Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema > ಒಳ್ಳೆ ಹುಡುಗ ಪ್ರಥಮ್ ನೇರಾ ನೇರ ಮಾತು ಸಿರಿ ಜೊತೆ

ಒಳ್ಳೆ ಹುಡುಗ ಪ್ರಥಮ್ ನೇರಾ ನೇರ ಮಾತು ಸಿರಿ ಜೊತೆ

ಸತ್ಯವಾಗಿ ಹೇಳಿ ಪ್ರಥಮ್ ಎಷ್ಟು ಸಿನಿಮಾ ಮಾಡ್ತಿದ್ದೀರಾ!?

4 ಸಹಿಯಾಗಿವೆ ಐದನೆಯದು ಮಾತುಕತೆಯಾಗಿದೆ, ಮೂರು ಅಡ್ವಾನ್ಸ್ ತಗೊಂಡಿದ್ದೀನಿ, ಒಂದು ಆಪ್ತರ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ನನ್ನ ಡೈರೆಕ್ಷನ್ ಒಂದು ಸಇನಿಮಾ ನಡೆಯುತ್ತಿದೆ. ಒಟ್ಟು 4ರ ಮೇಲೆ 6ರ ಒಳಗೆ…

 ನಿಮ್ಮ ನಿರ್ದೇಶನದ ಚಿತ್ರದ ಕೆಲಸ ಎಲ್ಲಿಗೆ ಬಂತು? ಸುದ್ದಿ ಇಲ್ಲವಲ್ಲ!!?
ಸತ್ಯವಾಗಿ ಹೇಳ್ತೀನಿ ನೀವೇ ಕೇಳ್ದಂಗೆ ಸಿನಿಮಾ ಎಲ್ಲಿಗೆ ಬಂತು ಎನ್ನುವುದಕ್ಕೆ ನನ್ನಲ್ಲಿ ಉತ್ತರವಿಲ್ಲ. ಪ್ರಥಮ್ ಸಿನಿಮಾ ಚೆನ್ನಾಗಿ ಮಾಡಿದ್ದೀರಾ!? ಎಂದು ಕೇಳಿದರೆ ನಾನದಕ್ಕೆ ಉತ್ತರ ಕೊಡಬಹುದು. ಆದರೆ ಒಂದು ಸಿನಿಮಾ ಯಾಕೆ ಲೇಟಾಗುತ್ತೆ ಎನ್ನುವ ಕಾರಣ ತೆಗೆದರೆ ಅಲ್ಲಿ ಪ್ರೋಡ್ಯೂಸರ್ ಕಾರಣ, ಫೈನಾನ್ಸ್ ಕಾರಣ, ನಟರ ಡೇಟ್ ಕಾರಣ ಎಲ್ಲವೂ ಎದ್ದು ಕಾಣುತ್ತದೆ. ನನ್ನ ಸಿನಿಮಾದಲ್ಲಿ ಹಾಗೆಲ್ಲ ಆಯ್ತು ಅಂತ ನಾ ಹೇಳ್ತಿಲ್ಲ ನನ್ನ ಸಿನಿಮಾದ ಪ್ರೋಡ್ಯೂಸರ್ ತುಂಬಾ ಸಹಕಾರಿ ಮನುಷ್ಯ ಇವನ್ ನಾನು ಬಿಗ್ ಬಾಸ್ ಗೆ ಹೋಗುವಾಗಲೂ ಅವರ ಸಹಕಾರ ತುಂಬಾನೆ ಸಿಕ್ತು. ಅಲ್ಲಿಗೆ ಹೋಗಿ ನೂರ ಹದಿನಾಲ್ಕು ದಿನ ಹಾಗೆಯೇ ಕಳೆದು ಹೋಯಿತು ಅದಾದ ಮೇಲೆ ಅಲ್ಲಿಂದ ಬಂದ ನಂತರ ತುಂಬಾ ಬ್ಯುಸಿ ಆದೆ. ನೀವೇ ಹೇಳಿ ಎಷ್ಟು ದಿನದಿಂದ ನನ್ನ ಸಂದರ್ಶನಕ್ಕೆ ಕಾದಿದ್ದೀರಿ, ನಿಮಗೆ ನಾನು ಸಿಗೋಕೆ ಆಗಿರಲಿಲ್ಲ ಅಷ್ಟೇ ಹೊರತು ಬೇರೇನಿಲ್ಲ. ಖಂಡಿತ ಆದಷ್ಟು ಬೇಗ ರಿಲೀಸ್ ಆಗುತ್ತೆ. ಅಅದು ನನ್ನ ಡ್ರೀಮ್. ನನ್ನ ನಿರೀಕ್ಷೆಯ ಸಇನಿಮಾ. ಚೆನ್ನಾಗಿ ಮಾಡ್ತೇನೆ. ಅದು ನನ್ನ ಕನಸಂತೆ ಅರಳಿರುವುದು ಅದನ್ನ ನಾನು ಬಿಡಲ್ಲ. ಮುಂದಿನ ಚಿತ್ರಗಳ ಬಗ್ಗೆ ನಾ ಹೇಳಲ್ಲ ಇದನ್ನಂತು ಪಕ್ಕಾ ನಾನಂದುಕೊಂಡಂತೆ ಮಾಡುತ್ತೇನೆ.
ಅಂದ್ರೆ ಯಾವಾಗಾ ನಾವು ನಿರೀಕ್ಷೆ ಮಾಡಬಹುದು!?
ಇದೇ ಮೊದಲ ಬಾರಿಗೆ ನಿಮಗೆ ಹೇಳುತ್ತಿದ್ದೇನೆ ದಕ್ಷಿಣ ಭಾರತದ ಪ್ರಸಿದ್ದ ನಟರೊಬ್ಬರು ನನ್ನ, ದೇವ್ರವ್ನೆ ಬಿಡು ಗುರು ಚಿತ್ರವನ್ನು ಸೇರಿಕೊಳ್ಳಲಿದ್ದಾರೆ. ಅದಕ್ಕಾಗಿ ಎಲ್ಲೂ ಅದರ ಬಗ್ಗೆ ಮಾತಾಡಿಲ್ಲ. ಅತೀ ಶೀಘ್ರವಾಗಿ ಇದರ ಬಗ್ಗೆ ಮಾಹಿತಿ ನಿಮಗೂ ಸಿಗುತ್ತೆ ನೋಡಿ. ಈಗಲೇ ಅದರ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಸುಮಾರು ಜನ ಪ್ರಥಮ್ ಅದು ಮಾಡಿದ, ಇದು ಮಾಡಿದ ಅಂತಿದ್ದಾರೆ ಆದರೆ ನನಗೆ ಒಳ್ಳೆದು ಮಾತಾಡುವವರ ಬಗ್ಗೆಯೇ ಇಣುಕಿ ನೋಡೋಕೆ ಆಗ್ತಿಲ್ಲ ಇನ್ನು ಕೆಟ್ಟದ್ದು ಮಾತನಾಡುವುದರ ಬಗ್ಗೆ ಹೇಗೆ ತಲೆಕೆಡಿಸಿಕೊಳ್ಳಲಿ. ಹಿಂದೆಯೂ ಅಕುಲ್ ನಾವೆಲ್ಲ ಒಂದಾಗಿ ಸಿನಿಮಾ ಮಾಡ್ತಾ ಇದ್ದೀವಿ ಈಗಲೂ ಅಷ್ಟೆ ಇರೋದು. ಮುಂದೆ ಒಂದು ಸಾಂಗನ್ನ ರಿಲೀಸ್ ಮಾಡ್ತಾ ಇದ್ದೀವಿ. ಕೆಲಸ ನಡಿತಿದೆ. ಅದರ ಮಧ್ಯೆ ನನ್ನ ಸಿನಿಮಾದ ಶೂಟಿಂಗ್‍ನಲ್ಲೂ ಭಾಗಿಯಾಗ್ತಾ ಇದ್ದೀನಿ. ಫ್ರೀ ಇಲ್ಲ ಆದರೂ ಫ್ರೀ ಮಾಡಿಕೊಂಡು ಎಲ್ಲವನ್ನು ಬ್ಯಾಲೆನ್ಸ್ ಮಾಡ್ತಾ ಇದ್ದೀನಿ.

ಪ್ರಥಮ್ ಯಾಕೆ ಇಷ್ಟೊಂದು ಬ್ಯುಸಿ!?
ಬ್ಯುಸಿಯೇ ಇಲ್ಲ. ಮುಮಚೆ ಹೇಗಿದ್ದೀನೋ ಹಾಗೆ ಇದ್ದೀನಿ. ಆದರೆ ಕೆಲಸದ ಒತ್ತಡ ಹಾಗೆ ತಂದು ನಇಲ್ಲಿಸಿದೆ ಅಷ್ಟೆ. ನೀವೇ ಹೇಳಿ ನಾನು ನಇರ್ದೇಶಿಸುವ ಸಿನಿಮಾದ ಬಗ್ಗೆ ನನಗೆ ಆಸೆಗಳಿರುವುದಿಲ್ಲವಾ!? ಅದನ್ನು ಬಿಟ್ಟು ಆ್ಯಕ್ಟ್ ಮಾಡ್ತಾ ಇದ್ದೀನಿ ನನ್ ಕರ್ಮಾನಪ್ಪಾ!!. ನನ್ ಯಾಕ್ ಹೀರೋ ಮಾಡ್ತಿದ್ದೀರಾ!? ಎಂದು ನಾಲ್ಕು ಐದು ಸಲ ಪ್ರೋಡ್ಯೂಸರ್ ಹತ್ರ ಕೇಳಿದ್ದೆ. ಇಲ್ಲ ಇಲ್ಲ ನೀವು ನಮ್ಮ ಸಇನಿಮಾಗೆ ಹೀರೋ ಆಗಲೇ ಬೇಕೆಂದು ಒತ್ತಾಯಿಸಿರು. ಒಬ್ಬರಲ್ಲ ಇಬ್ಬರಲ್ಲ ನಾಲ್ಕೈದು ಜನ. ಅಡ್ವಾನ್ಸ್ ಕೂಡ ತಗೊಂಡ್ ಬಿಟ್ಟಿದ್ದೀನಿ. ಬಹಳ ಖುಷಿ ವಿಚಾರವೆಂದರೆ ಎಲ್ಲರೂ ಬಹಳ ದೊಡ್ಡ ಮಟ್ಟದಲ್ಲೇ ಲಾಂಚ್ ಮಾಡ್ತಿದ್ದಾರೆ. ಜೊತೆಗೆ ಇನ್ನೊಂದು ಬಹುಮುಖ್ಯ ವಿಚಾರವೆಂದರೆ ನಾನು ಮತ್ತು ಸಂಜನಾ ಇಬ್ಬರು ಒಟ್ಟಿಗೆ ಕನ್ನಡ ಕಲರ್ಸ್ ವಾಹಿನಿಯಲ್ಲಿ ಅತೀ ಶೀಘ್ರದಲ್ಲಿ ವೀಕೆಂಡ್ ಶೋನಲ್ಲಿ ಬರ್ತಾ ಇದ್ದೀವಿ. ಅದರ ಫೋಟೋ, ಪ್ರೋಮೋ ಶೂಟ್ ಎಲ್ಲವೂ ಮುಗಿದಿದೆ. ಜೊತೆಗೆ ನಾನು ಒಪ್ಪಿಕೊಂಡಿರೋ ಕೆಲಸ ಇದೆ, ಇವೆಂಟ್ =ಗಳಿವೆ ಇದೆಲ್ಲವನ್ನು ಮುಗಿಸೋವಷ್ಟರಲ್ಲಿ ಸಾಕಾಗಿಹೋಗುತ್ತೆ.

ನಮಗೆ ಹಿಂದಿದ್ದ ಪ್ರಥಮ್ ಬೇಕು? ಹೇಗಿದ್ದ!?
ತುಂಬಾ ನೇರವಾಗಿ ಅದಕ್ಕಿಂತಲೂ ಹೆಚ್ಚಾಗಿ ಕೆಲವು ಕಡೆ ನನಗೆ ವಿರೋಧಿಗಳು ಹೇಗೆ ಹುಟ್ಟಿದ್ದರು ಎಂದರೆ ನನ್ನ ಮಾತು ದಾಟಿಯೇ ಹಾಗೆ. ಬಿಗ್ ಬಾಸ್ ಮನೇಲಿ ಹೇಗಿದ್ನೋ ಹಾಗೆ ನನ್ನ ನಿಜಜೀವನದಲ್ಲೂ ಇದ್ದೆ. ಅದನ್ನೆಲ್ಲಾ ನಾನು ಕೇರ್ ಮಾಡಲ್ಲ. ಹಾಗೆ ವಿರೋಧಿಸುತ್ತಿದ್ದಾಗಲೂ ಕೂಡ ನನ್ನ ವಿರೋಧಿಸಬೇಡಿ ಎಂದು ನಾ ಹೇಳಿಲ್ಲ. ಹಾಗೆ ಹೇಳಲು ನಾನ್ಯಾರು ಅಲ್ವಾ! ನನ್ನ ನಡೆ, ನನ್ನ ವೇ ಆಫ್ ಟಾಕಿಂಗ್ ಮೊದಲಿಂದಲೂ ಹೀಗೆ ಇತ್ತು.

ನೀವು ಹುಟ್ಟಿ ಬೆಳೆದಿದ್ದು ಎಲ್ಲಿ?
ಮೈಸೂರಲ್ಲಿ. ಓದಿದ್ದು ಕೂಡ ಅಲ್ಲಿಯೆ. ಓದುವಾಗ ಹೇಗೆಂದರೆ ನಾನು ಐದನೇ ತರಗತಿ ಇರುವಾಗ ನನ್ನ ಕ್ಲಾಸ್ ನಲ್ಲಿ ಸ್ಮಿತಾ ಅಂತ ಒಬ್ಬಳು ಹುಡುಗಿ ಇದ್ಲು. ಅವಳು ನನಗಿಂತ ಜಾಸ್ತಿ ಮಾರ್ಕ್ ತೆಗೆದುಕೊಳ್ಳುತ್ತಿದ್ದಳು. ಅಪ್ಪ ಬೈತಾರೆ ಅಂತ ಟೆಸ್ಟ್ ಆಗಿ ಹೊರಬರುವ ಹೊತ್ತಿಗೆ ಅವಳು ಬರೆದು ಇಟ್ಟಿರುತ್ತಿದ್ದ ಉತ್ತರ ಪತ್ರಿಕೆಯಲ್ಲಿ ಮಧ್ಯದೊಂದು ಪುಟವನ್ನು ಹಾಗೆ ಹರಿದು ಹಾಕಿ ಬರುತ್ತಿದ್ದೆ ಉತ್ತರ ಪತ್ರಿಕೆ ನೀಡುವಾಗ ಅವಳಿಗೆ ಕಡಿಮೆ ಅಂಕ ಬರುವುದು ನನಗೆ ಜಾಸ್ತ ಅಂಕ ಬರುವುದು, ಅದನ್ನು ನಓಡಿ ಖುಷಿ ಪಡ್ತಿದ್ದೆ. ಹೈಸ್ಕೂಲ್‍ನಲ್ಲಿ ಒಮ್ಮೆ ಹುಡುಗ ತಲೆಗೆ ಪೆನ್ ಚುಚ್ಚಿ ಮನೆಗೂ ಹೋಗದೆ ಒಂದು ವಾರ ಹೊರಟು ಹೋಗಿದ್ದೆ. ಅರಮನೆ ಮುಂದೊಂದು ಜಗುಲಿ ಇತ್ತು ಅಲ್ಲಿ ಮಲಗಿಕೊಳ್ಳುತ್ತಿದ್ದೆ ನನಗೆ ಇನ್ನೊಸೆಂಟ್ ಆಗಿ ಅಭಿನಯಿಸೋಕೆ ಬರಲ್ಲ, ತಂದೆ ಸಿನಿಮಾ ಮಾಡುವುದು ಬೇಡ ಅಂದ್ರು, ಡ್ಯಾಡಿ ಮಮ್ಮಿ ಜೊತೆ ಹೊಂದಾಣಿಕೆ ಆಗಲಿಲ್ಲ ಬಂದ್ಬಿಟ್ಟೆ. ಸಿನಿಮಾ ನನ್ನ ಮುಂದಿದ್ದ ಗೋಲಾ ಆಗಿತ್ತು. ಹಾಗಂತ ನಾನು ಮನೆ ಬಿಟ್ಟೆ ಎಂದು ಹೇಳಲ್ಲ. ಅಲ್ಲಿಂದ ನನ್ನ ಗುರಿ ಹುಡುಕುತ್ತಾ ಬಂದೆ. ಅಲ್ಲಿಂದ ಬಂದಿಲ್ಲವೆಮದರೆ ಇಂದು ಇಂತಹ ಸ್ಥಾನದಲ್ಲಿ ನಾನು ಕೂರೋಕೆ ಸಾಧ್ಯವಾಗ್ತಾ ಇರಲಿಲ್ಲ ಅಲ್ವಾ!

ಇಲ್ಲಿಗೆ ಬಂದು ಕೆಲಸ ಕಾರ್ಯ ಏನು ಮಾಡ್ಕೊಂಡಿದ್ರಿ!? ಕಷ್ಟವಾಗಲಿಲ್ವಾ!?
ಮೆಜೆಸ್ಟಿಕ್ ನಿಂದ ಕೆಂಗೇರಿಗೆ ಪ್ರತಿದಿನ ವಾಕ್ ಹೋಗ್ತಾ ಇದ್ದೆ. ಆಗೆಲ್ಲಾ ಬಸ್ ಪಾಸ್ ಇಪ್ಪತೈದು ರೂಪಾಯಿ ಇತ್ತು. ಡೈರೆಕ್ಷನ್ ಕ್ಲಾಸ್‍ಗೆ ಸೇರಿಕೊಳ್ಳಬೇಕೆನ್ನುವ ಆಸೆಯಿತ್ತು ಅದಕ್ಕಾಗಿ ರಾತ್ರಿಯೆಲ್ಲಾ ಬಿಸ್ಕೆಟ್ ಕಂಪೆನಿಯಲ್ಲಿ ಕೆಲಸ ಮಾಡಿ ಅಲ್ಲೇ ತೂಕಡಿಸುತ್ತಿದ್ದೆ. ಅಲ್ಲಿಂದ ಮೆಜೆಸ್ಟಿಕ್ ವರೆಗೂ ನಡೆದುಕೊಂಡು ಬಂದು ಕ್ಲಾಸ್ ಮುಗಿಸುವಷ್ಟರಲ್ಲಿ ಸಂಜೆ 5 ಆಗ್ತಿತ್ತು. ಪ್ರತಿದಿನ ಊರಿಗೆ ಹೋಗ್ತಾರಲ್ಲ ಅವರ ಹತ್ತಿರ ಪಾಸ್ ತೆಗೆದುಕೊಂಡು ಅದರಲ್ಲಿ ನಆನು ಕೆಂಗೇರಿಗೆ ಹೋಗ್ತಿದ್ದೆ.

ಪ್ರಥಮ್ ಮು0ದೊಂದು ದಿನ ಹೀಗಾಗ್ತಾನೆ ಅಂತ ಯಾರಾದ್ರೂ ಹೇಳ್ತಿದ್ರಾ!?
ನನ್ನ ಬೆನ್ನು ತಟ್ಟೋರು 90 ಜನ ಇದ್ದರೆ ಕಾಲೆಳೆಯುವವರು 10 ಜನ ಇದ್ದಾರೆ. ಆದರೆ ಆ ಸಮಯದಿಂದಿ ಈ ಸಮಯದೊರೆಗೂ ಇದೀಗ ಟಗರು ಸಿನಿಮಾಕ್ಕೆ ನಿರ್ಮಾಪಕರಾಗಿರುವ ಶ್ರೀಕಾಂತ್ ನನ್ನ ಜೊತೆಗೆ ಇದ್ದು ಬೆನ್ನುತಟ್ಟಿದ್ದರು. ಅವರಿಗೆ ಸುಮಾರು ಜನ ಅವನು ಬಹಳ ಹೆಡ್ ವೈಟ್ ಇರೋ ಮನುಷ್ಯ, ಕೋಪಿಷ್ಠ, ಮೂಮಗೋಪಿ ಹೇಗೆ ಹ್ಯಾಂಡಲ್ ಮಾಡ್ತೀರಾ!? ಎಂದೆಲ್ಲಾ ಹೇಳ್ತಿದು. ಆದರೂ ಅವರುನನ್ನ ತುಂಬಾ ಪ್ರೀತಿ ಮಡೋರು. ಅಲ್ಲಿ ಕಾರ್ಯಕ್ರಮ ಇದೆ, ಇಲ್ಲಿ ಶೂಟಿಂಗ್ ಇದೆ ಬಾ ಎಂದೆಲ್ಲಾ ಕರೆಯುತ್ತಿದ್ದರು ಕಳಿಸುತ್ತಿದ್ದರು. ಅವರಿಗೆ ಆಗ ನಾನು ಹೀಗೆ ಇದ್ದೆ ಅನ್ನುವ ಕಾರಣಕ್ಕೆ ಬೇಡ ಅನ್ನೋ ಕಾರಣ ಇರಲಿಲ್ಲ. ಇವತ್ತು ನನಗೆ ನಾನು ಹೀಗೆ ಆಗಿದ್ದೀನಿ ಅನ್ನೋ ಕಾರಣಕ್ಕೆ ಅವರು ಬೇಡ ಎನ್ನುವ ಅಹಂ ಇಲ್ಲ. ಇವತ್ತು ನನ್ನ ಅನೇಕ ಜನ ಗುರುತಿಸಿದ್ದಾರೆ, ನಾನು ಗೆದ್ದು ಬಂದಿದ್ದೀನಿ, ಕರೆದು ಮಾತಾಡಿಸ್ತಾರೆ ಅಂದ್ರೆ ಅದಕ್ಕೆ ಕಾರಣ ಶ್ರೀಕಾಂತ್.

ಡೈರೆಕ್ಷನ್‍ನ್ನೇ ಗುರಿಯಾಗಿಟ್ಟುಕೊಂಡಿದ್ದ ಪ್ರಥಮ್ ಹೇಗೆ ನಾಯಕನಾಗಲು ಒಪ್ಪಿಕೊಂಡ್ರು!?
ಖಂಡಿತ ಒಪ್ಪಿಕೊಳ್ಳಲಿಲ್ಲ. ಅದಕ್ಕೆ ಕಾರಣ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಅಪ್ಪು ಸರ್. ಏನಾಯ್ತು ಅಂದ್ರೆ ಬಿಗ್ ಬಾಸ್ ನಿಂದ ಬಂದ ಮೇಲೆ ನನಗೆ ತುಂಬಾ ಕಾಲ್ಸ್ ಬರೋಕೆ ಸ್ಟಾರ್ಟ್ ಆಯ್ತು. ಒಂದು ವಾರ ಯಾರ ಕೈ ಗೂ ಸಿಗಲಿಲ್ಲ. ಅದರಿಂದ ಹೊರಗೆ ಬರೋಕೆ ಟೈಮ್ ಬೇಕಾಗಿತ್ತು. ಚಾಮುಂಡಿ ಬೆಟ್ಟಕ್ಕೆ ಹೋಗಿ ಉರುಳು ಸಏವೆ ಮಾಡಿ ಬಂದೆ. ನಂಜನಗೂಡು ಟೆಂಪಲ್‍ಗೂ ಹೋಗಿಬಂದೆ. ಒಂದಿಷ್ಟು ಆಪ್ತರನ್ನು ಮಾತನಾಡಿಸಬೇಕಿತ್ತು ಅದನ್ನು ಮಾಡಿದೆ. ಅದರ ಮಧ್ಯೆ ತುಂಬಾ ಆಫರ್ ಬಂತು. ನಾನಿಷ್ಟೆ ಹೇಳಿದೆ ನನಗೆ ಅವಕಾಶ ಕೊಟ್ಟಿದ್ದು ಕಲರ್ಸ್ ಚಾನೆಲ್ ನ ಪರಮೇಶ್ವರ್ ಅವರು, ರಾಜೇಶ್ ರಾಮನಾಥ್, ಅಕುಲ್ ಬಾಲಾಜಿ, ಶ್ರೀಕಾಂತ್ ಹೀಗೆ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ ಆ್ಯಕ್ಟಿಂಗ್ ಎಲ್ಲಾ ಬೇಡ ನನಗೆ ಬಿಟ್ಟು ಬಿಡಿ ಎಂದೆ. ಗೆದ್ದಮೇಲೆ ಗೆಲುವನ್ನು ಸಮರ್ಪಿಸಲೇ ಬೇಕಲ್ವಾ ಹಾಗಾಗಿ ಅಪ್ಪು ಮನೆಗೆ ಹೋಗಿದ್ದೆ. ಜನರೆಲ್ಲಾ ಓಟು ಪ್ರಥಮ್ ಗೆ ಬಿದ್ದೆ ಎಂದು ಹೇಳ್ತಾರೆ ಆದರೆ ಈಗ್ಲೂ ಹೇಳ್ತೀನಿ ಒಂದೇ ಒಂದು ಓಟು ನನ್ನ ಯೋಗ್ಯತೆಗೆ ಬಿದ್ದಿಲ್ಲ. ಬಿದ್ದಿದೆ ಎಂದರೆ ನಾ ನಂಬಲ್ಲ. ಅಪ್ಪು ಬ್ಲೆಸ್ಸಿಂಗ್ ತಗೊಳ್ಳೋವಾಗ ಒಂದು ಮಾತು ಹೇಳಿದ್ರು. ಹೇಳಿದ್ದು ಕೇಳು, ನಿನ್ನ ಇಷ್ಟ ಸಿನಿಮಾವನ್ನು ಡಐರೆಕ್ಟ್ ಮಾಡು, ಜೊತೆಗೆ ನಿನ್ನ ಸಚರೆಎನ ಮೇಲೆ ನೋಡಿ ಖುಷಿಪಟ್ಟಿರುವ ಜನರಿಗೆ ಆ ಖುಷಿಯನ್ನು ನೀಡುತ್ತಾ ಇರು. ಇವತ್ತು ನನ್ನ ಗೆಲ್ಲಿಸಿದ್ದು ಜನ. ಜನರಿಗೆ ಇದೇ ಇಷ್ಟ ಅಂದ್ರೆ ಅದನ್ನೇ ಕೊಡೋಕೆ ಹೋಗ್ತೀನಿ. ನನಗಿಷ್ಟವಾದ ಸಿನಿಮಾನ ಡೈರೆಕ್ಟ್ ಮಾಡ್ತೀನಿ, ಇದೆಲ್ಲದ ಫಲವೇ ಈಗ ಒಪ್ಪಿಕೊಂಡ ಚಿತ್ರ ಅಷ್ಟೆ. ಇದಕ್ಕೂ ಮೊದಲು ಕ್ಕೂ ಹೆಚ್ಚು ಕತೆಗಳನ್ನು ರಿಜೆಕ್ಟ್ ಮಾಡಿದ್ದೆ ಏಳಕ್ಕೂ ಹೆಚ್ಚು ಸಿನಿಮಾಗೆ ಅಡ್ವಾನ್ಸ್ ತೆಗೆದುಕೊಂಡಿದ್ದನ್ನು ವಾಪಾಸ್ಸು ಕಳಿಸಿರುವೆ.

ದುಡ್ಡು ಬಂತಾ!?
‘ರವಿ ಕಾಣದ್ದನ್ನು ಕವಿ ಕಂಡ ಅಂತಾರೆ, ಈ ರವಿ ಕವಿ ಇಬ್ಬರೂ ಕಾಣದ್ದನ್ನು ಪತ್ರಕರ್ತರು ಕಾಣ್ತಾರೆ. ನಿಮಗೆ ಗೊತ್ತಲ್ವಾ! ಯಾಕೆ ಈ ಪ್ರಶ್ನೆ ಮತ್ತೆ ಮತ್ತೆ ಕೇಳ್ತೀರಿ. ಅಲ್ಲಿಂದ ಒಂದು ರೂಪಾಯಿಯೂ ಇನ್ನೂ ಬಂದಿಲ್ಲ. ಬೇಕಿದ್ರೆ ನಿಮಗ್ಯಾರಾದ್ರೂ ಕಲರ್ಸ್‍ನವರು ಕಾಂಟ್ಯಾಕ್ಟ್ ಇದ್ದರೆ ಕೇಳಿ ಗೊತ್ತಾಗುತ್ತೆ

ನಾವಲ್ಲ ಜನ ಕೇಳ್ತಿದ್ದಾರಲ್ಲ ಪ್ರಥಮ್ ಅದಕ್ಕಾಗಿ ನೀವು ಹೇಳಬೇಕು. ಅದು ಅಲ್ಲದೇ ಆ ದುಡ್ಡನ್ನು ನೀವು ಧಾನ ಮಾಡಿದ್ರಿ!?
ಹೌದು…ಈಗ ಅದೇ ಒಂಥರ ನನಗೆ ಹಿಂಸೆ ಆಗಿದೆ. ದುಡ್ಡು ಇನ್ನು ಬಂದಿಲ್ಲ. ಬರುತ್ತೆ. ಇದೇ ಎಪ್ರಿಲ್‍ನಲ್ಲಿ ಒಂದು ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಅದನ್ನು ಹಸ್ತಾಂತರಿಸುತ್ತೇನೆ. ಈ ಹಿಂದೆ ರೈತರಿಗೆ ಸೈನಿಕರಿಗೆ ಹೋಗಬೇಕೆಂದು ಹೇಳಿದ್ದೆ ಆದರೆ ಅದು ಹೆಗೆ ಹೋಗುತ್ತೆ, ಹೇಗೆ ಯೂಸ್ ಆಗುತ್ತೆ ಇಯ್ಯಾದಿಗಳೂ ಕೂಡ ಮಹತ್ವದ ವಿಚಾರವೇ ಆಗಿದ್ದರಿಂದ ಮಾತನಾಡುವವರೆಲ್ಲ ಸ್ವಲ್ಪ ಕಾದು ನೋಡಿದರೆ ಉತ್ತಮ.

ನಿಮ್ಮ ಯಾವ ಗುಣ ನಿಮ್ಮನ್ನು ಟ್ರೋಪಿ ಹಂತಕ್ಕೆ ತಂತು ಅಂತೀರಾ!?
ನನ್ನ ಗುಣ ತಂದಿಲ್ಲ. ಅಲ್ಲಿರುವ ಅಷ್ಟು ದಿನದಲ್ಲಿ ನನ್ನ ನಡವಳಿಕೆ ಬದಲಾಗದೇ ಇರೋದು ತಂತು. ಒಂದು ಒಂದು ಸಲಾನೂ ಇನ್ನೊಬ್ಬರ ಬಗ್ಗೆ ಹಿಂದುಗಡೆ ಮಾತಾಡಿಲ್ಲ.. ಮೊದಲನೇ ದಿನ ಹೇಗಿದ್ನೋ ಹಾಗೆ ಕೊನೆ ದಿನದವರೆಗೂ ಇದ್ದೆ.

 

Leave a Reply