Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Samaja

Samaja

ಪಾರ್ವತಮ್ಮ ಪಾರ್ಥಿವ ಶರೀರದ ಮೇಲೆ ರಾಷ್ಟ್ರಧ್ವಜ ಬಳಕೆಗೆ ಆಕ್ಷೇಪ: ಕೋರ್ಟ್‌ಗೆ ದೂರು!

ಬೆಂಗಳೂರು: ದಿವಂಗತ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಅಂತಿಮ ಯಾತ್ರೆ ವೇಳೆ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರ ಧ್ವಜ ಹೊಂದಿಸಿರುವುದು ಭಾರತೀಯ ಧ್ವಜ ಕಾಯ್ದೆ ಉಲ್ಲಂಘನೆ ಎಂದು ಆರೋಪಿಸಿ ವಕೀಲ ಚೇತನ್‌ ಎಂಬುವರು 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನು ಆರೋಪಿಗಳನ್ನಾಗಿಸಿ ವಕೀಲ ಚೇತನ್‌ ದೂರು ದಾಖಲಿಸಿದ್ದಾರೆ. ವಿಶ್ವದ ಪ್ರತಿ ರಾಷ್ಟ್ರಕ್ಕೂ ಅದರದ್ದೇ ಆದ ಧ್ವಜ ಕಾಯ್ದೆ ಇದೆ. ಭಾರತೀಯ ಧ್ವಜ ಕಾಯ್ದೆ 5ರ ಪ್ರಕಾರ ರಾಜ್ಯ ಪೊಲೀಸರು, ಮಿಲಿಟರಿ, ಕೇಂದ್ರ ಪ್ಯಾರಾ ಮಿಲಿಟರಿ ಪಡೆಗಳ ಸಿಬ್ಬಂದಿ  ಅಂತ್ಯಕ್ರಿಯೆ ಸಂದರ್ಭದಲ್ಲಿ ಮಾತ್ರ ಧ್ವಜ ಹೊದಿಸಬೇಕು. […]

  Read More

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಕೆರೆಯಲ್ಲಿ ಇಟ್ಟ ಭತ್ತದ ಚೀಲವನ್ನು ತೆಗೆಯಲು ಹೋಗಿ ಭಾರತಿ ಶೆಟ್ಟಿ(42)ಪ್ರಥ್ವಿ(21) ಪ್ರಜ್ನಾ (17) ನೀರಿನಲ್ಲಿ ಮುಳುಗಿ ದಾರುಣ ಸಾವು.

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಕೆರೆಯಲ್ಲಿ ಇಟ್ಟ ಭತ್ತದ ಚೀಲವನ್ನು ತೆಗೆಯಲು ಹೋಗಿ ಭಾರತಿ ಶೆಟ್ಟಿ(42)ಪ್ರಥ್ವಿ(21) ಪ್ರಜ್ನಾ (17) ನೀರಿನಲ್ಲಿ ಮುಳುಗಿ ದಾರುಣ ಸಾವು.

  Read More

ರಾಷ್ಟ್ರಪತಿ ವಿರುದ್ಧ ಕೇಸ್‌‌: ಹುದ್ದೆಯಿಂದ ಕೆಳಗಿಳಿದ ಬೆನ್ನಲ್ಲೇ ಪ್ರಣಬ್‌ ವಿಚಾರಣೆ!

 ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಒಂದು ಕೇಸ್ ದಾಖಲಾಗಿದೆ. ಆ ಕೇಸ್‌ನ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಸಮ್ಮತಿಸಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ‘Turbulent Years 1980-1996’ ಎನ್ನೋ ಪುಸ್ತಕ ಬರೆದಿದ್ದು, ಅದು 2016ರಲ್ಲಿ ಪಬ್ಲಿಷ್‌ ಆಗಿದ್ದು ಎಲ್ಲರಿಗೂ ಗೊತ್ತಿದೆ. ಈ ಪುಸ್ತಕದಲ್ಲಿ ಬಾಬ್ರಿ ಮಸೀದಿ ಧ್ವಂಸ ಸೇರಿದಂತೆ 16 ವರ್ಷಗಳಲ್ಲಿ ನಡೆದ ಹಲವಾರು ವಿಷಯಗಳ ಪ್ರಸ್ತಾಪವಿದೆ. ಅಂತೆಯೇ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುವ ಕೆಲ ವಿಷಯಗಳಿವೆ ಎಂಬ ಆರೋಪ ಕೇಳಿ ಬಂದಿದೆ. ಈ […]

  Read More

ದೇಶಾದ್ಯಂತ ಜಾನುವಾರು ವಧೆ ನಿಷೇಧ: ಕೇಂದ್ರ ಸರ್ಕಾರದ ಆದೇಶ

ದೇಶಾದ್ಯಂತ ಜಾನುವಾರು ವಧೆಯನ್ನು ನಿಷೇಧಿಸಿ ಕೇಂದ್ರ ಪರಿಸರ ಸಚಿವಾಲಯ ಆದೇಶ ಹೊರಡಿಸಿದೆ. ಜಾನುವಾರುಗಳ ಮಾರಾಟದ ಮೇಲೂ ಸರ್ಕಾರ ನಿಯಂತ್ರಣ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಪರಿಸರ ಸಚಿವಾಲಯ ಗೆಜೆಟ್ ನೊಟಿಫಿಕೇಶನ್ ಹೊರಡಿಸಿದೆ. ದೇಶದಲ್ಲಿರುವ ಕಸಾಯಿಖಾನೆಗಳಿಗೆ ಇನ್ಮುಂದೆ ಜಾನುವಾರುಗಳ ಮಾರಾಟವನ್ನು ನಿಷೇಧಿಸಿದ್ದು, ಕೇವಲ ರೈತರಿಗೆ ಮಾತ್ರ ಗೋವುಗಳ ಮಾರಾಟ ಮಾಡಲು ಸರ್ಕಾರ ಅವಕಾಶ ನೀಡಿದೆ. ಹೊಸ ನಿಯಮಗಳ ಪ್ರಕಾರ ಜಾನುವಾರುಗಳನ್ನು ಕೃಷಿ ಚಟುವಟಿಕೆಗಳಿಗೆ ಮಾತ್ರ ಮಾರಾಟ ಮಾಡಬೇಕು. ಕಸಾಯಿಖಾನೆಗಳಿಗೆ ಮಾರಬಾರದು. ಈ ಸಂಬಂಧ ರೈತರು ಲಿಖಿತ ಪೂರ್ವಕ ಅನುಮತಿ ನೀಡಿದರೆ […]

  Read More

ಭಟ್ಕಳದಲ್ಲಿ ಭೀಕರ ಅಪಘಾತ : ಮದುಮಗಳು ಸೇರಿ 7 ಮಂದಿ ದಾರುಣ ಸಾವು

ಭಟ್ಕಳ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಅನಂತವಾಡಿ ಎಂಬಲ್ಲಿ ಗುರುವಾರ ನಸುಕಿನ 1.30 ರ ವೇಳೆಗೆ ಖಾಸಗಿ ಬಸ್‌ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಮಿನಿ ಬಸ್‌ನಲ್ಲಿದ್ದ ಮದುಮಗಳು ಸೇರಿ 7 ಮಂದಿ ದಾರುಣವಾಗಿ ಸಾವನ್ನಪ್ಪಿ,25ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ದುರಂತ ಸಂಭವಿಸಿದೆ. ಶಿರಸಿಯ ದಾಸನಕೊಪ್ಪದಿಂದ ಧರ್ಮಸ್ಥಳಕ್ಕೆ ದಿಬ್ಬಣ ತೆರಳುತ್ತಿದ್ದ ಮಿನಿ ಬಸ್‌ಗೆ ಹೊನ್ನಾವರ ಕಡೆ ತೆರಳುತ್ತಿದ್ದ ಬಸ್‌ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. ಗಂಭೀರ ಸ್ಥಿತಿಯಲ್ಲಿರುವ ಗಾಯಾಳುಗಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಗಾಯಾಳುಗಳನ್ನು ಕುಂದಾಪುರ, ಮುರ್ಡೇಶ್ವರ […]

  Read More

ಮೇಕ್​ ಇನ್​ ಇಂಡಿಯಾ ಯೋಜನೆಗೆ ಒತ್ತು ನೀಡಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಚಿಲ್ಲರೆ ವ್ಯಾಪಾರದಲ್ಲಿ ಶೆ. 100ರಷ್ಟು ವಿದೇಶಿ ನೇರ ಹೂಡಿಕೆಗೆ ಗ್ರೀನ್ ಸಿಗ್ನಲ್ ನೀಡುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಯ ಮತ್ತಷ್ಟು ಪರಿಣಾಮಕಾರಿ ಜಾರಿಗೆ ನಿರ್ಧರಿಸಿದೆ. ಈ ಮೂಲಕ ಮತ್ತಷ್ಟು ಉದ್ಯೋಗ ಸೃಷ್ಟಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಒತ್ತು ನೀಡುತ್ತಿದೆ. ಈಗಾಗಲೇ ಹಲವಾರು ಕಂಪನಿಗಳು ಹೂಡಿಕೆಗೆ ಉತ್ಸುಕವಾಗಿದ್ದು, ಅಮೇಜಾನ್ ಶೇ. 100ರಷ್ಟು ಬಂಡವಾಳ ಹೂಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಭಾರತದ ಆಮದು ಪ್ರಮಾಣಕ್ಕೆ ಕಡಿವಾಣ ಬೀಳಲಿದೆ. ಕಳೆದ ವರ್ಷ ಇ- ವಾಣಿಜ್ಯ ಮಾರುಕಟ್ಟೆ […]

  Read More

ಮಂಗಳೂರು ವಿಮಾನ ಅಪಘಾತ ನಡೆದುಇಂದಿಗೆ ಏಳು ವರ್ಷ ತುಂಬಿದ್ದರೂ ನೋವು ಮಾತ್ರ ಹಾಗೇ ಉಳಿದಿದೆ.

2010ರ ಮೇ 22ರಂದು ನಡೆದಿದ್ದ ಬಜ್ಪೆ ಭೀಕರ ವಿಮಾನ ಅಪಘಾತ ನಡೆದು ಇಂದಿಗೆ 7 ವರ್ಷವಾಗಿದೆ. ಅಂದು ಬೆಳಗ್ಗೆ 6.20ಕ್ಕೆ ದುಬೈಯಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲ್ಯಾಂಡ್ ಆಗುವ ವೇಳೆ ನಿರ್ದಿಷ್ಟ ಮಿತಿಗಿಂತ ಕೆಲ ಮೀಟರ್ ದೂರದಲ್ಲಿಳಿದ ಪರಿಣಾಮ ಪೈಲೆಟ್ ನಿಯಂತ್ರಣ ತಪ್ಪಿ ಕೆಂಜಾರಿನ ಗುಡ್ಡದಿಂದ ಕೆಳ ಜಾರಿ ಅಗ್ನಿ ಆವರಿಸಿ ಸಂಭವಿಸಿದ ದುರ್ಘಟನೆಯಿಂದ ಸಂತ್ರಸ್ತರಾದವರು ಇಂದಿಗೂ ಸುಪ್ರೀಂ ಕೋರ್ಟ್‍ನಲ್ಲಿ ಹೋರಾಡುತ್ತಿದ್ದಾರೆ. ವಾಯು ಅಪಘಾತದ ಪರಿಹಾರ ಕುರಿತು ಅಂತಾರಾಷ್ಟ್ರೀಯ ಒಪ್ಪಂದವಾದ `ಮೋಂಟ್ರಿಯಲ್ ಕನ್ವೆನ್ಷನ್’ನ  ಲೆಕ್ಕಾಚಾರದಂತೆ 75 […]

  Read More

ಮತ್ತೆ ಮೋದಿ ಹವಾ ಶುರುವಾಗುತ್ತೆ ಹುಷಾರ್…!!

               ಮೂರು ವರ್ಷಗಳ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಲು ಬಿಜೆಪಿ ಬೃಹತ್ ಯೋಜನೆಯೊಂದನ್ನು ರೂಪಿಸಿದೆ. ಇದಕ್ಕೆ ”ಮೋದಿ ಹಬ್ಬ” ಎಂದೂ ಕೂಡ ಹೆಸರಿಟ್ಟಿದೆ. ಇದಕ್ಕಾಗಿ ಸಮ್ಮೇಳನವನ್ನು ಆಯೋಜಿಸಿದೆ. ಕಳೆದ ಮೂರು ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮೋದಿ ಹಬ್ಬ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಹೇಳಲಾಗುವುದು. MODI ಅಂದರೆ […]

  Read More

ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಸಿಡಿಲು- ಗೋಪುರಕ್ಕೆ ಅಲ್ಪ ಪ್ರಮಾಣದ ಹಾನಿ

ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದು ಅಲ್ಪ ಪ್ರಮಾಣದ ಹಾನಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಸುತ್ತಮುತ್ತಲಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು,ಮುಂಚು ಸಹಿತ ತುಂತುರ ಮಳೆಯಾಗುತ್ತಿದ್ದು ಅಲ್ಲಲ್ಲಿ ಸಿಡಿಲು ಹೊಡಿದಿದೆ. ಸಿಡಿಲಿನ ತೀವ್ರತೆಗೆ ಗೋಪುರ ಒಂದು ಭಾಗದ ಸಿಮೆಂಟ್ ತುಂಡು ಕಿತ್ತು ಹೋಗಿದೆ. ಇನ್ನುಳಿದಂತೆ ಗೋಪುರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಕುಕ್ಕೆ ಸುತ್ತಮುತ್ತಲಿನ ಊರಿನ ಕೆಲವೊಂದು ಮನೆಗಳಿಗೂ ಸಿಡಿಲು ಬಡಿದಿದ್ದು ಅಲ್ಪ ಪ್ರಮಾಣದ ಹಾನಿಯಾಗಿದೆ

  Read More

ನಾಗದೇವರ ವೈಶಿಷ್ಟ್ಯ ಮತ್ತು ಆರಾಧನೆಗಳ ಬಗ್ಗೆ ತಿಳಿಸುತ್ತೆ ಈ ಡಾಕ್ಯುಮೆಂಟರಿ…ಅದುವೇ “ನಾಗಮಂಡಲೋತ್ಸವ ಡಾಕ್ಯುಮೆಂಟರಿ”…ನೀವೂ ನೋಡಿ…

  Read More