Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Breaking News > ಮೊದಲ ಪಂದ್ಯದಲ್ಲೇ ಲಯ ಕಂಡುಕೊಳ್ಳುವ ವಿಶ್ವಾಸವಿದೆ : ಮನ್​ಪ್ರೀತ್

ಮೊದಲ ಪಂದ್ಯದಲ್ಲೇ ಲಯ ಕಂಡುಕೊಳ್ಳುವ ವಿಶ್ವಾಸವಿದೆ : ಮನ್​ಪ್ರೀತ್

ಏಷ್ಯಾದ ನಂ. 1 ಪಟ್ಟ ಉಳಿಸಿಕೊಳ್ಳುವ ಹಂಬಲದಲ್ಲಿರುವ ಭಾರತ ತಂಡ ಢಾಕಾದಲ್ಲಿ ಬುಧವಾರ ಆರಂಭವಾಗಲಿರುವ 10ನೇ ಆವೃತ್ತಿಯ ಪುರುಷರ ಹಾಕಿ ಏಷ್ಯಾಕಪ್​ನಲ್ಲಿ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ. ಜಪಾನ್ ವಿರುದ್ಧ ಮೊದಲ ಪಂದ್ಯ ಆಡಲಿರುವ ಮಿಡ್​ಫೀಲ್ಡರ್ ಮನ್​ಪ್ರೀತ್ ಸಿಂಗ್ ಸಾರಥ್ಯದ ಭಾರತ ತಂಡಕ್ಕೆ ಹೊಸ ಕೋಚ್ ನೆದರ್ಲೆಂಡ್​ನ ಜೊಯೆರ್ಡ್ ಮರಿಜ್ನೆ ಮಾರ್ಗದರ್ಶನದಲ್ಲಿ ಇದು ಮೊದಲ ಸವಾಲಾಗಿದೆ. ಕಳೆದ 4 ವರ್ಷಗಳ ಕಾಲ ರೋಲ್ಯಾಂಟ್ ಓಲ್ಟ್​ಮನ್ಸ್ ಗರಡಿಯಲ್ಲಿ ಪಳಗಿದ್ದ ಭಾರತ ತಂಡ ಇದೀಗ 43 ವರ್ಷದ ಮರಿಜ್ನೆ ತರಬೇತಿಯಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿದೆ.

8 ತಂಡಗಳ ಟೂರ್ನಿಯಲ್ಲಿ ಭಾರತ ಶುಭಾರಂಭ ಬಯಸಿದ್ದು, ಮೊದಲ ಪಂದ್ಯದಲ್ಲೇ ಲಯ ಕಂಡುಕೊಳ್ಳುವ ವಿಶ್ವಾಸವಿದೆ ಎಂದು ಮನ್​ಪ್ರೀತ್ ಹೇಳಿದ್ದಾರೆ. ಕನ್ನಡಿಗ ಎಸ್​ವಿ ಸುನೀಲ್ ಉಪನಾಯಕನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಯುವ ಮತ್ತು ಅನುಭವಿಗಳ ಮಿಶ್ರಣವನ್ನು ಭಾರತ ತಂಡ ಹೊಂದಿದೆ. ಸರ್ದಾರ್ ಸಿಂಗ್, ಆಕಾಶ್​ದೀಪ್, ಸತ್ಬೀರ್ ಅನುಭವದ ಬಲ ನೀಡಿದರೆ, ಹರ್ವನ್​ಪ್ರೀತ್ ಸಿಂಗ್, ಸುರೇಂದರ್, ಆಕಾಶ್ ಚಿಕ್ಟೆ ಯುವಕರ ಉತ್ಸಾಹ ತುಂಬಲಿದ್ದಾರೆ. ಈ ವರ್ಷ ಸುಲ್ತಾನ್ ಅಜ್ಲಾನ್ ಷಾ ಕಪ್​ನಲ್ಲಿ ಕೊನೇ ಬಾರಿ ಜಪಾನ್ ವಿರುದ್ಧ ಆಡಿದ್ದ ಭಾರತ, 4-3ರಿಂದ ಗೆದ್ದಿತ್ತು.

ಮುಂದಿನ 15 ತಿಂಗಳಲ್ಲಿ ಭಾರತ ತಂಡ ಹಾಕಿ ವಿಶ್ವ ಲೀಗ್ ಫೈನಲ್, ಏಷ್ಯನ್ ಗೇಮ್್ಸ, ಕಾಮನ್ವೆಲ್ತ್ ಗೇಮ್್ಸ ಮತ್ತು ವಿಶ್ವಕಪ್​ನಂಥ ಪ್ರಮುಖ ಕೂಟಗಳಲ್ಲಿ ಆಡಲಿರುವುದರಿಂದ ಅದರ ಸಿದ್ಧತೆಗೂ ಇದು ಪ್ರಮುಖ ವೇದಿಕೆಯಾಗಿದೆ.

ಟೂರ್ನಿಯ ವಿಜೇತ ತಂಡ 2018ರ ವಿಶ್ವಕಪ್​ಗೆ ಅರ್ಹತೆ ಪಡೆಯಲಿದೆ. ಆದರೆ ಆತಿಥೇಯ ತಂಡವಾಗಿ ಭಾರತ ಈಗಾಗಲೆ ವಿಶ್ವಕಪ್​ಗೆ ಅರ್ಹತೆ ಗಳಿಸಿದೆ. ಪ್ರತಿ ಗುಂಪಿನ ಅಗ್ರ 2 ತಂಡಗಳು ‘ಸೂಪರ್-4’ ಎರಡನೇ ಸುತ್ತಿಗೇರಲಿದ್ದು, ಅಲ್ಲಿನ ರೌಂಡ್​ರಾಬಿನ್ ಪಂದ್ಯಗಳ ಬಳಿಕ ಅಗ್ರ 2 ತಂಡಗಳ ನಡುವೆ ಫೈನಲ್ ನಡೆಯಲಿದೆ.

Leave a Reply