Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

ಡಾ. ಶ್ರೀ ಶ್ರೀ ರಾಮಚಂದ್ರ ಗುರೂಜಿ

ಆಶೀರ್ವಾದ

ಆಚರಣೆ ಅಧ್ಯಾತ್ಮವಲ್ಲ: ವಿಚಾರವೇ ಅಧ್ಯಾತ್ಮ ಎನ್ನುತ್ತಾರೆ ಗುರೂಜಿ. ಸ್ವ ಸಮ್ಮೋಹಿನಿ, ಪುನರ್ಜನ್ಮ, ಯೋಗ, ಪ್ರಾಣಾಯಾಮ, ಧ್ಯಾನ, ಯೋಗನಿದ್ರೆ ಇಂಥ ನೂರೆಂಟು ವಿಷಯಗಳಲ್ಲಿ ಸ್ವಾಮೀಜಿ ಪರಿಣತರು. ಮಾನಸಿಕ ಶಕ್ತಿಗೆ ಏನನ್ನು ಬೇಕಾದರೂ ಸಾಧಿಸುವ ಶಕ್ತಿಯಿದೆ ಎನ್ನುವ ಅವರು ಎಂದೂ ಪವಾಡಗಳನ್ನು ನಂಬಿದವರಲ್ಲ; ಆತ್ಮವಿಶ್ವಾಸವನ್ನು ನಂಬಿದವರು. ಧ್ಯಾನ ಚಿಕಿತ್ಸೆಯ ಮೂಲಕ ಮನೋವೈಕಲ್ಯಗಳನ್ನು ದೂರ ಮಾಡಲು ಯತ್ನಿಸಿದವರು.

ನಗರದಲ್ಲಿ ಸ್ಪಿರಿಚ್ಯುಯಲ್ ಸಲ್ಯೂಷನ್ ಸೆಂಟರ್ ಎಂಬ ಆಧ್ಯಾತ್ಮಿಕ ಕೇಂದ್ರ ತೆರೆದ ಗುರೂಜಿ ‘ಪರ್ಯಾಯ ಚಿಕಿತ್ಸೆ ಮೂಲಕ ಕೇವಲ ಅಂತಃಶಕ್ತಿಯ ಬಲದಿಂದಲೇ ರೋಗಗಳನ್ನು ಗುಣಪಡಿಸುವ ಯತ್ನ ಮಾಡಿದ್ದಾರೆ. ’ಪ್ರೀತಿ- ಸೇವೆ- ಶುಶ್ರೂಷೆ’ ಎಂಬುದು ಅವರ ಆಧ್ಯಾತ್ಮಿಕ ಕೇಂದ್ರದ ಧ್ಯೇಯ ವಾಕ್ಯ.

ಹೊಸತನ, ಸೃಜನಶೀಲತೆ, ಸಕಾರಾತ್ಮಕ ಚಿಂತನೆ, ಸೃಜನಶೀಲತೆ, ಆತ್ಮವಿಶ್ವಾಸಗಳನ್ನು ಮನುಷ್ಯನಲ್ಲಿ ತುಂಬುವ ಮೂಲಕ ಸಂತಸ ನೆಮ್ಮದಿಯನ್ನು ಅನೇಕರ ಬಾಳಲ್ಲಿ ತುಂಬಿದ ಅವರು 16 ರಿಂದ 70 ವರ್ಷಗಳ ವಯೋಮಾನದ ಅನೇಕರಿಗೆ ಧ್ಯಾನ ಚಿಕಿತ್ಸೆ ನೀಡಿದ್ದಾರೆ.

 

ದೇಶ ವಿದೇಶಗಳಲ್ಲಿ ಅವರು ನೀಡಿದ ಪ್ರವಚನಗಳು ದೊಡ್ಡ ಮಟ್ಟದ ಶಿಷ್ಯ ವೃಂದವನ್ನೇ ಸೃಷ್ಟಿಸಿಕೊಟ್ಟಿವೆ. ಅಮೆರಿಕದ ಬರ್ಕಲಿ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ನಗರದ ಯೋಗಾಸಫಿ ಯೋಗ ಸಂಸ್ಥೆ, ಷಿಕಾಗೋ, ಪೆನ್ಸಿಲ್ವೇನಿಯಾ, ಲಾಸ್ ಏಂಜಲಿಸ್, ಟೆಕ್ಸಾಸ್, ವಾಷಿಂಗ್ಟನ್ ಮಾತ್ರವಲ್ಲದೆ ದುಬೈ, ಅಬುದಾಬಿ, ಶ್ರೀಲಂಕಾ, ನೇಪಾಳದಂತಹ ರಾಷ್ಟ್ರಗಳಲ್ಲೂ ಅವರು ಮನೋಶಕ್ತಿ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ.

ತಮ್ಮ ಪೂರ್ವಾಶ್ರಮದ ಬಗ್ಗೆಯೂ ಮನ ಬಿಚ್ಚಿ ಮಾತನಾಡುವ ಸ್ವಾಮೀಜಿ ತಂದೆಯವರಿಂದ ಅಧ್ಯಾತ್ಮದತ್ತ ಆಕರ್ಷಿತರಾದವರು. ಹಿಮಾಲಯಕ್ಕೆ ಹೋದರೂ ಮಂತ್ರ ಸ್ತೋತ್ರಗಳ ಗೋಜಿಗೆ ಹೋಗದೆ ಧ್ಯಾನವನ್ನು ಧ್ಯಾನಿಸಿದವರು.

ವ್ಯಕ್ತಿತ್ವ ವಿಕಸನ ಇವರ ಇನ್ನೊಂದು ಸಂಕಲ್ಪ. ಪ್ರತಿಯೊಬ್ಬನಲ್ಲೂ ಧೀಮಂತ ವ್ಯಕ್ತಿತ್ವ ಇರುತ್ತದೆ. ಆದರೆ ಅದನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕಷ್ಟೆ ಎನ್ನುತ್ತಾರೆ. ಜೈಲಲ್ಲಿರುವ ಕೈದಿಗಳು, ಪೊಲೀಸ್ ಅಧಿಕಾರಿಗಳು, ಸಚಿವಾಲಯ ಸಿಬ್ಬಂದಿ, ಐಟಿ ಬಿಟಿ ಸಂಸ್ಥೆಗಳ ಉದ್ಯೋಗಿಗಳು ಇವರಿಂದ ವ್ಯಕ್ತಿತ್ವ ವಿಕಸನದ ಪಾಠ ಕಲಿತಿದ್ದಾರೆ.

ಷಿಕಾಗೋದಲ್ಲಿ ನಡೆದ ಐದನೇ ಅಕ್ಕ ಸಮ್ಮೇಳನದಲ್ಲಿ ಅಲ್ಲಿನ ಜನರಿಗೆ ನಿಜಧರ್ಮದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಗುರೂಜಿಯವರ ಧ್ಯಾನ ಮತ್ತು ಯೋಗ ಪ್ರಚಾರ ಗಮನಿಸಿ ಬೆಂಗಳೂರಿನ ರಾಷ್ಟ್ರೀಯ ಪರ್ಯಾಯ ಔಷಧ ಸಂಸ್ಥೆ ಅವರಿಗೆ ಸೇವಾರತ್ನ ಬಿರುದು ನೀಡಿದೆ.

ಇವರ ಆಶೀರ್ವಾದದಲ್ಲಿ ಸಿರಿ ಬೆಳಗಿದೆ ಎನ್ನಲು ನಮಗಂತೂ ಹೆಮ್ಮೆಯಿದೆ.

ಶ್ರೀ ಅಂಬರೀಶ್

Siri Soundarya- Ambarishಆಶೀರ್ವಾದ

‘ಅಂಬರೀಶ್  ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಪ್ರಮುಖ ಚಲನಚಿತ್ರ ನಟ , ಮಾಜಿ ಲೋಕಸಭಾ ಸದಸ್ಯರು. (ಅಂಬರೀಶ್ ರವರ ಮೊದಲ ಹೆಸರು ಮಳವಳ್ಳಿ ಹುಚ್ಚೆ ಗೌಡ ಅಮರನಾಥ್. ‘ಇವರು ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ಜನಿಸಿದರು. ತಂದೆ ಹುಚ್ಚೇಗೌಡ, ತಾಯಿ ಪದ್ಮಮ್ಮ. , ಖ್ಯಾತ ಪಿಟೀಲು ವಿದ್ವಾನ್ಟಿ.ಚೌಡಯ್ಯ ಇವರ ಅಜ್ಜ.ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ “ನಾಗರಹಾವು” ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ ರೆಬೆಲ್ ಸ್ಟಾರ್ ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಮೊದಲಾದ ಅನೇಕ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಮಸಣದಹೂವು ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದದ್ದು. ಹೃದಯ ಹಾಡಿತು ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು.

ಜೋಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಪ್ರಖ್ಯಾತ ಪಿಟೀಲುವಾದಕರಾದ ಟಿ. ಚೌಡಯ್ಯನವರ ಮೊಮ್ಮಗನಾದ ಅಂಬರೀಶ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಪ್ರಸ್ತುತ ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿಸುಮಲತಾ. ಪುತ್ರನ ಹೆಸರು ಅಭಿಷೇಕ್ ಗೌಡ. ಇವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. ಅನಂತರ ಕಾಂಗ್ರೆಸ್ಪಕ್ಷ ಸೇರಿದರು. ಮಂಡ್ಯ ಕ್ಷೇತ್ರದಿಂದ ಸ್ಪದಿರ್sಸಿ ಲೋಕಸಭೆಗೆ ಆಯ್ಕೆಯಾದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಬಿsಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (2002). ಅಂಬರೀಶ್ ತಮ್ಮ ಉದಾರ ಸ್ವಭಾವದಿಂದಾಗಿ ದಾನಶೂರ ಕರ್ಣ ಎಂದೇ ಹೆಸರಾಗಿದ್ದಾರೆ. ಸಮಾಜದ ದುರ್ಬಲ ವರ್ಗದವರ ಬಗ್ಗೆ ಇವರಿಗೆ ವಿಶೇಷ ಕಳಕಳಿ. ಇವರ ಆಶೀರ್ವಾದವು ಸಿರಯ ಮೇಲೆ ಪೂರ್ಣ ಪ್ರಮಾಣದಲ್ಲಿದೆ.

ಶ್ರೀಮತಿ ತಾರಾ ವೇಣು.

ಸಾರಥ್ಯ

ತಾರಾ ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ,ಮುನ್ನುಡಿ,ಕಾರ್ಮುಗಿಲು,ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.

ಇದೀಗ ರಾಜಕೀಯ ಹಾಗೂ ಮಹಿಳಾ ಕ್ಷೆತ್ರದಲ್ಲೂ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಿರಿ ಪತ್ರಿಕೆಯ ಸಾರಥ್ಯದ ಜೊತೆಗೆ ಸಕಲ ವಿಧದಲ್ಲೂ ಬೆಂಬಲ, ಸಹಾಯ ಸಹಕಾರ ನೀಡುತ್ತಾ, ಎಲ್ಲರಿಗೂ ಬೆನ್ನೆಲುಭಾಗಿ ನಿಂತಿರುವ ತಾರಾರವರು ಎಲ್ಲರಿಗೂ ಸ್ಫೂರ್ತಿಯ ಚಿಲುಮೆಯೂ ಹೌದು.

ಡಾ.ಸುರೇಶ್ ಚಿಕ್ಕಣ್ಣ

ವ್ಯವಸ್ಥಾಪಕ ನಿರ್ದೇಶಕರು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೋಕಿನ ಹಾಡ್ಲಿ ಗ್ರಾಮದಲ್ಲಿ ಚಿಕ್ಕಣ್ಣ ಮತ್ತು ಲಕ್ಷಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ಸುರೇಶ್ ಚಿಕ್ಕಣ್ಣ ಪ್ರಸ್ತುತ ಬೆಂಗಳೂರಿನ ಪ್ರಸಿದ್ಧ ಉದ್ಯಮಿ.

ಆರಂಭದಲ್ಲಿ ಫೋಟೋಗ್ರಫಿಯನ್ನು ವೃತ್ತಿಯಾಗಿಸಿಕೊಂಡ ಇವರು ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಫೋಟೋಗ್ರಫಿಯಲ್ಲಿ ತಿರುಗದ ದೇಶವಿಲ್ಲ, ತೆಗೆಯದವರ ಫೋಟೋಗಳಿಲ್ಲ. ಕನ್ನಡ ಚಿತ್ರರಂಗದ ಮೇರು ಪ್ರತಿಭೆಗಳಾದ ಅಂಬರೀಶ್ ಹಾಗೂ ತಾರಾರವರ  ಖಾಸಗಿ ಛಾಯಾಗ್ರಾಹಕರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ರಜನಿಕಾಂತ್ , ಅಂಬರೀಶ್, ಚಿರಂಜೀವಿ, ತಾರಾ, ಅರ್ಜುನ್ ಸರ್ಜಾ , ಸೋನಂಕಪೂರ್, ಅಷ್ಟೇ ಅಲ್ಲದೇ ದೇಶದ ಹೆಮ್ಮೆಯ ಪ್ರಧಾನಿ ಮೋದಿಯವರ ಚಿತ್ರಗಳನ್ನು ಸೆರೆಹಿಡಿದ ಹೆಮ್ಮೆ ಬೆಂಗಳೂರಿನಲ್ಲಿ ಸಲ್ಲುವ ಏಕೈಕ ವ್ಯಕ್ತಿಯಿದ್ದರೆ ಅದು ಚಿಕ್ಕಣ್ಣನವರೇ ಎಂದರೆ ಯಾವ ತಪ್ಪಿಲ್ಲ.

ಈಗಾಗಲೇ 2010 ರಲ್ಲಿ ಕರ್ನಾಟಕ ನವಚೇತನ ಸಂಸ್ಥೆಯಿಂದ ಪ್ರತಿಭೋತ್ಸವ ಪ್ರಶಸ್ತಿ.

2012ರಲ್ಲಿ ರಜನಿಕಾಂತ್‍ರವರ ಹೆಸರಿನಲ್ಲಿ ‘ಅತ್ಯುತ್ತಮ ಛಾಯಾಗ್ರಾಹಕ’ ಬಿರುದು.

2012ರಲ್ಲಿ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ 5ನೇ ಬಿ.ಐ.ಎಫ್.ಎಫ್.ಇ.ಎಸ್ ಪ್ರಶಸ್ತಿ.

2013ರಲ್ಲಿ ಕಲಾರಂಗ ಪ್ರಶಸ್ತಿ.

2013ರಲ್ಲಿ ಕಂಸ್ಸ್ಯೂಮ್ಯಾಕ್ಸ್ ವತಿಯಿಂದ ‘ ಬ್ಯುಸಿನೆಸ್ ಮಾಸ್ಟ್ರಿ’ ಎಂಬ ಪ್ರಶಸ್ತಿ.

2014ರಲ್ಲಿ  ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ‘ಸಮಾಜಮುಖಿ ಛಾಯಾಗ್ರಾಹಕ’ ಪ್ರಶಸ್ತಿ.

2014ರಲ್ಲಿ ಧ್ರುವತಾರೆ ಪತ್ರಿಕೆಯಿಂದ ರಾಜ್ ಕುಮಾರ್ ಪ್ರಶಸ್ತಿ.

2014ರಲ್ಲಿ ಅಖಿಲ ಕರ್ನಾಟಕ ಅಂಬರೀಶ್ ಬೆಂಗಳೂರು ಇವರಿಂದ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ.

ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ನೀಡಬೇಕು ಎಂದು ಸದಾ ಹಂಬಲಿಸುವ ಇವರು ಸೃಷ್ಟಿ, ಸಮಾಜ, ಸಿನಿಮಾ ಎಂಬ ಮೂರು ವಿಷಯಗಳನ್ನೊಳಗೊಂಡ “ಸಿರಿ ಸೌಂದರ್ಯ” ಎಂಬ ಕನ್ನಡ ಮಾಸ ಪತ್ರಿಕೆಯನ್ನು ಇದೀಗ ಹೊರತಂದಿದ್ದು, ಅದರ ಮೂಲಕ ರಾಜ್ಯ, ದೇಶ, ಅಷ್ಟೆ ಅಲ್ಲದೇ ವಿದೇಶದಲ್ಲೂ ಕೂಡ ಪತ್ರಿಕೆಯ ಕಂಪನ್ನು, ಕನ್ನಡದ ಇಂಪನ್ನು ಪಸರಿಸಿ ಜನಸೇವೆಯನ್ನು ಮಾಡುತ್ತಿದ್ದಾರೆ.

ಈಶ್ವರ್ ದೈತೋಟ

ಪ್ರಧಾನ ಸಲಹೆಗಾರರು

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಷನ್ ಹಾಗೂ ಅಂತರ್ಜಾಲ ಪತ್ರಿಕೋದ್ಯಮದಲ್ಲಿ  ಮೂರುವರೆಯ ದಶಕಗಳಿಗೂ ಮೀರಿ ಅನುಭವ ಹೊಂದಿ, ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ, ಸಾಂಸ್ಕ್ರತಿಕ  ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೆಜ್‍ಮೆಂಟ್‍ನಲ್ಲಿಯೂ ತಮ್ಮ ಸಾಧನೆಗಳನ್ನು ದಾಖಲಿಸಿರುವ ಪ್ರತಿಭಾವಂತ ಪತ್ರಕರ್ತ ಈಶ್ವರ್ ದೈತೋಟ. ಹೆಮ್ಮೆಯ ವಿಷಯವೆಂದರೆ ನಮ್ಮ ಸಿರಿ ಸೌಂದರ್ಯ ಮಾಸಪತ್ರಿಕೆಯ ಪ್ರಧಾನ ಸಲಹೆಗಾರರು ಆಗಿರುವಂತಹ ಇವರನ್ನು ಕರ್ನಾಟಕ ಸರಕಾರ 2013ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈಶ್ವರ್ ದೈತೋಟರವರು ಈ ಹಿಂದೆ ಮೊದಲ ಸಾಲಿನ ನಾಲ್ಕು ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 1992ರಿಂದ ಏಳೂವರೆ ವರ್ಷಗಳ ಕಾಲ ಉದಯವಾಣಿ ಸಂಪಾದಕರಾದ ಶ್ರೀಯುತರು, ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾಗಿದ್ದರು ಅಲ್ಲದೆ ‘ನೂತನ’ ವಾರಪತ್ರಿಕೆಯ ಸಂಪಾದಕತನದ ಹೊಣೆಯನ್ನೂ ಹೊತ್ತಿದ್ದರು. ಎರಡೂವರೆ ವರ್ಷಗಳ ಕಾಲ ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾಗಿ, 3 ವರ್ಷ ಟೈಮ್ಸ್ ಆಫ್ ಇಂಡಿಯಾದ (ಕನ್ನಡ) ಸಂಪಾದಕರಾಗಿಯೂ ಸೇವೆ ಸಲ್ಲಿಸಿರುವ ಇವರು, ಸದ್ಯ ಸಿರಿಗೆ ಬೇಕು ಬೇಡಗಳ ಸಹಾಯ ಚಾಚುತ್ತಾ, ಲೇಖನಗಳನ್ನು ನೀಡುತ್ತಾ ಹರಸಿ ಹಾರೈಸುತ್ತಾ ಎಲ್ಲರಿಗೂ ಪುಷ್ಠಿಯ ಸೆಲೆಯಾಗಿದ್ದಾರೆ.

ಮಲ್ಲೇಪುರಂ ವೆಂಕಟೇಶ್

ಪ್ರಧಾನ ಸಲಹೆಗಾರರು

ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ 1952 ಜೂನ್ ಐದರಂದು ಬೆಂಗಳೂರು ಗ್ರಾಮಾಂತರ ಹೆಬ್ಬಗೋಡಿಯಲ್ಲಿ ಜನನ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‍ಸೆಕೆಂಡರಿ ಶಾಲೆ. ಮೊದಲ ಸಂಸ್ಕøತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕøತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿಂದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ್ಯಾಂಕಿನೊಡನೆ ಕುವೆಂಪು ಚಿನ್ನದ ಪದಕ, ಸಂಸ್ಕøತ ಎಂ.ಎ., ಉನ್ನತ ಶ್ರೇಣಿಯೊಂದಿಗೆ ತೇರ್ಗಡೆ. ಕನಕಪುರದಲ್ಲಿ ಕನ್ನಡ ಶಿಕ್ಷಕರಾಗಿ ವೃತ್ತಿಜೀವನ ಪ್ರಾರಂಭ. ಬೆಂಗಳೂರಿನ ಮಹಾನಗರ ಪಾಲಿಕೆಯ ಪ್ರೌಢಶಾಲೆಯಲ್ಲಿ ಕನ್ನಡ ಪಂಡಿತ. 1992ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರವೇಶ. ಅಲ್ಲಿ ಪ್ರವಾಚಕ, ಅಧ್ಯಯನಾಂಗದ ನಿರ್ದೇಶಕ 1998ರಲ್ಲಿ ಕುಲಸಚಿವ. 2001ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ. 2004ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ಡೀನ್ ಮತ್ತು ಪ್ರಸಾರಾಂಗದ ನಿರ್ದೇಶಕ, 2008ರಲ್ಲಿ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಯಾಗಿ ನೇಮಕ. 2010 ಮೇ 26ರಂದು ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ. 2015ರಿಂದ ಪಾಲಿ ಸಂಸ್ಥೆಯ ಗೌರವ ನಿರ್ದೇಶಕ. ಅರುವತ್ತಕ್ಕೂ ಹೆಚ್ಚು ಸಾಹಿತ್ಯ, ಸಂಸ್ಕøತಿ ಮತ್ತು ಭಾಷೆಗೆ ಸಂಬಂಧಿಸಿದಂತೆ ಪುಸ್ತಕಗಳ ಪ್ರಕಟಣೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2008ರಲ್ಲಿ ಗೌರವ ಪ್ರಶಸ್ತಿ ಹಾಗೂ 2009ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ. 2012ರಲ್ಲಿ ಸಿದ್ಧಗಂಗಾ ಮಠದಿಂದ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ. ಹಲವಾರು ಸಂಘಸಂಸ್ಥೆಗಳಿಂದ ಪುರಸ್ಕಾರಗಳ ಮನ್ನಣೆ.

ಎಸ್.ಕೆ ಅನಂತ

ಪ್ರಧಾನ ಸಲಹೆಗಾರರು

ಸಿನಿಮಾ ಕ್ಷೇತ್ರದಲ್ಲಿ ಇವರ ಹೆಸರು ಕೇಳದವರೆ ಇಲ್ಲ. ಸಿನಿಮಾ ಸಂಬಂಧಿಸಿದ ಯಾವ ಕಾರ್ಯಕ್ರಮ ಜರೂರಾದರೂ ಅಲ್ಲಿ ಅನಂತು ಇರಲೇಬೇಕು. ಡಾ. ರಾಜ್ ಕುಮಾರ್ ಕಾಲದಿಂದಲೂ ಎಲ್ಲಾ ನಟ ನಟಿಯರನ್ನು ಸಂದರ್ಶಿಸಬೇಕೆಂದರೆ ಇವರನ್ನು ಒಮ್ಮೆ ಭೇಟಿ ಮಾಡಿದರೆ ಸಾಕು.ನಿಮ್ಮ ಕೆಲಸ ಸುಲಭವಾಗಿಬಿಡುತ್ತದೆ. ಎಲ್ಲರೂ ಇವರಿಗೆ ಚಿರಪರಿಚಿತ. ಸದ್ಯ ಸಿರಿಯ ಪ್ರಧಾನ ಸಲಹೆಗಾರರಲ್ಲಿ ಒಬ್ಬರಾಗಿರುವ ಎಸ್.ಕೆ ಅನಂತು ಸಿನಿಮಾ ವಿಭಾಗದಲ್ಲಿ ಸಿರಿಗೆ ಸಕಲ ರೀತಿಯಲ್ಲೂ ಸಹಾಯ ಹಸ್ತ, ಸಲಹೆ ಸೂಚನೆಗಳನ್ನು ನೀಡುತ್ತಾ ಮುಂದೆ ನಿಲ್ಲುತ್ತಿರುವುದು ಹೆಮ್ಮೆಯ ವಿಚಾರ.

ಪದ್ಮ ಶ್ರೀನಿವಾಸ್

ಗೌರವ ಸಂಪಾದಕರು

ಮಹಿಳೆ ರಾಜಕೀಯಕ್ಕೆ ಬರಬಾರದು. ಆದರೆ ಸಮಾಜ ಸೇವೆಗೋಸ್ಕರ ಅವಳು ರಾಜಕೀಯಕ್ಕೆ ಧುಮುಕಬೇಕು ಎನ್ನುವ ಪದ್ಮಾ ಶ್ರೀನಿವಾಸ್ ಮೊದಲ ಮಹಿಳಾ ಡೆವಲೆಪ್‍ಮೆಂಟ್ ಚೇರ್‍ಮನ್. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದು ಎಂ.ಎ ಪದವಿಯನ್ನು ಪಡೆದು 1983 ರಿಂದ 1993 ರವರೆಗೆ ಬೆಂಗಳೂರು ಸಿಟಿ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸಮಾಜದ ಬಗ್ಗೆ ಕಾಳಜಿ ಹೆಂಗಸರು ಎಲ್ಲಾ ರಂಗದಲ್ಲಿ ಮುಂದೆ ಬರುವುದನ್ನು ತಮ್ಮದೆ ಮಾತಿನಲ್ಲಿ ಒತ್ತಿ ಹೇಳುವ ಇವರು ಫಿಲ್ಮ್ ಚೇಂಬರ್ ಸೇರಿದಂತೆ ಸೆನ್ಸಾರ್ ಬೋರ್ಡ್‍ನ ಸದಸ್ಯರು ಆಗಿದ್ದರು. ಸಾಮಾನ್ಯವಾಗಿ ಎಲ್ಲಾ ರಂಗದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ಟಿ.ಎನ್ ಸೀತಾರಾಮರ ಎಲ್ಲಾ ಧಾರವಾಹಿಗಳಲ್ಲೂ ನಟಿಸಿದ ಹೆಗ್ಗಳಿಕೆ ಇವರದ್ದು. ಸಿನಿಮಾ ರಂಗದಲ್ಲಿ ಬಹುಮಟ್ಟಿನ ಪರಿಚಯವಿದ್ದು ಹಲವಾರು ಕಡೆ ಸ್ವ-ಆಸಕ್ತಿಯಿಂದ ಕೌನ್ಸಿಲಿಂಗ್ ಏರ್ಪಡಿಸಿ ಜನಜಾಗೃತಿಯ ಜೊತೆಗೆ ಉತ್ತಮ ಸಮಾಜದ ಒಳಿತಿಗಾಗಿ ತಮ್ನನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ‘ಸಿರಿ ಸೌಂದರ್ಯ’ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಮತಿ ಲಲಿತಾ ನಾರಾಯಣ್

ಸಂಪಾದಕರು

ಕಳೆದ 20 ವರ್ಷಗಳಿಂದ  ಜ್ಯೋತಿಷ್ಯ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಲಲಿತಾ ನಾರಾಯಣ ಸ್ವಾಮಿಯವರು ಸಿರಿಯ ಪ್ರಧಾನ ಸಂಪಾದಕರಾಗಿ ಪ್ರಾರಂಭದಿಂದಲೂ ಸೇವೆ ಸಲ್ಲಿಸುತ್ತಾ  ಬಂದಿದ್ದಾರೆ. 2000ಕ್ಕೂ ಅಧಿಕವಾಗಿ ಮುದ್ರಾ ಚಿಕಿತ್ಸೆಯಲ್ಲಿ ಪರಿಣತರಾಗಿರುವ ಇವರನ್ನು ‘ಆರ್ಯಭಟ’, ‘ರಾಘವೇಂದ್ರ ಸಧ್ಭಾವನ ಪ್ರಶಸ್ತಿ’ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಸದ್ಯ ‘ಜೋಸ್ನಾ ಚಾರಿಟೇಬಲ್ ಟ್ರಸ್ಟ್’ನ  ಸಂಸ್ಥಾಪಕರಾಗಿರುವ ಇವರು ಕನ್ನಡ, ತೆಲುಗು, ತಮಿಳು ಸೇರಿದಂತೆ ಎಲ್ಲಾ ಟಿ.ವಿ ವಾಹಿನಿಗಳಲ್ಲಿ ಪ್ರಥಮವಾಗಿ ಮಹಿಳಾ  ಜ್ಯೋತಿಷ್ಯರಾಗಿ ಹೊರಹೊಮ್ಮಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಸಂಸ್ಕøತ ಪಂಡಿತರಾಗಿರುವ ಸ್ವಾಮಿಯವರು ಬಿ.ಕಾಂ, ಎಲ್.ಎಲ್.ಬಿ, ಕನ್ನಡ ಎಮ್.ಎ, ಹಿಂದಿ ಎಮ್.ಎ, ಜ್ಯೋತಿಷ್ಯ ಇತ್ಯಾದಿಗಳಲ್ಲಿ ಪೂರ್ಣ ಪಾಂಡಿತ್ಯ ಹೊಂದಿ ವ್ಯಾಕರಣ ಮಾಲೆ, ವ್ಯಾಕರಣ ಕುಸುಮ ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅಂತೆಯೇ ಇಂದು ಸಿರಿಯ ಪ್ರಭೆ ಬೀರಲು ಮುಖ್ಯ ಕಾರಣ ಇವರಾಗಿದ್ದಾರೆ ಎಂದರೆ ತಪ್ಪಿಲ್ಲ…

ಸಂದೀಪ್ ಶೆಟ್ಟಿ ಹೆಗ್ಗದ್ದೆ

ಉಪಸಂಪಾದಕರು

ಭಾವನೆಗಳಲೇ ಬಣ್ಣ ಕಾಣಿಸಿ, ಅಕ್ಷರವ ಪೋಣಿಸಿ, ಬಣ್ಣ ಕಟ್ಟುವ ಪದಗಳ ನಡುವೇ ಓದುಗನನ್ನು ಸೆಳೆಯುವ ಹುಡುಗ ಸಂದೀಪ್ ಶೆಟ್ಟಿ ಹೆಗ್ಗದ್ದೆ, ಕಳೆದ ಒಂದೂವರೆ ವರ್ಷಕ್ಕೂ ಅಧಿಕ ದಿನಗಳಿಂದ ಸಿರಿಯಲ್ಲಿ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿ.ಕಾಂ, ಎಂ,ಕಾಂ ಪದವಿ ಬಗಲಲ್ಲಿಟ್ಟುಕೊಂಡು ಹವ್ಯಾಸವಾಗಿ ಆರಂಭಿಸಿದ ಬರವಣಿಗೆಯೇ ಇಂದು ಇವರನ್ನು ಪತ್ರಿಕಾರಂಗಕ್ಕೆ ನೂಕಿದ್ದು, ಸದ್ಯ ಹೊಸ ಮಾದರಿ, ಹೊಸ ¨ಬದಲಾವಣೆಯ ವಿಶೇಷತೆಯಿಂದ ಪತ್ರಿಕಾರಂಗದಲ್ಲಿ ಹೊಸ ಚಾಪನ್ನು ಮೂಡಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರಾದ ಇವರು ಈಗಾಗಲೇ ‘ಯುವಕವಿ ಪ್ರಶಸ್ತಿ’, ‘ಗುರುಪುರಸ್ಕಾರ ಅವಾರ್ಡ್’ ಸೇರಿದಂತೆ ‘ಛಾಯಾಕನ್ನಡಿಗ ಬಿರುದು’ನ್ನು ಹೊಂದಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ‘ಮಡಕೆ ಮಾರುವ ಹುಡುಗ’ ಎನ್ನುವ ಕವನ ಸಂಕಲನವನ್ನು ಲೋಕಾರ್ಪಿಸಿದ್ದಾರೆ. ಅಲ್ಲದೇ ಸಂಗೀತ ಕ್ಷೇತ್ರದಲ್ಲೂ ಅಭಿರುಚಿಯಿರುವ ಇವರು ಸಿರಿ ಪತ್ರಿಕೆಯ ಪೂರ್ಣ ಜವಾಬ್ದಾರಿಯ ಜೊತೆಗೆ  ಈ ವೆಬ್ ಸೈಟ್ ಹೊಣೆಗಾರಿಕೆಯನ್ನು ಹೊಂದಿದ್ದು, ಸಿರಿಯ ಸಿರಿವಂತ ಹುಡುಗ ಎಂದರೆ ತಪ್ಪಿಲ್ಲ.

ರುಕ್ಮಿಣಿ ಸುರೇಶ್

ಮೇಲ್ವಿಚಾರಕರು

ಇವರೊಂಥರ ಎಲೆಮರೆಯ ಕಾಯಿಯಂತೆ. ಎಲ್ಲಾ ನಲಿವಲ್ಲೂ ಇವರ ಪಾಲು ಸಿರಿಗಿದೆ. ಎಲ್ಲಿಯೂ ಮುಂದೆ ನಿಂತು ಪ್ರಭೆ ಬೀರುವ ಆಸೆ ತೋರುವುದಿಲ್ಲ ಆದರೆ ಹಿಂದೆ ನಿಂತು ಬಲವಾಗುತ್ತಾರೆ. ಪತ್ರಿಕೆಯ ಪೂರ್ಣ ಹೊಣೆ, ಕೊನೆಯ ಹಂತದ ಅಕ್ಷರ ಜೋಡಣೆಯ ಸರಿ ತಪ್ಪಿನ ಮಣೆ ಎಲ್ಲವೂ ಇವರಿಗೆ ಸಲ್ಲುತ್ತದೆ. ಸದಾ ಮೌನವಾಗಿರುತ್ತಾರೆ. ಬೇಕೆಂದಾಗೆಲ್ಲಾ ಬಂದು ಸಹಾಯ ನೀಡುತ್ತಾರೆ.

ಹುಟ್ಟಿ ಬೆಳೆದಿದ್ದು ಬೆಂಗಳೂರಾದರೂ ಯಾವ ಗತ್ತು ಗಾಂಬೀರ್ಯವಿಲ್ಲದೇ ಎಲ್ಲರನ್ನು ಪ್ರೀತಿಯಿಂದ ಕಾಣುವ ತಾಯಿ ಹೃದಯ ಇವರದು. ಪತ್ರಿಕೆಯ ಬಗ್ಗೆ ಅನೇಕ ಕನಸು ಮನಸ್ಸಲ್ಲಿದೆ, ಅದನ್ನು ಪೂರೈಸಲು ಮೇಲ್ವಿಚಾರಣೆಯ ಸಂಪೂರ್ಣ ಸಹಾಯ ಇವರದಾಗಿದೆ.

ಅಭಿನಯ್ ಶೆಟ್ಟಿ

ವಿನ್ಯಾಸ ಮತ್ತು ಹೊಣೆಗಾರಿಕೆ

ಕಳೆದ 5 ವರ್ಷದಿಂದ ಗ್ರಾಫಿಕ್ ಡಿಸೈನಿಂಗ್‍ನಲ್ಲಿ ಸತತವಾಗಿ ತಲ್ಲಿರಾಗಿರುವ ಅಭಿನಯ್ ಶೆಟ್ಟಿ ಮೂಲತಃ ಕುಂದಾಪುರದವರು. ಮೊದಮೊದಲು ಖಾಸಗಿ ಕಂಪೆನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಮೂರು ವರ್ಷಗಳ ಕಾಲ ದುಡಿದು ತದನಂತರ ಸಿರಿ ಮಾಸಪತ್ರಿಕೆಯಲ್ಲಿ ಮುಖ್ಯ  ವಿನ್ಯಾಸಗಾರನಾಗಿ ಮತ್ತು ಹೊಣೆಗಾರಿಕೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸಿರಿಯ ಸರ್ವತೋಮುಖ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಬಾಲ್ಯದಿಂದಲೇ ಕಲೆಯಲ್ಲಿ ಆಸಕ್ತರಾಗಿದ್ದ ಇವರು ಇಂದು ಮಾಡೆಲಿಂಗ್‍ನತ್ತವು ಆಸಕ್ತಿ ಹೊಂದಿದ್ದಾರೆ. ಶಿಕ್ಷಣದಲ್ಲಿ ಬಿ.ಎ ಪದವೀಧರರಾಗಿರುವ ಅಭಿನಯ್ ಗ್ರಾಫಿಕ್ ಡಿಸೈನಿಂಗ್‍ನಲ್ಲಿ ಮಾಂತ್ರಿಕರು. ತಮ್ಮ ಕ್ರಿಯಾಶೀಲತೆಯ ಮೂಲಕ ಸಿರಿಯ ಪ್ರತೀ ಪುಟಪುಟಗಳಲ್ಲಿಯೂ ತಮ್ಮ ಸೃಜನಶೀಲತೆಯಿಂದ ಓದುಗನನ್ನು ತಮ್ಮತ್ತ ಸೆಳೆಯುವಂತಹ ಪ್ರತಿಭಾವಂತ.

ಚಂದ್ರು ಎಂ ಹುಣಸೂರು

ಸಹ ಸಂಪಾದಕ
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಂತರ ಶಿಕ್ಷಣದ ಮೂಲಕ ಅಂತಿಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿರುವ ಚಂದ್ರು .ಎಂ ಹುಣಸೂರಿನವರು. ಕೆಲತಿಂಗಳುಗಳ ಕಾಲ ಶಿಕ್ಷಕನಾಗಿ ಮಕ್ಕಳೊಡನೆ ಕಾಲಕಳೆದು ತದನಂತರ ಇದೀಗ ಕಳೆದ 8 ತಿಂಗಳುಗಳಿಂದ ಸಿರಿ ಮಾಸಪತ್ರಿಕೆಯಲ್ಲಿ ಸಹ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಕುವೆಂಪುರವರ “ಕಾನೂರು ಹೆಗ್ಗಡಿತಿ” ಮತ್ತು ಇನ್ನಿತರ ಪುಸ್ತಕಗಳು ಸಾಹಿತ್ಯ ಸೃಷ್ಟಿಗೆ ಪ್ರೇರಣೆ. ಪ್ರಾಥಮಿಕ ತರಗತಿಯಿಂದ ಪದವಿ ಶಿಕ್ಷಣದವರೆಗೂ ದೊರಕಿದ ಕನ್ನಡದ ಸುಪ್ರಸಿದ್ಧರ ಗಧ್ಯ ಹಾಗು ಪಧ್ಯ ಉಂಟುಮಾಡಿದ ರಸಸ್ವಾದನೆ ಸಾಹಿತ್ಯ ಪ್ರೀತಿಗೆ ಮುಖ್ಯ ಕಾರಣ. ಅಂತೆಯೇ ಸಾಹಿತ್ಯ ಗುರುಗಳನ್ನೂ ಕೈಬಿಡುವಂತಿಲ್ಲ, ಚಟಗಳೇನೂ ಇಲ್ಲ ಎಂದು ಹುಂಬತನದಿಂದ ಭೀಗುವವನು ದಿಟವಾಗಿಯೂ ಸಾಹಿತ್ಯ ಪ್ರೇಮಿ. ಓದು, ಬರಹ ಬದುಕಾಗಬಹುದು