Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Siri Exclusive > ರಾಮ ದೇವರ ವಿಶೇಷ ಬರವಣಿಗೆ – ದಿವ್ಯ ಕಥೆ…

ರಾಮ ದೇವರ ವಿಶೇಷ ಬರವಣಿಗೆ – ದಿವ್ಯ ಕಥೆ…

-ಶ್ರೀಮತಿ ಲಲಿತಾ ನಾರಾಯಣ

  SIRI_RAMA GOd  ಚೈತ್ರ ಶುದ್ಧ ನವಮಿಯು ಶ್ರೀ ರಾಮನ ಜನ್ಮದಿನ ಈ ದಿನವನ್ನು ಶ್ರೀ ರಾಮನವಮಿ ಎಂದು ಕರೆಯುತ್ತೇವೆ. ಈ ಸಂವತ್ಸರದಲ್ಲಿ ಅಂದರೆ ದುರ್ಮುಖಿ ನಾಮ ಸಂವತ್ಸರದಲ್ಲಿ ಆಂಗ್ಲ ಕ್ಯಾಲೆಂಡರ್ ಪ್ರಕಾರ ತಾ|| 15/04/2016 ರಂದು ಈ ಹಬ್ಬ ಉದ್ಭವಿಸಿದೆ. ಅಂದು ಎಲ್ಲೆಡಯು ಭಜನೆ, ಪೂಜೆ, ರಥೋತ್ಸವಗಳು ನಡೆಯುತ್ತವೆ. ಈ ದಿನಗಳನ್ನು ವಸಂತ ನವರಾತ್ರಿಗಳು ಎಂದು ಕರೆಯುತ್ತಾರೆ. ಯುಗಾದಿಯಿಂದ ಹಿಡಿದು ಒಂಭತ್ತು ದಿನಗಳ ವರೆಗೂ ಶ್ರೀರಾಮನವಮಿ ವ್ರತ ಆಚರಿಸುತ್ತಾರೆ. ಕೆಲವರು ತಿಂಗಳು ಗಟ್ಟಲೆ ಸಂಗೀತ, ಹರಿಕಥೆ, ಉಪನ್ಯಾಸ, ಮುಂತಾದ ಸಮಾರಂಭಗಳನ್ನು ಏರ್ಪಡಿಸಿಸುತ್ತಾರೆ.

ಭಾರತದಲ್ಲಿ ಎಲ್ಲೆಡೆಯೂ ರಾಮಾಯಣದ ದಿವ್ಯಪಾತ್ರಗಳು ಪರಿಚಯವನ್ನು ಸಾಹಿತ್ಯ, ಶಿಲ್ಪ, ಸಂಗೀತ, ಚಿತ್ರಗಳಲ್ಲಿ ನಾವು ಕಾಣುತ್ತೇವೆ. ಮನೆಮನೆಗಳಲ್ಲಿಯೂ ರಾಮಾಯಣಕ್ಕೆ ಸಂಬಂಧಿಸಿದ ಚಿತ್ರಗಳನ್ನು ಹಾಕಿ ಪೂಜಿಸುತ್ತೇವೆ. ಶ್ರೀ ರಾಮನ ಅಥವಾ ರಾಮ ಭಕ್ತನ ಗುಡಿಯಿಲ್ಲದ ಊರು ನಾಡಿನಲ್ಲಿಲ್ಲ. ‘ತಿಣಕಿದನು ಫಣಿರಾಯ ಕವಿಗಳ ಭಾರದಲಿ’ ಎಂಬ ಮಹಾ ಕವಿ ವಾಣಿಯಂತೆ ಫಣಿರಾಯ ತಿಣುಕುವಷ್ಟು ರಾಮಾಯಣ ಗ್ರಂಥಗಳು ರಚನೆಯಾಗಿವೆ. ಇದು ಶ್ರೀ ರಾಮನ ಬಗ್ಗೆ ಇರುವ ನಮ್ಮ ನಮ್ರತೆಯನ್ನು ಭಕ್ತಿ ಗೌರವಗಳನ್ನು ಸೂಚಿಸುತ್ತದೆ.

ಶ್ರೀ ರಾಮ-ಸೀತಾದೇವಿಯವರ ದಿವ್ಯ ಕಥೆ ರಾಮಾಯಣ. ಋಷಿ ವಾಲ್ಮೀಕಿಯ ಕವಿ ಹೃದಯದಿಂದ ಅವತರಿಸಿದ ರಸಗಂಗೆಯದು. ಸಹಸ್ರಾರು ವರ್ಷಗಳಿಂದ ಇದು ಭಾರತೀಯರಿಗೆ ಇಡೀ ವಿಶ್ವಕ್ಕೆ ಧರ್ಮದ ಜ್ಯೋತಿಯಾಗಿ ಸನಾತನ ಧರ್ಮದ ಅಕ್ಷಯ ನಿಧಿಯಾಗಿ ಸುಸಂಸ್ಕøತಿಯ ಅನಘ್ರ್ಯ ರತ್ನವಾಗಿದೆ. ವಿಶ್ವದ ಮಹಾ ಕಾವ್ಯಗಳಲ್ಲಿ ಶ್ರೇಷ್ಠವೆನಿಸಿದೆ. ಭರತೀಯರಿಗಂತೂ ಇದು ಪರಮ ಪೂಜ್ಯಗ್ರಂಥ. ಭೂಮಿಯ ಮೇಲೆ ಪರ್ವತಗಳು, ನದಿಗಳು, ಎಲ್ಲಿಯವರೆಗೆ ಸ್ಥಿರವಾಗಿರುವುದೋ ಅಲ್ಲಿಯವರೆಗೆ ರಾಮಾಯಣ ಸ್ಥಿರವಾಗಿರುತ್ತದೆ. ಎಂದು ಬ್ರಹ್ಮನೇ ಈ ಗ್ರಂಥದಲ್ಲಿ ಹೇಳಿದ್ದಾನೆ. ರಾಮಾಯಣವು ವಿಶ್ವದ ನಾನಾ ಭಾಷೆಗಳಿಗೆ ಪರಿವರ್ತಿತವಾಗಿದೆ.

ರಾಮಾಯಣದಲ್ಲಿ ಅಸತ್ಯದ ಇದಿರಾಗಿ ಸತ್ಯದ ಹೋರಾಟವನ್ನು ದಾನವ ಗುಣದ ಎದುರಾಗಿ ದೈವಿಗುಣದ ಹೋರಾಟವನ್ನು ಕಾಣುತ್ತೇವೆ. ರಾಮ ಲಕ್ಷ್ಮಣರು ಮಾತ್ರವಲ್ಲ, ಕಪಿಗಳು, ಕರಡಿಗಳು, ಮೃಗ ಪಕ್ಷಿಗಳು, ಅಳಿಲುಗಳು, ಸಾಹಸ ತ್ಯಾಗ ಧರ್ಮಾಭ್ಯುದಯಕ್ಕಾಗಿ ಹೋರಾಡಿರುವುದನ್ನು ಕಾಣುತ್ತೇವೆ.
ರಾಮಾಯಣದ ಎಲ್ಲ ಪಾತ್ರಗಳ ಪರಿಚಯವನ್ನಿಲ್ಲಿ ಮಾಡಿಕೊಡುವುದು ಸಾಧ್ಯವಿಲ್ಲ. ಸೂಕ್ಷ್ಮವಾಗಿ ಹೇಳುವುದಾದರೆ ಭೋಗವೇ ಪ್ರಧಾನವೆಂಬ ಅಸುರೀ ಪ್ರವೃತ್ತಿಯ ದಮನವೇ ರಾಮಾಯಣವಾಗಿದೆ. ಭೋಗಾಸಕ್ತಿಯ ಅಸುರೀ ಪ್ರವೃತ್ತಿಯೇ ರಾವಣ. ಇದು ಹತ್ತು ದಿಕ್ಕಿನಲ್ಲೊಯೂ ಚೆಲ್ಲವರಿದು ಅವನು ದಶಕಂಠನಾದನು. ಇದನ್ನು ದಮನ ವೇದೋಪನಿಷತ್ತುಗಳು ಅರಸಿ ಅರಸಿ ಕಾಣದ ಷಡ್ದರ್ಶನಗಳು ಶ್ರಮಿಸಿ ಶ್ರಮಿಸಿ ಸಿಗದ ಪರಭ್ರಹ್ಮ ತತ್ತ್ವ ರಾಮಾಯಣದಲ್ಲಿ ಸಿಗುತ್ತದೆನ್ನುವ ಮಾತಿನಿಂದ ಎಲ್ಲ ಪವಿತ್ರ ಗ್ರಂಥಗಳ ಸಾರ ಸತ್ತ್ವ ಅಲ್ಲಿ ಅಡಗಿದೆಯೆಂಬ ತತ್ತ್ವವನ್ನು ಗ್ರಹಿಸಬೇಕು. ಸೃಷ್ಟಿ ಹೇಗೆ ರಹಸ್ಯಾತ್ಮಕವೋ ಈ ರಾಮತತ್ತ್ವ ರಹಸ್ಯಾತ್ಮಕವಾದವು.

ರಾಮನಾಮವು ಶ್ರೇಷ್ಠವಾದುದು. ಇದು ಕೇವಲ ಬಾಯಿ ಮಾತಲ್ಲ. ಹಾಡುಗಾರಿಕೆಯಲ್ಲಿ ಪದ್ಯವಲ್ಲ. ರಾಮನಾಮಾಮೃತ ಪಾನವನ್ನು ಬಯಸುವವನು ತ್ರಕರಣ ಶುದ್ಧನೂ ಪವಿತ್ರನೂ ನೈಜ ಭಕ್ತನೂ ಆಗಿರಬೇಕು. ದೈಹಿಕ ವ್ಯಾಧಿಗಳಿಗಿಂತಲೂ ಹೆಚ್ಚು. ಕೆಡುಕಿನ ವ್ಯಾಧಿಗಳಾದ ಮೋಹ ದ್ವೇಷಾದಿಗಳನ್ನು ನಿವಾರಿಸಲು ರಾಮನಾಮವೇ ದಿವ್ಯೌಷದ. ರಾಮ ಮಹಿಮೆಗೆ ಅಂಜಿ ಬಾಳುವುದಿಲಲ್ಲ ಅರಿತು ಬಾಳುವುದು ಮೇಲು. ಗಾಂಧೀಜಿಯವರಿಗೆ ರಾಮನಾಮ, ಅವರ ಜೀವನದ ಉಸಿರಾಗಿದ್ದಿತು. ರಾಮನಿಗೆ ಪ್ರಿಯವೆನಿಸುವ ಸೇವೆಯೇ ಉತ್ತಮ ರಾಮನಾಮ ಧ್ಯಾನವೆಂದು ಅವರು ವಿಶಾಲ ದೃಷ್ಟಿಯಿಂದ ತಿಳಿಸಿದರು. ಆದ್ದರಿಂದ ರಾಮಾಯಣ ಮತ್ತು ರಾಮನಾಮದ ಪಾರಾಯಣ ಭಜನೆಯಿಂದ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬೇಕು. ರಾಮಾಯಣ ಬರಿಯ ಪೂಜಾಗ್ರಂಥವಾಗದೆ ರಾಮನಾಮ ಸ್ಮರಣೆ ಬರಿಯ ತುಟಿ ಮಾತಾಗದೆ ನಮ್ಮ ಹೃತ್ಪೂರ್ವಕವಾದ ಭಕ್ತಿ ಶ್ರದ್ಧೆಯಿಂದ ಬಾಳೈಯ ಬೆಳಕನ್ನು ಪಡೆಯಲು ಸಾಧನವಾಗಿರಬೇಕು.

ಆ ದಿನ ಕೋಸಂಬರಿ ಪಾನಕ ನೀರು ಮಜ್ಜಿಗೆ ಮುಂತಾದವುಗಳನ್ನು ಮಾಡಿ ಜನಗಳಿಗೆ ಹಂಚುತ್ತಾರೆ. ಬೇಸಿಗೆ ಕಾಲವಾದ್ದರಿಂದ ಅಲ್ಲಲ್ಲಿಯೇ ಅರವಟಿಗೆಗಳನ್ನು ಸ್ಥಾಪಿಸಿರುತ್ತಾರೆ. ಏರ್ಪಡಿಸಿರುತ್ತಾರೆ. ಇದು ರಾಮನಿಗೆ ಪ್ರೀತಿ ತರುತ್ತದೆಂಬುದು ಜನರ ನಂಬಿಕೆ. ಇಂತಹ ಭಕ್ತಿ ಗೌರವದ ದಿನಗಳೆಲ್ಲವೂ ಶ್ರೀ ರಾಮನವಮಿಯ ಶುಭದಿನಗಳು. ಎಲ್ಲರೂ ಭಕ್ತಿಯಿಂದ ಶ್ರೀರಾಮ ಕತಾಶ್ರವಣ ಮಾಡಿ ಅವನನ್ನು ಪೂಜಿಸಿ ಆರಾಧಿಸೋಣ, ಕೃತಾರ್ಥರಾಗೋಣ.

Leave a Reply