Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema > ಉಪೇಂದ್ರ ಮತ್ತೆ ಬಾ…ಚಿತ್ರ ವಿಮರ್ಶೆ

ಉಪೇಂದ್ರ ಮತ್ತೆ ಬಾ…ಚಿತ್ರ ವಿಮರ್ಶೆ

– ಸಂದೀಪ್ ಶೆಟ್ಟಿ ಹೆಗ್ಗದ್ದೆ…

ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ‘ಉಪೇಂದ್ರ ಮತ್ತೆ ಬಾ’ ಚಿತ್ರ ಇಂದು ಬಿಡುಗಡೆಯಾಗಿದ್ದು, ರಿಯಲ್ ಸ್ಟಾರ್ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಚಿತ್ರ ತೆಲುಗಿನ ‘ಸೊಗ್ಗಾಡೆ ಚಿನ್ನಿನಾಯನ’ ಚಿತ್ರದ ರೀಮೇಕ್ ಆದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ, ಉಪ್ಪಿಯವರ ಅಭಿನಯಕ್ಕೆ ಪೂರಕವಾಗಿರುವ ಡೈಲಾಗ್‍ಗಳನ್ನು ಪೋಣಿಸಿ ಕಥೆ ಹೆಣೆದಿರುವ ನಿರ್ದೇಶಕ ಲೋಕಿ ಒಂದು ಅರ್ಥದಲ್ಲಿ ಗೆದ್ದಿದ್ದಾರೆ ಎನ್ನಬಹುದು.

ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಕೊಡಗಿನ ಬೆಡಗಿ, ಚಂದನವನದಲ್ಲಿ ಈ ಹಿಂದೆ ಹಿಟ್ ಚಿತ್ರಗಳನ್ನು ನೀಡಿದ್ದ ಪ್ರೇಮಾ ಅವರು ಮತ್ತೆ ತೆರೆಮೇಲೆ ಬಂದಿರುವುದರ ಜೊತೆಗೆ ಉಪ್ಪಿ ಜೊತೆ ಕಚಗುಳಿಯ ಅಭಿನಯವನ್ನ ತೋರಿರುವುದೇ ಆಗಿದೆ ಎಂದರೆ ತಪ್ಪಿಲ್ಲ.

ಕೌಟಂಬಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರೇಮ ಪ್ರಬುದ್ಧವಾದ ಪಾತ್ರ ನಿರ್ವಹಿಸಿದರೆ, ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ನಾಚಿಕೆ ಬಿಟ್ಟು ಪಡ್ಡೆ ಹುಡುಗರಿಗಾಗಿಯೇ ಅತ್ತ ಡಬಲ್ ಮೀನಿಂಗು ಅಲ್ಲದೇ, ಇತ್ತ ಕಥೆಗೂ ಅವಶ್ಯಕವಾಗಿರುವ ರಸಿಕತೆಯ ಡೈಲಾಗ್‍ಗಳ ಮಳೆಯನ್ನೇ ಸುರಿಸಿದ್ದಾರೆ.

ದ್ವಿಪಾತ್ರದಲ್ಲಿ ಮಿಂಚುವ ಉಪ್ಪಿ, ತಾಯಿ ಹಾಗೂ ಹೆಂಡತಿಯ ಪಾತ್ರದಲ್ಲಿ ಬೀಗುವ ಪ್ರೇಮಾ, ಕಾಮಿಡಿಯಲ್ಲಿ ಸಾಧುಕೋಕಿಲಾ, ನಾಯಕಿಯಾಗಿ ಶೃತಿಹರಿಹರನ್ , ಹರ್ಷಿಕಾ ಪೂರ್ಣಚ್ಚಾ, ದೀಪ್ತಿ, ವಿಲನ್‍ಗಳಾಗಿ ಅವಿನಾಶ್, ವಸಿಷ್ಠಾ, ಹೀಗೆ ಬಂದು ಹಾಗೆ ಹೋಗುವ ಚಾಂದನಿ ಹೀಗೆ ಎಲ್ಲರ ಅಭಿನಯ ಮೆಚ್ಚುಂತಿದೆ.

ಚಿತ್ರ ಭರ್ಜರಿಯಾಗಿ ಚಿತ್ರೀಕರಣವಾಗಿದ್ದು, ಶ್ರೀ ಧರ್ ವಿ. ಸಂಭ್ರಮ್ ಅವರ ತೋಳ್ತೆಕ್ಕೆಯಿಂದ ಮೂಡಿಬಂದಿರುವ ಒಂದೆರಡು ಹಾಡುಗಳು ಮತ್ತೆ ಕಿವಿಯಲ್ಲಿ ಗುನುಗುನಿಸುತ್ತವೆ.

ಒಂದು ದೇವಸ್ಥಾನ, ಅಲ್ಲಿಯ ದೇವರ ಚಿನ್ನಗಳನ್ನು ಹೊಡೆಯುವ ಬಂಧುಗಳ ಕುತಂತ್ರ, ಅಪ್ಪನನ್ನು ಕಳೆದುಕೊಂಡ ಮಗನನ್ನು ತಾಯಿ ಸಾಕಿ ಬೆಳೆಸಿದ ಪರಿ, ಮತ್ತೆ ಹೆಂಡತಿಯ ಕೂಗಿಗೆ ನರಕದಿಂದ ಧರೆಗಾಗಮಿಸಿ, ಮಗನ ಸರಿ ಮಾಡುವ ಅಪ್ಪ ಇದೆಲ್ಲಾ ಚಿತ್ರಕಥೆಯ ಒಂದೆಳೆ…

ಪೂರ್ಣ ಕಥೆಯೇನು!?, ಉಪ್ಪಿ-ಪ್ರೇಮಾ ಕಾಂಬಿನೇಷನ್ ತೆರೆ ಮೇಲೆ ಹೇಗೆ ಮೂಡಿದೆ ಇವನ್ನೆಲ್ಲಾ ನೋಡಬೇಕೆಂದರೆ ನೀವೂ ಚಿತ್ರಮಂದಿರದಲ್ಲೇ ಹೋಗಿ ನೋಡಬೇಕು…

ಇನ್ನೂ ಹೆಚ್ಚಿನ ಸಿನಿಮಾ ವಿಮರ್ಶೆ ಮತ್ತು ಹೊಸ ಸಿನಿಮಾಗಳ ಅಪ್ಡೇಟ್‍ಗಳಿಗಾಗಿ ಸಿರಿ ಮೊಬೈಲ್ ಟಿ.ವಿ ಯನ್ನು ನೋಡ್ತಾ ಇರಿ…
ವಂದನೆಗಳು.

ಸಿರಿ ರೇಟಿಂಗ್
3.5/5

– ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಿರಿ ಸಂಪಾದಕ

Leave a Reply