Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Others > ನಿಮ್ಮ ರಾಶಿ ಭವಿಷ್ಯದಲ್ಲೇನಿದೆ!? ಇಡೀ ತಿಂಗಳ ಭವಿಷ್ಯ ತಿಳಿಬೇಕಾ!?- ಕ್ಲಿಕ್ಕಿಸಿ

ನಿಮ್ಮ ರಾಶಿ ಭವಿಷ್ಯದಲ್ಲೇನಿದೆ!? ಇಡೀ ತಿಂಗಳ ಭವಿಷ್ಯ ತಿಳಿಬೇಕಾ!?- ಕ್ಲಿಕ್ಕಿಸಿ

 ಮೇಷ:- ಮುಂದಾಲೋಚನೆಯಿಂದ ಮುಂಬರುವ ಸಮಸ್ಯೆಗಳೀಗೆದ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಮಾಜ ಕಲ್ಯಾಣ ಕಾರ್ಯಕ್ಕಾಗಿ ನಿಮ್ಮ ಸಲಹೆ ನೀಡಬೇಕಾದ ಅನಿವಾರ್ಯತೆ ಉಂಟಾಗಬಹುದು. ಪ್ರಸಿದ್ಧ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸುವ ಅವಕಾಶ ನಿಮ್ಮದಾಗಲಿದೆ. ಸ್ಥಿರಾಸ್ತಿಯ ಖರೀದಿ ಸಾಧ್ಯತೆ ಕಂಡುಬರುತ್ತದೆ. ತುರ್ತು ವಿಷಯಗಳ ಬಗ್ಗೆ ಗಮನ ಹರಿಸುವಿರಿ. ವೃತ್ತಿ ಜೀವನದಲ್ಲಿ ಬದಲಾವಣೆ ಕಂಡುಬರುತ್ತದೆ. ಆದಾಯದಲ್ಲಿ ಹೆಚ್ಚಳದ ನಿರೀಕ್ಷೆ ಇದೆ. ಶಿಕ್ಷಣ ಕ್ಷೇತ್ರದಲ್ಲಿರುವವರ ಸೇವೆಯನ್ನು ಗಮನಿಸಿ ಸಾಮಾಜಿಕ ಗೌರವ ಪ್ರಾಪ್ತವಾಗಲಿದೆ. ಬಂಧುವೊಬ್ಬರ ಮನೆಯಲ್ಲಿ ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಓಂ ಶ್ರೀ ಸುಮುಖಾಯನ ನಮಃ ಪ್ರತಿದಿನಾ 108 ಸಲ ಜಪಿಸಿ.

ವೃಷಭ:- ಬಂಧುಗಳ ಆಗಮನದಿಂದ ಮನೆಯಲ್ಲಿ ಸುಗ್ರಾ ಸ ಭೋಜನ. ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗಕ್ಕಾಗಿ ಶ್ರಮವಹಿಸಿ ಮಾಡಿದ ಉತ್ತಮ ಸಾಧನೆಯ ಸಂತಸವನ್ನು ಮನೆಯವರೊಂದಿಗೆ ಹಂಚಿಕೊಳ್ಳಲಿದ್ದೀರಿ. ವೃತ್ತಿ ನೈಪುಣ್ಯತೆಯಿಂದಾಗಿ ನೌಕರಸ್ಥರಿಗೆ ವಿಶೇಷ ಸ್ಥಾನಮಾನ ದೊರಕಲಿದೆ. ಪದೋನ್ನತಿಯಿಂದಾಗಿ ಆರ್ಥಿಕ ಸುಧಾರಣೆ ಕಾಣಲಿದ್ದೀರಿ. ಚಿನ್ನಾಭರಣ ಖರೀದಿ ಸಾಧ್ಯತೆ ಕಂಡುಬರುತ್ತದೆ. ಸ್ನೇಹಿತರು ಹಾಗೂ ಬಂಧುಗಳೊಡನೆ ಸಂಬಂಧಗಳು ಗಟ್ಟಿಗೊಳ್ಳುವ ಸಾಧ್ಯತೆ. ಮನೆಯ ಜವಬ್ದಾರಿಗಳನ್ನು ನಿರ್ವಹಿಸುವಲ್ಲಿ ಉತ್ತಮ ನಿರೀಕ್ಷೆ ಕಂಡುಬರುತ್ತದೆ. ಅಲಂಕಾರಿಕ ವಸ್ತುಗಳನ್ನು ಖರೀದಿಸಲಿದ್ದೀರಿ. ಓಂ ಶ್ರೀ ಏಕದಂತಾಯನಮಃ ಪ್ರತಿದಿನ 108 ಸಲ ಜಪಿಸಿ.

ಮಿಥುನ:- ವಿವಾಕಾಂಕ್ಷಿಗಳಿಗೆ ಶುಭವಾರ್ತೆ. ಕಂಕಣ ಭಾಗ್ಯ. ಕೆಲಸಕಾರ್ಯಗಳಲ್ಲಿ ಸಂಪೂರ್ಣ ನಿಮ್ಮನ್ನು ನೀವು ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮ ಕೆಲವು ಜವಬ್ದಾರಿಗಳನ್ನು ಬೇರೆಯವರಿಗೆ ವಹಿಸುವುದರಿಂದ ನೆಮ್ಮದಿಯನ್ನು ಕಾಣಲಿದ್ದೀರಿ. ಅನಗತ್ಯ ಮಾತುಕಥೆ ಚರ್ಚೆಗಳಲ್ಲಿ ಭಾಗವಹಿಸದಿರುವುದೇ ಉತ್ತಮ. ನ್ಯಾಯಾಧೀಶರಿಗೆ ಉತ್ತಮ ಪ್ರಶಂಶೆ ಹಾಗೂ ಶ್ಲಾಘನೀಯತೆ. ಪ್ರಯಾಣದ ದೂರದ ಪ್ರವಾಸಗಳನ್ನು ಕೈಗೊಳ್ಳಿದ್ದೀರಿ. ನಿಮ್ಮ ರಾಜಕೀಯ ವಿಷಯದಲ್ಲಿ ಬದಲಾವಣೆ ಕಾಣಲಿದ್ದೀರಿ. ನಿಮ್ಮ ಪ್ರಭಾವದಿಂದಾಗಿ ನೆರೆಹೊರೆಯವರ ಸಮಸ್ಯೆಗಳನ್ನು ಬಗೆಹರಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಆಭರಣ ತಯಾರಕರಿಗೆ, ಗೃಹಲಂಕಾರ ಸಾಮಾಗ್ರಿ ಕರಕುಶಲ ವೃತ್ತಿಗಳಲ್ಲಿ ತೊಡಗಿದವರಿಗೆ ಒಳ್ಳೆಯ ವರಮಾನ ದೊರಕಲಿದೆ. ಓಂ ಶ್ರೀ ಕಪಿಲಾಯನಮಃ ನಮಃ ಪ್ರತಿದಿನ 108 ಸಲ ಜಪಿಸಿ.

ಕಟಕ:- ನೆನೆಗುದಿಗೆ ಬಿದ್ದಿರುವ ನಿರ್ಮಾಣ ಕೆಲಸಗಳು ಪೂರ್ಣಗೊಳ್ಳಲು ಚುರುಕು ಪಡೆದುಕೊಳ್ಳುವವು. ಹೊಸ ಆಸ್ತಿಗಳನ್ನು ಖರೀದಿಸಲಿದ್ದೀರಿ. ಹೊಸ ಯೋಜನೆ ಪ್ರಾರಂಭಿಸುವ ವಿಚಾರದಲ್ಲಿ ಎಚ್ಚರಿಕೆಯ ನಡೆಯ ಅಗತ್ಯ ಕಂಡು ಬರುವುದು. ಕುಟುಂಬ ಸದಸ್ಯರೊಂದಿಗೆ ಸಮಾಲೋಚಿಸಿ ಹೊಸ ನಿವೇಶನ ಖರೀದಿಸುವ ಸಾಧ್ಯತೆ ಕಂಡು ಬರುತ್ತದೆ. ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೆಮ್ಮೆಯ ಜೊತೆಗೆ ಸೂಕ್ಷ್ಮ ಪರಿಶೀಲನೆಯ ಅಗತ್ಯವೂ ಕಂಡುಬರುತ್ತದೆ. ಉತ್ತಮ ಹೊಸ ಬಾಂಧವ್ಯಗಳು ಬೆಳೆದು ಬರಲಿವೆ. ಮಕ್ಕಳ ಜೀವನದಲ್ಲಿ ನೆಮ್ಮದಿ ಕಂಡು ಬರುವುದು. ಆರ್ಥಿಕವಾಗಿ ಮುನ್ನಡೆ. ಕುಟುಂಬದಲ್ಲಿ ಸೌಖ್ಯ. ಅಧಿಕ ಖರ್ಚಿದ್ದರೂ ಆದಾಯ ಸುಗಮ. ಓಂ ಶ್ರೀ ಗಜಕರ್ಣೀಕಾಯ ನಮಃ ಪ್ರತಿದಿನಾ 108 ಸಲ ಜಪಿಸಿ.

ಸಿಂಹ:- ಕಾರ್ಯ ನಿರ್ವಹಣೆಯಲ್ಲಿ ವಿಶ್ಲೇಷಣೆ ಅಗತ್ಯ. ಧೈರ್ಯದಿಂದ ಎಲ್ಲ ಕೆಲಸಗಳಿಗೂ ಕೈಹಾಕಿ. ವರಮಾನ ಕಡಿಮೆಯಾದrashifal-siri magazine.jpg7ರೂ ಮನಸ್ಸಿಗೆ ನೆಮ್ಮದಿ. ಉದ್ಯೋಗದಲ್ಲಿ ಬಡ್ತಿ. ವಾಹನ ಚಾಲಕರು ಎಚ್ಚರಿಕೆಯಿಂದಿರಿ. ಕೈಗೊಂಡ ಕಾರ್ಯದಲ್ಲಿ ವಿಳಂಭ ಉಂಟಾದರೂ ಬುದ್ಧಿವಂತಿಕೆಯ ಕಾರ್ಯಕುಶಲತೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಅಕಸ್ಮಾತ್ ಧನಲಾಭ. ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ. ಕೆಲಸಕ್ಕೆ ತಕ್ಕ ಮಾನ್ಯತೆ ಬಯಸಿದ ಕಾರ್ಯ ಪೂರ್ಣ. ದಿನಸಿ ವ್ಯಾಪಾರಿಗಳಿಗೆ ಅಧಿಕ ಲಾಭ. ಕೋಪದ ಮೇಲೆ ನಿಯಂತ್ರಣವಿರಲಿ. ತಾಳ್ಮೆ ಸಹನೆ ಅತ್ಯವಶ್ಯ. ಕುಟುಂಬದಲ್ಲಿ ಸ್ಥಾನಮಾನಗಳು ಪ್ರಾಪ್ತಿ. ದ್ವಿಚಕ್ರ ವಾಹನ ತಯಾರಕರಿಗೆ ಅಧಿಕ ಲಾಭ. ಓಂ ಶ್ರೀ ಲಂಭೋದರಾಯ ನಮಃ ಪ್ರತಿದಿನಾ 108 ಸಲ ಜಪಿಸಿ.

ಕನ್ಯಾ:- ಕೈಗೆತ್ತಿಕೊಂಡ ಕೆಲಸ ನೆರವೇರಿ ಬಂಧುಗಳೊಂದಿಗೆ ಹಿತ. ಸಂತಾನಾಪೇಕ್ಷಿಗಳಿಗೆ ಸಂತಾನ ಲಾಭ. ಮನೋಭಿಲಾಷೆ ಈಡೇರಿಕೆ ಸಾಲಗಳು ಮರುಪಾವತಿಯಾಗುವವು. ಕೃಷಿ ಬದುಕಿನವರಿಗೆ ಅತ್ಯಂತ ಕಾರ್ಯ ಬಾಹುಳ್ಯ. ಆರಂಭದಲ್ಲಿ ಖರ್ಚು ಅಧಿಕವಾದರೂ ವ್ಯವಹಾರದ ಅಭಿವೃದ್ಧಿಯಿಂದ ಧನಾಗಮನ. ಸಕಾಲಿಕ ಚಿಂತನೆಯಿಂದಾಗಿ ಮಾನಸಿಕ ಶಾಂತಿ. ಮೇಲಾಧಿಕಾರಿಗಳಿಂದ ಪ್ರಶಂಸೆ. ಹಿರಿಯರ ಮಾತುಗಳೀಗೆ ಮನ್ನಣೆ ನೀಡಿ ಅಂದುಕೊಂಡಷ್ಟು ವರಮಾನ ಪ್ರಾಪ್ತಿ. ಬಂಧು ಬಾಂಧವರ ಸಮಾಗಮ ಸಾಧ್ಯತೆ. ಯಾವುದೇ ಕೆಲಸ ಕೈಗೊಂಡರು ಈಡೇರುತ್ತದೆ. ಹೊಸ ಉದ್ಯೋಗ ಕೈಗೊಳ್ಳಲು ಸಕಾಲ. ಕೌಟುಂಬಿಕ ಗೊಂದಲಗಳು ಇದ್ದರೂ ಅಂತಿಮವಾಗಿ ನಿಮ್ಮ ಮಾತಿಗೆ ಜಯ ಸಿಗುತ್ತದೆ. ಓಂ ಶ್ರೀ ವಿಕಟಾಯ ನಮಃ ಪ್ರತಿದಿನಾ 108 ಸಲ ಜಪಿಸಿ.

ತುಲಾ:- ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆಯುಂಟಾಗುತ್ತದೆ. ಗೃಹ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಿದ್ದೀರಿ. ಕೃಷಿ ಕ್ಷೇತ್ರದಲ್ಲಿ ಅನೇಕ ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇದ್ದರೂ ಉತ್ತಮ ಆದಾಯ ಇದೆ. ವಾಹನ ಮಾರಾಟದಲ್ಲಿ ತೊಡಗಿರುವವರಿಗೆ ಉತ್ತಮ ಲಾಭ ದೊರಕಲಿದೆ. ಕಳೆದುಹೋದ ವಸ್ತು ದೊರಕುವ ಸಾಧ್ಯತೆ. ಪ್ರತಿಷ್ಠಿತ ವ್ಯಕ್ತಿಯೊಬ್ಬರ ಸಹಕಾರದಿಂದ ಸರ್ಕಾರದಿಂದ ಆಗಬೇಕಾದ ಕೆಲಸಗಳು ಸುಸೂತ್ರವಾಗಿ ನೆರವೇರುವವು. ಸಹೋದರರಿಂದ ಉತ್ತಮ ಸಹಾಯ ಪಡೆಯಲಿದ್ದೀರಿ. ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸದೊಂದು ಆಶಾಕಿರಣ ಮೂಡಿ ಬರಲಿದೆ. ಸಗಟು ವ್ಯಾಪಾರಗಳಲ್ಲಿ ಗಣನೀಯ ಪ್ರಗತಿ ಕಂಡುಬರಲಿದೆ. ಓಂ ಶ್ರೀ ವಿಘ್ನರಾಜಾಯ ನಮಃ ಪ್ರತಿದಿನ 108 ಸಲ ಜಪಿಸಿ.

ವೃಶ್ಚಿಕ:- ವ್ಯಾಪಾರ ವಹಿವಾಟುಗಳಲ್ಲಿ ಪ್ರಗತಿ ಕಂಡುಬಂದರೂ ಆದಾಯಕ್ಕೆ ಮೀರಿದ ವೆಚ್ಚ ಭರಿಸಬೇಕಾದೀತು. ಕೃಷಿ ಕ್ಷೇತ್ರದಲ್ಲಿ ದುಡಿಯುವವರಿಗೆ ಹಾಗೂ ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶಗಳು ಕಂಡುಬರುವವು. ಉದ್ಯೋಗ ನಿಮಿತ್ತ ದೂರದ ಪ್ರಯಾಣ ಮಾಡಬೇಕಾದೀತು. ಆದಾಯದಲ್ಲಿ ಸ್ವಲ್ಪ ಹೆಚ್ಚಾಗಿ ನೆಮ್ಮದಿ ಮೂಡಿಬರಲಿದೆ. ನೇತ್ರರೋಗತಜ್ಞರಿಗೆ ಅಧಿಕ ಪ್ರಶಂಸೆ ಹಾಗೂ ಶ್ಲಾಘನೀಯತೆ. ಸಾಮಾಜಿಕ ಉನ್ನತೀಕರಣಕ್ಕೆ ಹಿರಿಯರೊಂದಿಗೆ ಚರ್ಚಿಸಲಿದ್ದೀರಿ. ಹೆಚ್ಚಿನ ಪರಿಶ್ರಮದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಉದ್ಯೋಗಸ್ಥ ಮಹಿಳೆಯರಿಗೆ ಕಾರ್ಯ ಕ್ಷೇತ್ರದಲ್ಲಿ ಅಧಿಕ ಪ್ರಶಂಸೆ ಹಾಗೂ ಶ್ಲಾಘನೀಯತೆ. ಓಂ ಶ್ರೀ ಗಣಪತಿಯೇ ನಮಃ ಪ್ರತಿದಿನ 108 ಸಲ ಜಪಿಸಿ.

ಧನುಸ್:– ಪುಸ್ತಕ ಮತ್ತು ಲೇಖನ ಸಾಮಾಗ್ರಿಗಳ ಮಾರಾಟಗಾರರಿಗೆ ಉತ್ತಮ ವ್ಯಾಪಾರದಿಂದಾಗಿ ಆದಾಯದಲ್ಲಿ ಹೆಚ್ಚಳ. ಕುಟುಂಬದಲ್ಲಿ ಸುಖಸಂತೋಷದೊಂದಿಗೆ ಆರ್ಥಿಕ ಅಭಿವೃದ್ಧಿಯನ್ನು ಕಾಣಲಿದ್ದೀರಿ. ಹಿತೈಷಿಗಳೊಂದಿಗೆ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ. ಬೆಳ್ಳಿ ಪದಾರ್ಥಗಳ ವ್ಯಾಪಾರಸ್ಥರಿಗೆ ಅತ್ಯಧಿಕ ಲಾಭ. ದವಸ ಧಾನ್ಯಗಳ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಾಣುವಿರಿ. ಹಿತೈಷಿಗಳ ಸಲಹೆಗಾಗಿ ಚರ್ಚಿಸಲಿದ್ದೀರಿ. ದುಡುಕುತನ ತೋರಿಸದಿರುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಕಾಪಾಡುವಿರಿ. ಹಿರಿಯರ ಆರೋಗ್ಯದತ್ತ ಗಮನ ಹರಿಸಿ. ಪಿತ್ರಾರ್ಜಿತ ಆಸ್ತಿಗಳು ನಿಮ್ಮ ಕೈಸೇರುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಜೀವನದ ಬಹುಮುಖ್ಯವಾದ ಹೊಸ ಯೋಜನೆಗಳನ್ನು ಆರಂಭಿಸಲಿದ್ದೀರಿ. ಓಂ ಶ್ರೀ ಧೂಮ್ರಕೇತವೇ ನಮಃ ಪ್ರತಿದಿನ 108 ಸಲ ಜಪಿಸಿ.

ಮಕರ:- ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣದ ಸಾಧ್ಯತೆ ಕಂಡುಬರುತ್ತದೆ. ಸಾಲದ ವ್ಯಾಪಾರ ಬೇಡ. ಸಾಲ ತರಲು ಬೇಡಿ, ಸಾಲ ಕೊಡಲೂ ಬೇಡಿ. ಹಣಕಾಸಿನ ಸಮಸ್ಯೆಗಳ ಜೊತೆಗೆ ಮನೆಯಲ್ಲಿನ ಸಮಸ್ಯೆಗಳೂ ದೂರವಾಗಲಿವೆ. ಅತಿಯಾಗಿ ಮಾತನ್ನಾಡಬೇಡಿ. ಮನಸ್ಸಿಟ್ಟು ಕೆಲಸ ಮಾಡಿದ್ದಲ್ಲಿ ವಿದೇಶಿ ವ್ಯವಹಾರದಲ್ಲಿ ಹೆಚ್ಚಿನ ಲಾಭ. ನ್ಯಾಯಾಲಯದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ವಿದೇಶಿ ವ್ಯವಹಾರಸ್ಥರೊಂದಿಗಿನ ಸಂಪರ್ಕದಿಂದಾಗಿ ವ್ಯವಹಾರಕ್ಕೊಂದು ಹೊಸ ತಿರುವು. ದೇವತಾನುಗ್ರಹದಿಂದ ಶುಭಕಾರ್ಯಗಳು ಮನದಿಚ್ಚೆಯಂತೆ ನೆರವೇರುವುದರಿಂದ ನೆಮ್ಮದಿಯನ್ನು ಹೊಂದಲಿದ್ದೀರಿ. ಧೈರ್ಯ ಆತ್ಮವಿಶ್ವಾಸ, ಪ್ರಯತ್ನ ಬಲದಿಂದಾಗಿ ಕಾರ್ಯಾನುಕೂಲವಾಗಲಿದೆ. ಓಂ ಶ್ರೀ ಗಣಾದೃಕ್ಷಾಯ ನಮಃ ಪ್ರತಿದಿನಾ 108 ಸಲ ಜಪಿಸಿ.

ಕುಂಭ:– ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗಲಿವೆ. ಅತಿಥಿಗಳ ಆಗಮನದಿಂದ ಸಂತಸ. ಶಾರೀರಿಕ ಆಯಾಸ ತೋರಿಬಂದರೂ ದಿನದ ಅಂತ್ಯದಲ್ಲಿ ಕೆಲಸಗಳಲ್ಲಿ ಪ್ರಗತಿಕಂಡು ಬರಲಿದೆ. ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗಿ ಹಮ್ಮಿಕೊಂಡಿರುವ ಯೋಜನೆಗಳನ್ನು ಪೂರೈಸಲು ಅನುಕೂಲತೆ ಕೂಡಿಬರಲಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ಸರ್ಕಾರಿ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆ ಕಂಡುಬರುತ್ತದೆ. ಮನೆಯವರ ಪ್ರಯಾಣಕ್ಕಾಗಿ ವಿಶೇಷ ವೆಚ್ಚ ಭರಿಸಬೇಕಾದೀತು. ನಿಮ್ಮ ಒಳ್ಳೆಯತನದ ದುರುಪಯೋಗವಾಗದಂತೆ ಎಚ್ಚರಿಕೆವಹಿಸುವುದು ಒಳ್ಳೆಯದು. ಅವಶ್ಯಕತೆಗಿಂತ ಹೆಚ್ಚಿನ ಹಣಕಾಸಿನ ನೆರವು ದೊರೆಯಲಿದೆ. ಓಂ ಶ್ರೀ ಫಾಲಚಂದ್ರಾಯ ನಮಃ ಪ್ರತಿದಿನ 108 ಸಲ ಜಪಿಸಿ.

ಮೀನ:- ಉನ್ನತಾಧಿಕಾರಿಗಳ ಅನುಗ್ರಹದಿಂದಾಗಿ ನೌಕರಿಯಲ್ಲಿ ಅನುಕೂಲತೆಯನ್ನು ಕಂಡುಕೊಳ್ಳುವಿರಿ. ಸಾಮಾಜಿಕ ಸೇವೆಯಲ್ಲಿ ದಿನವಿಡೀ ತೊಡಗಿಕೊಂಡು ಸಂತಸವನ್ನು ಅನುಭವಿಸಲಿದ್ದೀರಿ. ಸ್ವಂತ ಉದ್ಯೋಗಿಗಳಿಗೆ ಅಧಿಕಲಾಭ ಹಾಗೂ ಯಶಸ್ಸು. ವಿದ್ಯಾಭ್ಯಾಸದಲ್ಲಿ ಅಮೋಘ ಸಾಧನೆಯೊಂದನ್ನು ಮಾಡುವ ಅವಕಾಶ ದೊರಕಲಿದೆ. ಪ್ರವಾಸೋಧ್ಯಮ ಸಂಚಾರ ವ್ಯವಸ್ಥೆಗಳಲ್ಲಿ ತೊಡಗಿಕೊಂಡವರಿಗೆ ಉತ್ತಮ ಅವಕಾಶ. ಕಲಾವಿದರು, ಬರಹಗಾರರು, ಸಾಹಿತಿಗಳಿಗೆ ಅಧಿಕ ಪ್ರಶಂಸೆ ಹಾಗೂ ರ್ಶಲಾಘನೀಯತೆ. ಯಂತ್ರೋಪಕರಣಗಳ ವ್ಯಾಪಾರದಲ್ಲಿ ಅಧಿಕ ಲಾಭ. ವಾಹನಗಳ ಹಾಗೂ ಯಂತ್ರಗಳ ಬಿಡಿಭಾಗಗಳ ವ್ಯಾಪಾರದಲ್ಲಿ ಅಧಿಕ ಲಾಭ. ಅರ್ಚಕವರ್ಗದವರಿಗೆ ಅಧಿಕ ಪ್ರಶಂಸೆ ಹಾಗೂ ಶ್ಲಾಘನೀಯತೆ. ಓಂ ಶ್ರೀ ಗಜಾನನಾಯ ನಮಃ ಪ್ರತಿದಿನ 108 ಸಲ ಜಪಿಸಿ.

Leave a Reply