Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ಗುರುತ್ವ … ಇದು ಗುರು ಶಿಷ್ಯರ ಸಂಬಂಧ

ಸಂದೀಪ್ ಶೆಟ್ಟಿ ಹೆಗ್ಗದ್ದೆ: ಪ್ರೀತಿಯ ಮಾತುಗಳಲ್ಲಿ ಸಿಹಿಮುತ್ತು ಎಷ್ಟು ಮುಖ್ಯವೋ? ಹೆಮ್ಮೆಯ ದೇಶಕ್ಕೆ ಪ್ರಭುತ್ವ ಎಷ್ಟು ಮುಖ್ಯವೋ? ಹಾಗೆ ನಲ್ಮೆಯ ಮುಗ್ಧಮನಸಿನ ಮಕ್ಕಳಿಗೆ ಗುರು ಅಥವಾ ಗುರುತ್ವ ಇವೆಲ್ಲಕ್ಕಿಂತ ಮುಖ್ಯ. ಇದೇ ಇಂದಿನ ಜನಾಂಗದ ಕೊರತೆ. ಗುರು ಎಂದರೆ ಭಾರ. ಶಿಷ್ಯನೆಂದರೆ ಹಗುರವೆಂದರ್ಥವಲ್ಲ. ಗುರು ಎಲ್ಲ ರೀತಿಯಲ್ಲೂ ಭಾರ. ತಿಳಿವಿನಲ್ಲಿ, ಅರಿವಿನಲ್ಲಿ, ಆನಂದದಲ್ಲಿ, ವಿಧ್ಯೆಯಲ್ಲಿ, ಬಗೆ ಬಗೆಯ ಜ್ಞಾನದಲ್ಲಿ. ಆದರೆ ಶಿಷ್ಯ ಶೂನ್ಯ. ಇನ್ನೂ ಹೆಚ್ಚಿನ ಮಾತಲ್ಲಿ ಹೇಳಬೇಕೆಂದರೆ ಶಿಷ್ಯನೇನನ್ನೂ ಬೇಡುವುದಿಲ್ಲ. ಗುರು ಏನನ್ನೂ ಭರವಸೆ ನೀಡುವುದಿಲ್ಲ. […]

  Read More

ಸ್ವಾತಂತ್ರ್ಯದ ದಾಹ

ಚಕ್ರವರ್ತಿ ಸೂಲಿಬೆಲೆ: ಭಾರತದ ಸ್ವಾತಂತ್ರ್ಯ ಸಬರಮತಿಯ ಸಂತನ ಸತ್ಯ-ಅಹಿಂಸೆಗಳ, ಶಾಂತಿ-ಸಹನೆಗಳ ಮಾರ್ಗದ ಮೇಲೆ ಸಾಗಿ ಬಂದ ರಥವೆಂದೇ ಅನೇಕ ಭಾವಿಸಿದ್ದಾರೆ, ಇಂದಿಗೂ! ಗಾಂಧಿಜೀಯವರ ಹೋರಾಟದ ಪರಿ, ಜನರನ್ನು ಒಗ್ಗೂಡಿಸಿ ಜೊತೆಗೊಯ್ಯುವ ರೀತಿಗಳೆಲ್ಲ ಬಲು ಅಪರೂಪದ್ದು ಎಂಬುದರಲ್ಲಿ ಅನುಮಾನವಿಲ್ಲ. ಹಾಗೆಂದು ಸ್ವಾತಂತ್ರ್ಯ ಕದನದ ಕ್ರಾಂತಿಕಾರಿ ವಿಭಾಗದ ಒಂದಿಡೀ ಮಗ್ಗುಲನ್ನು ಕಡೆಗಣಿದುವುದೂ ಸಮಂಜಸವಲ್ಲ. ಪೂರ್ವಗ್ರಹಪೀಡಿತ ಇತಿಹಾಸಕಾರರು, ಸಾಹಿತಿಗಳನೇಕರು ಮಾನವೀಯತೆಯ ಪರದೆಯೆಳೆದುಕೊಂಡು ಕ್ರಾಂತಿಕಾರಿಗಳನ್ನು ಹಿಂಸಾವಾದಿಗಳೆಂದು ಬಿಂಬಿಸಿ ಸಮಾಜದಿಂದ ದೂರ ಉಳಿಸಿಬಿಟ್ಟರು. ಹಾಗೆ ನೋಡಿದರೆ ಒಂದಷ್ಟು ವರ್ಷ ಹೋರಾಟರಂಗದಲ್ಲಿ ಬಿರುಗಾಳಿಯನ್ನೆಬ್ಬಿಸೆದ ಗಾಂಧಿಜೀ ಅನಂತರದ […]

  Read More

ಸುಟ್ಟು ಹಾಕಬೇಕಾಗಿರುವುದು ಭಗವದ್ಗೀತೆಯನ್ನಲ್ಲ. ನಿಮ್ಮ ಕುಲಹೀನ ವಿಚಾರ ಸರಣಿಯನ್ನು.

ಸೋ ಕಾಲ್ಡ್ ಬುದ್ಧಿ ಜೀವಿಗಳೇ, ಯಾಕೆ ನೀವು ನಿಮ್ಮ ತಲೆಗೆ ಸ್ವಲ್ಪ ವಿಶ್ರಾಂತಿ ಕೊಟ್ಟು ನಿವೃತ್ತಿ ತೆಗೆದುಕೊಳ್ಳಬಾರದು? ಇದು ನಿಮಗೆ ನನ್ನ ಮೊದಲ ಪ್ರಶ್ನೆ. ಯಾಕೆ ಅಂತಾ ಹೇಳ್ತೆನಿ ಕೇಳಿ. ನಿಮ್ಮಂತಹ ಬಾಯಿಚಪಲ ತೀರಿಸಿಕೊಳ್ಳುವ ವಿಚಾರಶೀಲ ಜೀವಿಗಳಿಂದ ನಾಲ್ಕು ಜನಕ್ಕೆ ಸಹಾನೂ ಆಗಿಲ್ಲ. ದೇಶಕ್ಕಂತೂ ಬೇಕಾಗಿಯೇ ಇಲ್ಲ. ದೇಶಕ್ಕೆ ನಮ್ಮ ಸೋ ಕಾಲ್ಡ್ ಆಲೋಚನೆಗಳಿಂದ ಒಂದು ದೃಷ್ಟಿಕೋನ ಸಿಕ್ಕಿದೆ ಎಂದು ಪುರಾವೆ ತೋರಿಸಿ ನೋಡೊಣ. ಹುಂ ಹೂ… ಖಂಡಿತ ಇಲ್ಲ. ಇವರಿಗೆ ಚರ್ಚೆ ಮಾಡಲು ಧರ್ಮಗಳ ಸಂಘರ್ಷಗಳು, […]

  Read More

ಹಿರಿಯ ನಾಗರಿಕರು-ಶಾಸ್ತ್ರಗಳ ಮಾರ್ಗದರ್ಶನ.

ವನಿತಾ ರಾಮಸ್ವಾಮಿ: ನಮ್ಮ ಪರಂಪರೆಯಲ್ಲಿ ಪ್ರಸಿದ್ಧವಾಗಿರುವ ರಾಮಾಯಣ, ಮಹಾಭಾರತ ಮತ್ತು ಪುರಾಣಗಳಲ್ಲಿ ಕಾಣುವ ಪಾತ್ರಗಳು ನಮ್ಮ ನಿತ್ಯ ಜೀವನದಲ್ಲಿ ಬರುವ ಹಲವು ತತ್ವಗಳು ಸಾಂಕೇತಗಳೇ ಆಗಿವೆ. ಅದಕ್ಕಾಗಿಯೇ ಮನೆಗಳಲ್ಲಿ ಪರ್ವದಿನಗಳಂದು ಕಾವ್ಯವಾಚನ, ವ್ಯಾಖ್ಯಾನ ಮತ್ತು ಅನುಸಂಧಾನಗಳಿಗೆ ಪ್ರಾಶಸ್ಯವಿತ್ತು. ಇಲ್ಲಿ ಸಾತ್ವಿಕ ಬದುಕಿನ ಸುಂದರ ಮಾಧರಿಗಳು ದೊರೆಯುತ್ತವೆ. ಇಂದಿನ ಜೀವನ ಶೈಲಿಯಲ್ಲಿ ದುರ್ಲಾಭವಾಗಿರುವ ಈ ಸಾತ್ವಿಕತೆ ನಮಗೆ ನಿರಾಸೆಯನ್ನು ತರುತ್ತದೆ. ಆದರಿಂದ ಈ ಮಾಧರಿಗಳನ್ನು ಧರ್ಮದ ನಿಯಮಗಳನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಶಿಕ್ಷಣದ ಮೂಲಕ ಮನಸ್ಸಿನಲ್ಲಿ ನೆಲೆಸುವಂತೆ ಮಾಡಬೇಕು. […]

  Read More

ಅಪ್ಪ ಎಂದರೆ….

ತನುಜಾ ಶಿವಕುಮಾರ್: ಈ ಸಂಸಾರ ಬಂಧನದಲ್ಲಿ ಸಿಲುಕಿರುವ ತಂದೆಯ ಪಾತ್ರ ಊಹಿಸಲೂ ಅಸಾಧ್ಯವಾದ ಮಾತು. ಒಂದು ಮನೆಯ “ಯಜಮಾನ” ಎನಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಎಲ್ಲರನ್ನು ಸಮಾನವಾಗಿ ಪ್ರೀತಿಸಿ, ಬೆಳೆಸಿ ಸಾಕುವುದರಲ್ಲೇ ಆ ತಂದೆಯ ಪೂರ್ಣ ವಯಸ್ಸು,ಹುಮ್ಮುಸ್ಸು, ಆಯಸ್ಸು ಮುಗಿದೇ ಹೋಗುತ್ತದೆ. ತನಗೆ ಎಷ್ಟೇ ನೋವಿದ್ದರೂ ಯಾರಲ್ಲೂ ತೋರ್ಟಡಿಸಲಾಗದ ಸನ್ನಿವೇಶ. “ಅಳುವ” ಸ್ವಾತಂತ್ರ್ಯವೂ ಇಲ್ಲದೆ ಬೆಳೆಸಿರುವ ಈ ಸಮಾಜ, ನಿಸ್ವಾರ್ಥ ಸೇವೆಗೆ ಮತ್ತೋದು ಪ್ರತೀಕವೇ ಈ ನಮ್ಮ ನಿಮ್ಮೆಲ್ಲರ “ಅಪ್ಪ” ಅಪ್ಪನಿಗೂ ತಾನು ಎಲ್ಲರಂತೆ ಬಾಳಬೇಕೆಂಬ ಛಲವಿರುತ್ತದೆ,ಸಮಾಜದಲ್ಲಿ […]

  Read More

ಯೋಗಾ ಯೋಗ

ಚಕ್ರವರ್ತಿ ಸೂಲಿಬೆಲೆ: ಆರು ಸಾವಿರ ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿರುವ ಭಾರತದ ಆಸ್ತಿ- ಯೋಗವನ್ನು ಜೂನ್ 21ಕ್ಕೆ ವಿಶ್ವ ಯೋಗ ದಿನವನ್ನಾಗಿ ಆಚರಿಸಲು 177 ರಾಷ್ಟ್ರಗಳು ಸಿದ್ಧವಾಗಿವೆ. ಆ ಪಟ್ಟಿಯಲ್ಲಿ ಯು.ಎಸ್.ಎ, ಕೆನಡಾ, ಚೀನಾ ದೇಶಗಳು ಸೇರ್ಪಡೆಗೊಂಡಿವೆ. ಬನ್ನಿ ನಾವೂ ನಮ್ಮ ಆರೋಗ್ಯದ ಆಸ್ತಿಯನ್ನು ಜಗತ್ತಿಗೇ ಹಂಚೋಣ… ಜಗತ್ತಿನ ಭೂಪಟದಲ್ಲಿ ನಾವು ಭಾರತವನ್ನು ನಂಬುತ್ತೇವೆ ಹೊರತು ಅಮೇರಿಕವನ್ನಲ್ಲ ಎಂದು ಪ್ರಪಂಚದ ವಿವಿಧ ದೇಶಗಳು ಒಕ್ಕೋರಿಲಿನಿಂದ ಘಂಟಾಘೋಷವಾಗಿ ಹೇಳುತ್ತಿವೆ. ಇವತ್ತು ಜಗತ್ತಿನಲ್ಲಿ ನಂಬಿಕೆಗೆ ಅರ್ಹ ರಾಷ್ಟ್ರ ಒಂದಿದೆ ಎಂದರೆ ಅದು […]

  Read More

ಸಿರಿ ಪಾಕ

ಅಂಟಿನ ಉಂಡೆ: ಬೇಕಾಗುವ ಪದಾರ್ಥಗಳು: ಒಣಕೊಬ್ಬರಿ – 250 ಗ್ರಾಂ ಬೆಲ್ಲ – 250 ಗ್ರಾಂ ಖರ್ಜೂರ – 200 ಗ್ರಾಂ ಗೊಡಂಬಿ – 50 ಗ್ರಾಂ ಗಸ್‍ಗಸೆ – 25 ಗ್ರಾಂ ಶುಂಠಿಪುಡಿ – 1/4 ಟೀ ಸ್ಫೂನ್ ಜಾಲಿ ಅಂಟು – 25 ಗ್ರಾಂ ಬಾದಾಮಿ – 50 ಗ್ರಾಂ ಬಿಳಿ ಎಳ್ಳು – 50 ಗ್ರಾಂ ಒಣ ದ್ರಾಕ್ಷಿ – 50 ಗ್ರಾಂ ಏಲಕ್ಕಿ ಪುಡಿ – 1/2 ಗ್ರಾಂ ತುಪ್ಪ – […]

  Read More

ಸ್ಫೂರ್ತಿ ತುಂಬಿದ ಸನ್ಯಾಸಿ!

ಹತ್ತೊಂಭತ್ತನೆಯ ಶತಮಾನದ ಅಂತ್ಯದ ವೇಳೆಗೆ ಭಾರತವನ್ನು ಕುರಿತಂತೆ ಜಾಗತಿಕ ಅಭಿಪ್ರಾಯಗಳು ಶ್ರೇಷ್ಠವಾದುದೇನಾಗಿರಲೆಲ್ಲ. ‘ಸಿರಿವಂತ ಅನಾಗರಿಕ ರಾಷ್ಟ್ರ’ವೆಂದಷ್ಟೇ ಜಗತ್ತು ಭಾರತವನ್ನು ಭಾವಿಸಿತ್ತು. ಭಾರತಕ್ಕೆ ದಾಂಗುಡಿ ಇಟ್ಟು ಮತಾಂತರದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದ ಕ್ರೈಸ್ತ ಪಾದ್ರಿಗಳು ತಮ್ಮ ಖರ್ಚಿಗಾಗಿ ಹಣಗಳಿಸಲು ಈ ರೀತಿ ಸುಳ್ಳು ಪ್ರಚಾರಗಳನ್ನೂ ಮಾಡಿದ್ದರು. ನಾಗರಿಕತೆಯ ಅರಿವೇ ಇಲ್ಲದ ನಾಡಿಗೆ ಜ್ಞಾನದ ಹೊಳೆ ಹರಿಸಲು ಹೊರಟಿದ್ದೇವೆಂದು ಪಶ್ಚಿಮದ ಸಿರಿವಂತರನ್ನು ನಂಬಿಸಿಬಿಟ್ಟಿದ್ದರು. ಅದಕ್ಕೆ ಪೂರಕವಾಗಿ ಇಲ್ಲಿನ ಕೆಲವರನ್ನು ಆಯ್ದು ನಮ್ಮ ಅಜ್ಞಾನದ ಕುರಿತಂತೆ ಭಾಷಣವನ್ನು ಮಾಡಿಸಲಾಗುತ್ತಿತ್ತು. ಬ್ರಿಟಿಷ್ ಅಧಿಕಾರಿಗಳು ಅಂತಹ […]

  Read More

ಕತೆಯಾದವಳು…

ಅವನಿಗೂ ಸರಿಯಾಗಿ ಗೊತ್ತಿರಲಿಲ್ಲ, ಅವನೇಕೆ ಬರೆಯುತ್ತಾನೆಂದು. ಕೆಲವೊಮ್ಮೆ ದುಃಖಕ್ಕೆ, ಯಾರದೋ ಮೇಲಿನ ಸಿಟ್ಟಿಗೆ, ತೀರಾ ಹತಾಶನಾದಾಗ, ಒಳಗಿನ ತುಡಿತವನ್ನು ತಡೆಯಲಾಗದೆ, ಅವಮಾನ, ಅಸಹಾಯಕ ಸ್ಥಿತಿಗಳು ಅವನನ್ನು ಬರವಣಿಗೆಗೆ ನೂಕಿತ್ತೆನ್ನಬಹುದು. ಅದೆಷ್ಟೇ ಪ್ರಯತ್ನಪಟ್ಟರೂ ಅವನ ಬರವಣಿಗೆಯಲ್ಲಿ ಅವನ ವೈಯಕ್ತಿಕ ಬದುಕಿನ ನೆರಳಿನ ತುಣುಕುಗಳು ಗೋಚರವಾಗುವುದನ್ನು ತಪ್ಪಿಸಲು ಸೋಲುತ್ತಲೇ ಇದ್ದ. ಇಲ್ಲಿ ಕತೆ ಲೇಖಕನದ್ದೋ ಅಥವಾ ಕತೆಯೇ ಲೇಖಕನ ಮೇಲೆ ಹಿಡಿತ ಸಾಧಿಸಿ ಬರೆಸಿಕೊಳ್ಳುತ್ತಿತ್ತೊ ನಿಖರವಾಗಿ ಹೇಳುವುದು ಕಷ್ಟ. ಬರವಣಿಗೆ ಖಾಸಗಿತನಕ್ಕೆ ಸಂಬಂಧಿಸಿದ್ದಾ? ಖಾಸಗಿ ಬದುಕಿಗೆ ಸಂಬಂಧಿಸಿದ್ದೇ ಆದಲ್ಲಿ ಬರವಣಿಗೆಗೇಕೆ ಮುದ್ರಣ? […]

  Read More