರಿ ಪಡಿಸುತ್ತದೆ
* ಶರೀರದಲ್ಲಿನ ನೋವುಗಳನ್ನು ಸರಿಪಡಿಸುತ್ತದೆ
* ಸ್ನಾಯುಗಳ ನೋವನ್ನು ನಿವಾರಣೆ ಮಾಡುತ್ತದೆ
* ಮೂಳೆಗಳ ಅಧಿಕ ನೋವನ್ನು ಸರಿಪಡಿಸುತ್ತದೆ
* ಸ್ನಾಯುಗಳಲ್ಲಿನ ಕಾಲುಗಳಲ್ಲಿನ ಕ್ರಾಂಪ್ಯಾಗೆ ಹೇಳಿ ಮಾಡಿಸಿದ ಮುದ್ರೆ
* ಬೇರೆ ಸ್ಥಳಗಳಿಗೆ ಹೋದಾಗ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ
* ಸಂಧಿ ನೋವುಗಳನ್ನು ಸರಿಪಡಿಸುತ್ತದೆ
* ಅಧಿಕ ವಾತವಾಗಿದ್ದರೆ ಇದು ರಾಮಬಾಣದಂತ ಮುದ್ರೆ
* ಬೆಳಗಿನ ಹೊತ್ತು ಬರುವ ಸೀನಿನ ತೊಂದರೆಗಳನ್ನು ಸರಿಪಡಿಸುತ್ತದೆ
* ಓದುವಾಗ ತೊಂದರೆಯಿದ್ದರೆ ಅದಕ್ಕೆ ಇದು ರಾಮಬಾಣದಂತಹ ಮುದ್ರೆ
* ಸೊಂಟ ನೋವಿಗೆ ಇದು ರಾಮಬಾಣದಂತಹ ಮುದ್ರೆ

( ಇಲ್ಲಿ ಹೇಳಿರುವುದು ಸಾಮಾನ್ಯ ನಿಯಮಗಳು. ಆದರೆ ವಿಶೇಷವಾಗಿ ಯಾವುದನ್ನಾದರೂ ತಿಳಿದುಕೊಳ್ಳಬೇಕಾದರೆ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಕೊಡಲಾಗಿದೆ. ನೇರವಾಗಿ ಸಂಪರ್ಕಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು)

Leave a Reply