Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Health siri > ರೇಶಿಮೆಯಂತಹ ಕೂದಲಿನ ಆರೈಕೆಗೆ ಟಿಪ್ಸುಗಳು..

ರೇಶಿಮೆಯಂತಹ ಕೂದಲಿನ ಆರೈಕೆಗೆ ಟಿಪ್ಸುಗಳು..

Beautiful-Black-hairsಹೇನು ಮತ್ತು ಸೀರು
ಕೂದಲಿನಲ್ಲಿ ಹೇನು ಹಾಗೂ ಸೀರು ಸೇರದಂತೆ ತಡೆಯಲು ತಲೆಯಲ್ಲಿ ಕೊಳೆ ಸೇರಲು ಬಿಡದೆ ವಾರದಲ್ಲಿ 3-4 ಬಾರಿ ಕೂದಲನ್ನು ಸ್ವಚ್ಛ ಮಾಡಿ. ಬೇರೆಯವರ ಬಾಚಣಿಗೆ ಮತ್ತು ಬ್ರಶ್ ಉಪಯೋಗಿಸಬೇಡಿ. ನಿಮ್ಮ ಬಾಚಣಿಗೆಯನ್ನು ನೀವು ಒಬ್ಬರೇ ಉಪಯೋಗಿಸುವುದು ಒಳಿತು. ಆಗಾಗ್ಗೆ ಬಾಚಣಿಗೆಗಳನ್ನು ತೊಳೆದಿಡವುದು ಒಳಿತು.
ಸ್ವಲ್ಪ ಶುಂಠಿ ಹಾಗೂ ನೀಂಬೆರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಬೆಳಿಗ್ಗೆ ಸ್ನಾನ ಮಾಡಿ. ನಂತರ ತೆಳು ಹಲ್ಲುಗಳಿರುವ ಬಾಚಣಿಗೆಯಿಂದ ಕೂದಲನ್ನು ಬಾಚಿಕೊಂಡಾಗ ಸತ್ತು ಹೋದ ಹೇನು ಮತ್ತು ಸೀರು ಸುಲಭಬಾಗಿ ಕೂದಲಿನಿಂದ ಹೊರ ತೆಗೆಯಲು ಸಹಾಯಕವಾಗುತ್ತದೆ.
ಕೂದಲನ್ನು ಕಪ್ಪು, ದಟ್ಟ ಮತ್ತು ನೀಳವಾಗಿಸಲು
 ನಿಂಬೆ ಮತ್ತು ನೆಲ್ಲಿಕಾಯಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಪ್ರತಿವಾರ ಅಥವಾ ಕದಿನೈದು ದಿನಗಳಿಗೊಮ್ಮೆ ತಲೆಗೆ ಹಚ್ಚಿಕೊಳ್ಳುತ್ತಾ ಮಾಲಿಶ್ ಮಾಡಿ. ಕೂದಲು ಕಪ್ಪಗೆ ದಟ್ಟವಾಗಿ ನೀಳವಾಗುತ್ತದೆ.
 ಎಳ್ಳಿನ ಗಿಡದ ಎಲೆಗಳನ್ನು ರುಬ್ಬಿ ಕೂದಲಿಗೆ ಹಚ್ಚಿ ಅರ್ಧ ಗಂಟೆ ನಂತರ ಕೂದಲನ್ನು ತೊಳೆಯಿರಿ.
ಹೀಗೆ ಮಹಿಳೆಯರು ಪ್ರತಿ ದಿನ ಅಲ್ಪ ಕಾಲ ತಲೆಗೂದಲಿನ ಸಂರಕ್ಷಣೆಯತ್ತ ಗಮನ ನೀಡಿದರೆ ಕೂದಲು ಎಲ್ಲರನ್ನೂ ಆಕರ್ಷಿಸುತ್ತದೆ.

ಕೂದಲಿಗೆ ವಿಶೇಷ ಆರೈಕೆ
ನೀಟಾದ, ನೀಳವಾದ ದಟ್ಟ ಕೇಶರಾಶಿ ಯಾವುದೇ ಮುಖಕ್ಕೂ ಸೌಂದರ್ಯ ತಂದು ಕೊಡುತ್ತದೆ. ಕೂದಲು ಉದ್ದವಾಗಿ ಬೆಳೆಯುವುದು ಮತ್ತು ರೇಷ್ಮೆಯಂತೆ ಹೊಳೆಯುವುದು ಕೂದಲಿನ ಆರೋಗ್ಯವನ್ನು ಸೂಚಿಸುತ್ತದೆ. ನೀಳವಾದ ಕೇಶರಾಶಿ ಸ್ತ್ರೀಯರಿಗೆ ಅಚ್ಚುಮೆಚ್ಚು. ಇತ್ತೀಚೆಗೆ ಪುರುಷರೂ (ಪಿಳ್ಳಿ ಜುಟ್ಟಿನ) ಹೇರ್ ಸ್ಟೈಲ್ ಅನುಸರಿಸುತ್ತಿದ್ದಾರೆ. (ಇನ್ನ ಮುಂದೆ ಪುರುಷರಲ್ಲೂ ಮೊಗ್ಗಿನ ಜಡೆ ಬಂದರೂ ಬರಬಹುದು. ಯಾರಿಗೆ ಗೊತ್ತು? ಪ್ರಾಚೀನ ಕವಿಗಳಿಂದ ನವ್ಯ ಕವಿಗಳವರೆಗೂ ಹೆಣ್ಣಿನ ಜಡೆ, ಹಾರಾಡುವ ಮುಂಗುರಳನ್ನು ವರ್ಣಿಸಿದವರಿದ್ದಾರೆ.)
ಕೂದಲಿನ ಹೊಳೆಯುವ ಕಪ್ಪು ಬಣ್ಣ, ಉದ್ದ ಮುಂತಾದ ಗುಣಗಳು ಮಾರುಕಟ್ಟೆಯಲ್ಲಿ ದೊರೆಯುವ ಎಣ್ಣೆ ಅಥವಾ ಶ್ಯಾಂಪೂ ಹಚ್ಚಿಕೊಳ್ಳುವುದರಿಂದ ಬರುವುದಿಲ್ಲ. ಇದು ಅನುವಂಶೀಯ ಗುಣ. ಆದರೂ ಕೂದಲನ್ನು ತೊಳೆದು ಶುಚಿ ಮಾಡಿ ಆರೊಗ್ಯಕರ ಸ್ಥೀತಿಯಲ್ಲಿರುವಂತೆ ನೋಡಿಕೊಳ್ಳ ಬೇಕಾದ್ದು ಒಳ್ಳೆಯದು. ಸಮತೋಲನ ಆಹಾರದ ಸೇವನೆಯಿಂದ ಕೂದಲಿಗೆ ಆಂತರಿಕ ಪೋಷಣೆ ದೊರೆಯುತ್ತದೆ. ವಿಶೇಷವಾಗಿ ಕ್ಯಾರೆಟ್, ಮೊಳಕೆ ಕಾಳು, ಹಸಿ ತರಕಾರಿ ಸೇವಿಸುವುದರಿಂದ ಕೂದಲು ಮತ್ತು ಚರ್ಮದ ಹೊಳಪು ಹೆಚ್ಚುತ್ತದೆ.
1. ತಲೆಗೆ ಶ್ಯಾಂಪೂ ಬಳಸುವ ಮುನ್ನ ಕೂದಲನ್ನು ಚೆನ್ನಾಗಿ ಬ್ರಶ್ ಮಾಡಿದರೆ ತಲೆಯ ಬುಡದಲ್ಲಿ ಸೇರಿರುವ ಧೂಳಿನ ಕಣಗಳು ಹೊರ ಹೋಗುತ್ತದೆ.
2. ಹೊಟ್ಟು ಆದಲ್ಲಿ ನಿಂಬೆಹಣ್ಣಿನ ರಸ ಅಥವಾ ಹುಳಿ ಮೊಸರಿನಿಂದ ತಲೆಯನ್ನು ಮಾಲಿಶ್ ಮಾಡಿ, ಒಂದು ಗಂಟೆಯ ನಂತರ ಸ್ನಾನ ಮಾಡಿ.
3. ಕೂದಲು ಹೆಚ್ಚು ಹರಡಿಕೊಂಡಂತೆ ಕಾಣಲು ಕೂದಲನ್ನು ವಿರುದ್ಧ ದಿಕ್ಕಿನಲ್ಲಿ ಬಾಚಿರಿ.
4. ಆಗಾಗ್ಗೆ ಕೂದಲಿಗೆ ಬಾದಾಮಿ ಎಣ್ಣೆ ಹಚ್ಚುತ್ತಿದ್ದರೆ ಕೆಲವು ದಿನಗಳಲ್ಲಿಯೇ ಕೂದಲಿನ ಆರೋಗ್ಯ ಹೆಚ್ಚುತ್ತದೆ.
5. ಎಲ್ಲ ರೀತಿಯ ಕುದಲನ್ನು ವಾರಕ್ಕೆ ಒಂದು ಸಲ ಎಣ್ಣೆ ಹಚ್ಚಿ ಸ್ನಾನ ಮಾಡಿ ಡಣಗಿಸಿರೆ.

ಎಣ್ಣೆ ಕೂದಲು
ಎಣ್ಣೆ ಕೂದಲು ಹೆಚ್ಚು ಜಿಡ್ಡಾಗಿ ಬೇಗನೆ ಕೊಳಕಾಗುತ್ತದೆ. ಇಂತಹ ಕೂದಲಿರುವವರು ವಾರಕ್ಕೆ ಮೂರು ಸಲ ತಲೆ ಸ್ನಾನ ಮಾಡಬೇಕು. ಕರಿದ ತಿಂಡಿ ಜಾಸ್ತಿ ಸೇವಿಸಬಾರದು. ಕಡಲೆ ಹಿಟ್ಟಿಗೆ ನಿಂಬೆರಸ ಬೆರೆಸಿ ತಲೆ ಸ್ನಾನ ಮಾಡುವುದರಿಂದ ಜಿಡ್ಡಿನ ಅಂಶ ಕಡಿಮೆಯಾಗುತ್ತದೆ.
ಒಣ ಕೂದಲು
 ತೈಲಗ್ರಂಥಿಗಳ ನಿಷ್ಕ್ರಯತೆಯಿಂದ ಒಣಕೂದಲು ಉಂಟಾಗುತ್ತದೆ. ಇಂತಹ ಕೂದಲುಗಳತ್ತ ಗಮನ ಕೊಡದಿದ್ದಲ್ಲಿ ತಲೆಯಲ್ಲಿ ಹೊಟ್ಟು ಉಂಟಾಗುತ್ತದೆ. ಇದಕ್ಕೆ ಚಿಕಿತ್ಸೆಯೆಂದರೆ ಎಣ್ಣೆ ಹಚ್ಚುವುದು.
 ಎಣ್ಣೆ ಮತ್ತು ಒಂದು ಮೊಟ್ಟೆ ತಿರುಳು ಬೆರೆಸಿ ಕೂದಲಿಗೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ ನಂತರ ತಲೆ ಸ್ನಾನ ಮಾಡಿ.
 ಕೂದಲಿಗೆ ಹರಳೆಣ್ಣೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ಕೂದಲು ಸುಣುಪಾಗುತ್ತದೆ. ತಲೆ ಹೊಟ್ಟು ದೂರವಾಗುತ್ತದೆ. ಶರೀರ ತಂಪಾಗುತ್ತದೆ ಅಲ್ಲದೆ ಕಣ್ಣುಗಳು ತಂಪಾಗಿರುತ್ತದೆ.
ಕೂದಲಿಗೆ ಹೊಳಪು
ಕೂದಲು ಕಾಂತಿಯುತವಾಗಿ, ನುಣುಪಾಗಿ ನೀಳವಾಗಿ ಕಾಣಲು ಶ್ಯಾಂಪೂವಿನಿಂದ ಅಥವಾ ಸೀಗೆಕಾಯಿ ಪುಡಿ ಹಾಕಿ ತಲೆ ಸ್ನಾನ ಮಾಡಿ, ಕೊನೆಯಲ್ಲಿ ಎರಡು ಚಮಚ ನಿಂಬೆರಸದೊಡನೆ ಎರಡು ಲೀಟರ್ ತಣ್ಣೀರು ಸೇರಿಸಿ ತಲೆಕೂದಲನ್ನು ತೊಳೆಯಿರಿ. ಕೂದಲು ಮಿರಮಿರನೆ ಮಿಂಚುತ್ತಿರುತ್ತದೆ.

Leave a Reply