Call : +91 96119 76709     website.siri@gmail.com

SR High Tech Vision Presents

Siri Soundarya

Mane Manada Kannada Monthly Magazine

Siri Soundarya > Cinema > ಚಿತ್ರ ವಿಮರ್ಶೆ- ಉಪ್ಪು ಹುಳಿ ಖಾರ…

ಚಿತ್ರ ವಿಮರ್ಶೆ- ಉಪ್ಪು ಹುಳಿ ಖಾರ…

– ಸಂದೀಪ್ ಶೆಟ್ಟಿ ಹೆಗ್ಗದ್ದೆ

ಸ್ಯಾಂಡಲ್‍ವುಡ್ ಸಂತೆಯಲ್ಲಿ ಪ್ರತಿವಾರ ಒಂದಿಷ್ಟು ಸಿನಿಮಾಗಳು ಎಗ್ಗಿಲ್ಲದೇ ಸೆಟ್ಟೇರುತ್ತಲೇ ಇವೆ, ಜೊತೆ ಜೊತೆಗೆ ಒಂದೇ ದಿನ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಅದರಲ್ಲಿ ಹೊಸಬರ ಚಿತ್ರಕ್ಕಂತೂ ಭರವೇ ಇಲ್ಲ. ಅಂತೆಯೇ ಈ ವಾರವು ಹೊಸಬರ ಚಿತ್ರವೊಂದು ಬಿಡುಗಡೆಯಾಗಿ ಪ್ರೇಕ್ಷಕನಿಂದ ಒಳ್ಳೆಯ ರೆಸ್ಫಾನ್ಸ್ ಬಾಚಿಕೊಂಡಿದೆ. ಅದುವೆ ಉಪ್ಪು ಹುಳಿ ಖಾರ…

ಚಿತ್ರದ ಟೈಟಲ್ಲೇ ಹೇಳುವಂತೆ ಚಿತ್ರ ನೋಡಿ ಹೊರಗೆ ಬಂದಾಗ ಇದರಲ್ಲಿ ಉಪ್ಪು-ಹುಳಿ-ಖಾರ ಇವು ಮೂರರ ಸಮಾನ ಮಿಶ್ರಣ ಇದೆ ಮತ್ತು ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪ್ರೇಕ್ಷಕನ ಆಸೆ-ಆಕಾಂಕ್ಷೆಗಳನ್ನು ಅರಿತು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ ಎನಿಸುತ್ತದೆ.

ಇದೊಂಥರ ಡಾರ್ಕ ಕಾಮಿಡಿ ಚಿತ್ರ. ಪಾತ್ರಗಳ ತೊಳಲಾಟ ಇದರಲ್ಲಿದೆ, ಮೂವರು ನಾಯಕ ಮತ್ತು ನಾಯಕಿಯರ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶದ ಕಥೆ ಅದ್ಭುತ ಅಭಿನಯದಲ್ಲಿ ಮೂಡಿ ಬಂದಿದೆ.

ಸಿನಿಮಾದಲ್ಲಿ ಮಾಲಾಶ್ರೀ ಖಡಕ್ ಆಗಿಯೂ ಹಾಸ್ಯಮಯವಾಗಿಯೂ ಬಂದು ಬಂದು ಹೋಗುತ್ತಿದ್ದರೆ, ನಟ ಧನು, ಶಶಿ, ಶರತ್, ಬಿಗ್ ಬಾಸ್ ಹುಡುಗಿ ಜಯಶ್ರೀ, ಅನುಶ್ರೀ, ಇವರೆಲ್ಲರ ಸಂಗಮದÀ ಅಭಿನಯಗಳು ಮನಮುಟ್ಟುವಂತಿದೆ.

ಇನ್ನು ಹಾಡುಗಳ ವಿಚಾರಕ್ಕೆ ಬಂದರೆ, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಸಾಧುಕೋಕಿಲ ಒಂದೊಂದು ಹಾಡುಗಳನ್ನು ಹಾಡಿದ್ದು, ಅವುಗಳ ಚಿತ್ರೀಕರಣವಂತೂ ಬೊಂಬಾಟ್ ಎನ್ನಬಹುದು.

ಒಟ್ಟಿನಲ್ಲಿ ಉಪ್ಪು,ಹುಳಿ ಖಾರ ಜೀವನದಲ್ಲೂ ಹಿತಮಿತವಾಗಿ ಸಮತೋಲನದಲ್ಲಿ ಇರಬೇಕು, ಯಾವುದೇ ಒಂದು ಹೆಚ್ಚಾದರೂ ಸಮಸ್ಯೆ ಇದಿರಾಗುತ್ತದೆ. ತಮ್ಮದೇ ಸಮಸ್ಯೆಯಿಂದಾಗಿ ತಪ್ಪು ಮಾರ್ಗಕ್ಕೆ ಸಾಗುವ ಯುವಕರನ್ನು ಸರಿದಾರಿಗೆ ತರುವ ಕಥೆಯೇ ಚಿತ್ರದ ಒಂದೆಳೆ.

ಸಿನಿಮಾಟೋಗ್ರಫಿ, ನಿರ್ದೇಶನ, ಅಭಿನಯ, ಸಂಗೀತ, ಎಲ್ಲವೂ ಪ್ರೇಕ್ಷಕನಿಗೆ ಮನರಂಜಾನಾಭರಿತವಾಗಿದ್ದು, ಹೊಸಬರ, ಹೊಸಬಗೆಯ ಪರಿಪೂರ್ಣ ಸಿನಿಮಾವಾಗಿರುವ ಉಪ್ಪು ಹುಳಿ ಖಾರದ ಹದವನ್ನು ಪೂರ್ಣಸವಿಯಬೇಕಾದರೆ ಒಮ್ಮೆ ಚಿತ್ರಮಂದಿರದಲ್ಲೇ ಹೋಗಿ ನೀವು ನೋಡಬೇಕು

 

ಸಿರಿ ರೇಟಿಂಗ್
3.5/5

– ಸಂದೀಪ್ ಶೆಟ್ಟಿ ಹೆಗ್ಗದ್ದೆ
ಸಿರಿ ಸಂಪಾದಕ

 

Leave a Reply